ಪರ್ಲಡ್ಕ ಶಿವಪೇಟೆ ವಿವೇಕಾನಂದ ಶಿಶುಮಂದಿರದಲ್ಲಿ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ

0

ಪುತ್ತೂರು: ಸ್ತೋತ್ರಗಳ ರಾಜನೆಂದೇ ಕರೆಯಲ್ಪಡುವ ಶ್ರೀವಿಷ್ಣುಸಹಸ್ರನಾಮವು ಭೀಷ್ಮ ಪಿತಾಮಹರಿಂದ ಧರ್ಮರಾಯನಿಗೆ ಉಪದೇಶಿಸಲ್ಪಟ್ಟ ಸ್ತೋತ್ರವಾಗಿದೆ. ಈ ಪವಿತ್ರ ಶ್ರೀವಿಷ್ಣು ಸಹಸ್ರನಾಮ ಪಾರಾಯಣದ 20ನೇ ಸರಣಿಯು ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಸಮಿತಿ ಪರ್ಲಡ್ಕ ಇದರ ಆಶ್ರಯದಲ್ಲಿ ಗುರುಗಳಾದ ವೇ.ಮೂ ಮಂಜುಳಗಿರಿ ವೆಂಕಟರಮಣ ಭಟ್ಟ ಇವರ ಮಾರ್ಗದರ್ಶನದಲ್ಲಿ ಆ.8ರಂದು ಪರ್ಲಡ್ಕ ವಿವೇಕಾನಂದ ಶಿಶುಮಂದಿರದಲ್ಲಿ ನಡೆಯಿತು.

ಗುರುಗಳಾದ ಮಂಜುಳಗಿರಿ ವೆಂಕಟರಮಣ ಭಟ್ಟರವರು ಮಾತನಾಡಿ ಮನಸ್ಸಿಗೆ ಶಾಂತಿ ನೆಮ್ಮದಿ ಹಾಗೂ ಕಷ್ಟಗಳನ್ನು ಪರಿಹರಿಸು ಸ್ತೋತ್ರವೇ ಶ್ರೀ ವಿಷ್ಣುಸಹಸ್ರನಾಮ. ಇದೊಂದು ಶಿಶುಮಂದಿರಕ್ಕೆ ಶಕ್ತಿ ಕೊಡುವ ಕಾರ್ಯಕ್ರಮವಾಗಿದೆ ಎಂದರು. ಪಾರಾಯಣದ ಜೊತೆಗೆ ಶಿಶುಮಂದಿರದ ಮಕ್ಕಳು ನೈಮಿತ್ತಿಕ ಶ್ಲೋಕ, ಅಭಿನಯಗೀತೆ, ಚುಟುಕುಗಳು, ದೋಹೆ, ಮಂಕುತಿಮ್ಮನ ಕಗ್ಗ, ಸರ್ವಜ್ಞನ ವಚನ, ಅಮೃತಬಿಂದು, ಸುಭಾಷಿತ ಶ್ಲೋಕಗಳನ್ನು ಹೇಳಿದರು. ಕಾರ್ಯಕ್ರಮದಲ್ಲಿ ಪ್ರೊ. ಬಿ.ವಿ ಅರ್ತಿಕಜೆಯವರು ಶುಭಹಾರೈಸಿದರು. ಪಾರಾಯಣದ ಬಳಿಕ ಮಂಗಳಾರತಿ ಹಾಗೂ ಪ್ರಸಾದ ವಿತರಿಸಲಾಯಿತು. ಸುಮಾರು ೧೦೦ಕ್ಕೂ ಮಿಕ್ಕಿ ಜನರು ಆಗಮಿಸಿದ್ದು ಶ್ರೀವಿಷ್ಣು ಸಹಸ್ರ ನಾಮ ಪಾರಾಯಣದ ಮಹತ್ವವನ್ನು ತಿಳಿದುಕೊಂಡರು.

ಶಿಶುಮಂದಿರದ ಆಡಳಿತ ಮಂಡಳಿಯ ಸದಸ್ಯ ಅಶೋಕ್ ಕುಮಾರ್ ಬಲ್ನಾಡು ದಂಪತಿ ಎಲ್ಲರ ಪರವಾಗಿ ಸಂಕಲ್ಪಕ್ಕೆ ಕುಳಿತರು. ಗುರುಗಳಾದ ಮಂಜುಳಗಿರಿ ವೆಂಕಟರಮಣ ಭಟ್ಟ ದಂಪತಿಗಳನ್ನು ಹಾಗೂ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣದ ಸಮಿತಿಯ ಸದಸ್ಯರನ್ನು ಮಾತಾಜಿಯವರು ಆರತಿ ಎತ್ತಿ ಕುಂಕುಮ ಹಚ್ಚಿ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರೊ. ಬಿ.ವಿ ಅರ್ತಿಕಜೆ ದಂಪತಿ, ಕರ್ನಾಟಕ ಬ್ಯಾಂಕ್ ನಿವೃತ್ತ ಎಜಿಎಂ ವೇಣುಗೋಪಾಲ ಮಾಂಬಾಡಿ ದಂಪತಿ, ಸಮಿತಿಯ ಸಂಚಾಲಕ ಸತ್ಯನಾರಾಯಣ ಭಟ್, ವಿದ್ಯಾವರ್ಧಕ ಸಂಘದ ನಿರ್ದೇಶಕಿ ಮಹಾಲಕ್ಷ್ಮೀ, ಉಪಾಧ್ಯಕ್ಷೆ ರೂಪಲೇಖಾ, ಕುಟುಂಬ ಪ್ರಭೋದನ್ ಮಂಗಳೂರು ಇದರ ಪ್ರಮುಖ ಅಚ್ಯುತ ನಾಯಕ್, ಶ್ರೀಕೃಷ್ಣ ಲೋಕ ಕಾರ್ಯಕ್ರಮದ ಕಾರ್ಯದರ್ಶಿ ಬ್ರಿಜೇಶ್ ರೈ, ಶಿಶುಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷ ರಾಜಗೋಪಾಲ್ ಭಟ್, ಸಂಚಾಲಕ ಅಕ್ಷಯ್ ಕುಮಾರ್, ಕೋಶಾಧಿಕಾರಿ ಚಂದ್ರಪ್ರಭಾ, ಸದಸ್ಯರಾದ ಮಲ್ಲೇಶ್ ಮತ್ತು ಗಂಗಾಧರ ಆಚಾರ್ಯ ಹಾಗೂ ಶಿಶುಮಂದಿರದ ಮಾತಾಜಿಯವರು, ಪೋಷಕರು ಉಪಸ್ಥಿತರಿದ್ದರು. ವೇಣುಗೋಪಾಲ ಭಟ್ ಮಾಂಬಾಡಿ ವಂದಿಸಿದರು.

LEAVE A REPLY

Please enter your comment!
Please enter your name here