ಆ.7: ಸುಳ್ಯಪದವು ಸರ್ವೋದಯ ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ, ಶಾಲಾ ಬಸ್ ಗೆ ಚಾಲನೆ,ಪೋಷಕರ ಸಭೆ

0

ಬಡಗನ್ನೂರುಃ ಸರ್ವೋದಯ ವಿದ್ಯಾಸಂಸ್ಥೆಯ ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಸೃಜನಾತ್ಮಕ ಚಿಂತನೆಯನ್ನು ಮೂಡಿಸುವುದಕ್ಕಾಗಿ MEDALLIA Pvt Ltd ಇವರ CSR ಅನುದಾನವನ್ನು ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ (R) ಇವರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗಾಗಿ 90 ವರ್ಕಿಂಗ್ ಮಾಡೆಲ್ ಒಳಗೊಂಡ ವಿಜ್ಞಾನ ಪ್ರಯೋಗಾಲಯ ಮತ್ತು ಕರ್ನಾಟಕ ಬ್ಯಾಂಕ್ ಇವರ CSR ಅನುದಾನದಿಂದ ಶಾಲಾ ವಿದ್ಯಾರ್ಥಿಗಳಿಗೆ ನೂತನ ಶಾಲಾ ವಾಹನದ ಕೊಡುಗೆ ಹಾಗೂ ತುಳುನಾಡು ಸಂಸ್ಕೃತಿಯನ್ನು ನೆನಪಿಸಿ ಮುಂದಿನ ಜನಸಮುದಾಯಕ್ಕೆ ತಿಳಿಯಪಡಿಸುವ ಉದ್ದೇಶದಿಂದ ಆಚರಿಸುತ್ತಿರುವ ವಿಶೇಷ ಕಾರ್ಯಕ್ರಮ ಆಟಿಡೊಂಜಿ ಲೇಸ್ ಕಾರ್ಯಕ್ರಮ ಆ.7 ರಂದು ಪೂರ್ವಾಹ್ನ ಗಂ 10.30 ಕ್ಕೆ ಸುಳ್ಳಪದವು ಸರ್ವೋದಯ ಸಭಾಂಗಣ ನಡೆಯಲಿದೆ.
ಕಾರ್ಯಕ್ರಮವು ಸರ್ವೋದಯ ವಿದ್ಯಾಸಂಸ್ಥೆಗಳ ಅಧ್ಯಕ್ಷ ಶಿವರಾಮ ಎಚ್ ಡಿ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಪುತ್ತೂರು ವಕೀಲರಾದ ಹರಿಣಾಕ್ಷಿ ಜೆ ರೈ, ಆಟಿಡೊಂಜಿ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.
ಪುತ್ತೂರು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಅಮೃತಕಲಾ ಹಾಗೂ ಪುತ್ತೂರು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ (ರಿ) ನ ವ್ಯವಸ್ಥಾಪಕ ನಿರ್ದೇಶಕ ಶ್ರೀಶ ಭಟ್, ರವರುಗಳು ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ ಮಾಡಲಿದ್ದಾರೆ

ಕರ್ನಾಟಕ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಾ ಬಿ ಎಸ್,ಮಂಗಳೂರು ಕರ್ನಾಟಕ ಬ್ಯಾಂಕಿನ KGM ವಿಶ್ವನಾಥ, ಈಶ್ವರಮಂಗಲ ಕರ್ನಾಟಕ ಬ್ಯಾಂಕಿನ ಶಾಖಾಧಿಕಾರಿ ಕೃಷ್ಣ ಕೆ, ಹಾಗೂ ಸರ್ವೋದಯ ವಿದ್ಯಾಸಂಸ್ಥೆಗಳ ಸಂಚಾಲಕ ಮಹದೇವ ಭಟ್ ನೂತನ ಶಾಲಾ ಬಸ್ ಹಸ್ತಾಂತರ ಮಾಡಲಿದ್ದಾರೆ
ಈ ಕಾರ್ಯಕ್ರಮದಲ್ಲಿ ಶಿಕ್ಷಣಾಭಿಮಾನಿಗಳಾದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here