







ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಹಾಗೂ ಮಾಯಿದೆ ದೇವುಸ್ ಚರ್ಚ್ ನ ವೈಸಿಎಸ್ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ಆ.2 ರಂದು ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಮುಖ್ಯ ದ್ವಾರದ ಬಳಿ ನೆರವೇರಿತು.


ಫಿಲೋಮಿನಾ ಕಾಲೇಜಿನ ಮುಖ್ಯ ದ್ವಾರದ ಎದುರಿನ ರಸ್ತೆ ಡಿವೈಡರ್ ನಲ್ಲಿ ಅತಿಥಿಗಳಾದ ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಂ|ಮ್ಯಾಕ್ಸಿಂ ಡಿ’ಸೋಜ, ಮಾಯಿದೆ ದೇವುಸ್ ಚರ್ಚ್ ಸಹಾಯಕ ಧರ್ಮಗುರು ವಂ|ಮರ್ವಿನ್ ಪ್ರವೀಣ್ ಲೋಬೊ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ರೋಶನ್ ಲಸ್ರಾದೋ, ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರೊ|ಝೇವಿಯರ್ ಡಿ’ಸೋಜ, ವಲಯ ಸೇನಾನಿ ಸುಂದರ್ ರೈ ಬಲ್ಕಾಡಿರವರು ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು.



ಈ ಸಂದರ್ಭದಲ್ಲಿ ಶಿಕ್ಷಕಿ ತನುಜಾ ಝೇವಿಯರ್, ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷೆ ಆಶಾ ಮರಿಯಾ ರೆಬೆಲ್ಲೋ, ಕಾರ್ಯದರ್ಶಿ ಸಂಧ್ಯಾ ಬೈಲಾಡಿ, ಪೂರ್ವಾಧ್ಯಕ್ಷ ಭಾಸ್ಕರ ಕೋಡಿಂಬಾಳ, ಮಾಯಿದೆ ದೇವುಸ್ ಚರ್ಚ್ ವೈಸಿಎಸ್ ಅಧ್ಯಕ್ಷ ಹೆರಾನ್ ಶೆರಾ, ಕಾರ್ಯದರ್ಶಿ ಅವಿಲ್ ಪಸನ್ನ ಹಾಗೂ ಸದಸ್ಯರು ಉಪಸ್ಥಿತರಿದ್ದರು.










