






ಪುತ್ತೂರು: ಜಾತ್ಯಾತೀತ ಜನತಾದಳ(ಜೆಡಿಎಸ್) ಪಕ್ಷದ ಕಾರ್ಯಕರ್ತರ ಸಭೆಯು ಆ.9ರಂದು ಬೊಳುವಾರು ದ್ರುವ ಕಾಂಪ್ಲೆಕ್ಸ್ ನಲ್ಲಿರುವ ನೆಮ್ಮದಿ ವೆಲ್‌ನೆಸ್ ಸೆಂಟರ್ ನಲ್ಲಿ ನಡೆಯಲಿದೆ.


ಪಕ್ಷದ ವಿವಿಧ ಘಟಕಗಳು ಹಾಗೂ ವಿವಿಧ ಬ್ಲಾಕ್‌ಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ಹಾಗೂ ವಿಧಾನ ಸಭಾ ಕ್ಷೇತ್ರದ ಎಲ್ಲಾ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.



ಶೀಘ್ರದಲ್ಲೇ ಪಕ್ಷದ ಕಚೇರಿ ಪ್ರಾರಂಭ:
ಪುತ್ತೂರಿನಲ್ಲಿ ಜೆಡಿಎಸ್ ಪಕ್ಷದ ಕಚೇರಿಗೆ ವಿಳಾಸ ಬೇಕು. ಪಕ್ಷದ ಸಂಘಟನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಜೆಡಿಎಸ್ ಪಕ್ಷದ ಅಧಿಕೃತ ಕಚೇರಿ ತೆರೆಯಬೇಕು. ಇದಕ್ಕಾಗಿ ಶೀಘ್ರವೇ ಪಕ್ಷದ ಅಧಿಕೃತ ಕಚೇರಿ ತೆರೆಯಬೇಕು. ಕಚೇರಿಗೆ ಆವಶ್ಯಕವಾದ ಪೀಠೋಪಕರಣಗಳನ್ನು ಖರೀದಿಸಲು ಹಾಗೂ ಕಚೇರಿ ನಿರ್ವಹಣೆಗೆ ಎಲ್ಲರೂ ಸಹಕರಿಸುವಂತೆ ಎಂದು ಮಾಜಿ ರಾಜ್ಯ ಉಪಾಧ್ಯಕ್ಷ ಶ್ರೇಯಾಂಶ್ ಕುಮಾರ್ ಜೈನ್ ಸಲಹೆ ನೀಡಿದರು. ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ಶೀಘ್ರದಲ್ಲೇ ಪಕ್ಷದ ಕಚೇರಿ ಪ್ರಾರಂಭಿಸಲಾಗುವುದಾಗಿ ತೀರ್ಮಾನಿಸಲಾಯಿತು.
ಬಿಜೆಪಿ, ಜೆಡಿಎಸ್ ಹೊಂದಾಣಿಕೆಯಿಂದ ರಾಜ್ಯದಲ್ಲಿ ಅಧಿಕಾರಕ್ಕೆ-ಶ್ರೇಯಾಂಶ್ ಕುಮಾರ್ ಜೈನ್:
ಜೆಡಿಎಸ್ ಮಾಜಿ ರಾಜ್ಯ ಉಪಾಧ್ಯಕ್ಷ ಶ್ರೇಯಾಂಶ್ ಕುಮಾರ್ ಜೈನ್ ಮಾತನಾಡಿ, ಕರ್ನಾಟಕದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಹೊಂದಾಣಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮುಂಬರುವ ಚುನಾವಣೆಯನ್ನು ಎರಡೂ ಪಕ್ಷಗಳೂ ಹೊಂದಾಣಿಕೆಯಿಂದ ಎದುರಿಸಿ, ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದರು. ಒಂದು ಕಾಲದಲ್ಲಿ ಕರಾವಳಿಯಲ್ಲಿ ಜೆಡಿಎಸ್‌ನ ಆರು ಮಂದಿ ಶಾಸಕರಿದ್ದರು. ದೇಶದಲ್ಲಿಯೇ ಪ್ರಥಮ ಬಾರಿಗೆ ರೈತರ ಸಾಲ ಮಣ್ಣಾ ಮಾಡಿರುವುದು ಜೆಡಿಎಸ್ ಸರಕಾರಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ-ಪ್ರಭಾಕರ ಸಾಲಿಯಾನ್
ಅಧ್ಯಕ್ಷತೆ ವಹಿಸಿದ್ದ ಜೆಡಿಎಸ್ ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಪ್ರಭಾಕರ ಸಾಲಿಯಾನ್ ಬಾಕಿಲಗುತ್ತು ಮಾತನಾಡಿ, ವಿಧಾನ ಸಭಾ ಕ್ಷೇತ್ರದ ಎಲ್ಲಾ ಬೂತ್ ಮಟ್ಟದಿಂದ ಪಕ್ಷವನ್ನು ಬಲಪಡಿಸಲಾಗುವುದು. ಇದಕ್ಕಾಗಿ ಬೂತ್ ಮಟ್ಟದ ಸಮಿತಿಗಳನ್ನು ರಚಿಸಲಾಗುವುದು. ಉಳಿದಂತೆ ಪಕ್ಷದ ವಿವಿಧ ಬ್ಲಾಕ್‌ಗಳು ಹಾಗೂ ವಿವಿಧ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಿಸಿಕೊಂಡು ಪಕ್ಷ ಸಂಘಟನೆ ಬಲಿಷ್ಠಗೊಳಿಸಲಾಗುವುದು ಎಂದು ಹೇಳಿದರು.
ಸಂಘಟನೆ ಸಂಪೂರ್ಣ ಸಹಕಾರ-ಅಶ್ರಫ್ ಕಲ್ಲೇಗ:
ಪಕ್ಷದ ನಿಕಟಪೂರ್ವ ಅಧ್ಯಕ್ಷ ಅಶ್ರಫ್ ಕಲ್ಲೇಗ ಮಾತನಾಡಿ, ಜೆಡಿಎಸ್ ಪಕ್ಷವು ಇನ್ನಷ್ಟು ಬೆಳೆಯಬೇಕು. ಪಕ್ಷ ಬಲೀಷ್ಠವಾಗಬೇಕು. ಪಕ್ಷದ ಸಂಘಟನೆಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡುವುದಾಗಿ ತಿಳಿಸಿದರು.
ಪಕ್ಷದ ಪದಾಧಿಕಾರಿಗಳಾದ ಜಯರಾಜ್ ಅಮೀನ್, ಸುರೇಶ್ ಕುಮಾರ್, ರಾಧಾಕೃಷ್ಣ ಸಾಲಿಯಾನ್, ಶಿವು ಸಾಲಿಯಾನ್, ಶಿವಾನಂದ, ನಝೀರ್ ಬಪ್ಪಳಿಗೆ, ಅಶ್ರಫ್, ವಿಕ್ಟರ್ ಗೊನ್ಸಾಲ್ವೀಸ್, ಚಂದ್ರ ಬೀರಿಗ, ಸುಂದರ ಬಪ್ಪಳಿಗೆ, ಮಹಮ್ಮದ್ ಕುಂಞಿ ಸಹಿತ ಹಲವು ಮಂದಿ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಭೆಯ್ಲಿ ಭಾಗವಹಿಸಿದ್ದರು.










