ಯಕ್ಷಾಷಾಢ-2026 ಸಂಪನ್ನ

0

ಪುತ್ತೂರು: ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಹಾಗೂ ಸವಣೂರು ಶ್ರವಣರಂಗ ಹಮ್ಮಿಕೊಂಡಿರುವ ವಿಶಿಷ್ಟ ಕಾರ್ಯಕ್ರಮ “ಯಕ್ಷಾಷಾಢ -10′ ಬೊಳುವಾರಿನ ಮಲರಾಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆ.10ರಂದು “ಮೇದಿನಿ ನಿರ್ಮಾಣ”ಎಂಬ ಆಖ್ಯಾನ ದೊಂದಿಗೆ ಸಂಪನ್ನಗೊಂಡಿತು.


ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ್ ಇರ್ದೆ, ನಿತೀಶ್ ಎಂಕಣ್ಣಮೂಲೆ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಜಯರಾಮ ಭಟ್ ಅಚ್ಯುತ ಪಾಂಗಣ್ಣಾಯ, ಅನೀಶ್ ಕೃಷ್ಣ ಪುಣಚ, ಸಹಕರಿಸಿದರು. ಮುಮ್ಮೇಳದಲ್ಲಿ ಮನೋರಮಾ ಜಿ ಭಟ್ (ಆದಿಮಾಯೆ), ಹರಿಣಾಕ್ಷಿ ಜೆ ಶೆಟ್ಟಿ ಮತ್ತು ಕಿಶೋರಿ ದುಗ್ಗಪ್ಪ ನಡುಗಲ್ಲು (ವಿಷ್ಣು), ಶುಭಾ ಗಣೇಶ್,(ಬ್ರಹ್ಮ), ಪ್ರೇಮಲತಾ ರಾವ್ (ಈಶ್ವರ) ಭಾರತಿ ರೈ ಅರಿಯಡ್ಕ (ಮಧು), ಶಾರದಾ ಅರಸ್ (ಕೈಟಭ) ಸಹಕರಿಸಿದರು. ಶ್ರೀ ದೇವಳದ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಬಲ್ಲಾಳ್ ಸ್ವಾಗತಿಸಿ,ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ವಂದಿಸಿದರು.

ಶ್ರವಣ ರಂಗದ ಸಂಚಾಲಕ ತಾರಾನಾಥ ಸವಣೂರು, ಆಂಜನೇಯ ಯಕ್ಷಗಾನ ಕಲಾ ಸಂಘದ ಗೌರವ ಕಾರ್ಯದರ್ಶಿ ರಂಗನಾಥ ರಾವ್ ಉಪಸ್ಥಿತರಿದ್ದರು. ಹರಿಣಾಕ್ಷಿ ಜೆ ಶೆಟ್ಟಿ ಸಂಯೋಜನೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರಸನ್ನ ಬಲ್ಲಾಳ್ ಮತ್ತು ಜಲಜಾಕ್ಷಿ ಎನ್ ಹೆಗ್ಡೆ ಇವರಿಗೆ ಶಾಲು ಹೊದಿಸಿ ಉಭಯ ಸಂಘಗಳ ವತಿಯಿಂದ ಗೌರವಿಸಲಾಯಿತು. ದೇವಳದ ಅರ್ಚಕ ವೇದಮೂರ್ತಿ ಶ್ರೀಧರ ಭಟ್ ಕಬಕ ಕಲಾವಿದರಿಗೆ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here