ಸ್ವಚ್ಛ ಪರಿಸರದತ್ತ ಸರಕಾರಿ ವೈದ್ಯರ ಚಿತ್ತ : ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರ ಪರಿಸರ ಸ್ವಚ್ಚತೆ

0

ಕಾಣಿಯೂರು: ಕಾಣಿಯೂರು ಪ್ರಾಥಮಿಕ ಆರೋಗ್ಯಕೇಂದ್ರ ವೈದ್ಯಾಧಿಕಾರಿ ಡಾ. ಆಶಾ ಅಭಿಕಾರ್ ಅವರ ಮುತುವರ್ಜಿಯಲ್ಲಿ ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಪರಿಸರದ ಸ್ವಚ್ಛತಾ ಕಾರ್ಯ ನಡೆಸಲಾಯಿತು.


ನ್ಯಾಯವಾದಿ ಇಡ್ಯಡ್ಕ ಮೋಹನ್ ಗೌಡ ನೇತೃತ್ವದ ತಂಡ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಸೇರಿ ಆಸ್ಪತ್ರೆಯ ಸುತ್ತ ಹಬ್ಬಿದ್ದ ಗಿಡ,ಪೊದೆ,ಕಸ ಇತ್ಯಾದಿಗಳನ್ನು ತೆರವುಗೊಳಿಸಿದರು. ಆಸ್ಪತ್ರೆಯ ವಾತಾವರಣ ಸ್ವಚ್ಛ, ಸುಂದರವಾಗಿ, ಜನಸ್ನೇಹಿಯಾಗಿರಬೇಕೆಂಬ ನಿಟ್ಟಿನಲ್ಲಿ ಈ ಕಾರ್ಯವನ್ನು ಮಾಡಲಾಯಿತು.

ವೈದ್ಯರು ಮತ್ತು ಸಿಬ್ಬಂದಿಗಳು ಶ್ರಮದಾನದಲ್ಲಿ ಭಾಗವಹಿಸಿದರು. ವೈದ್ಯಾಧಿಕಾರಿ ಡಾ.ಆಶಾ ಅಭಿಕಾರ್, ಸಿಬ್ಬಂದಿಗಳಾದ ಸುಮತಿ, ಉಷಾಲತಾ, ರೇಣುಕಾ, ಪುಷ್ಪಲತಾ, ಪ್ರೇಮಲತಾ, ಶಾಲಿನಿ, ಶಿವಲಿಂಗಯ್ಯ, ಕುಶಾಲಪ್ಪ ಆಶಾ ಕಾರ್ಯಕರ್ತೆ ಭಾರತಿ, ಯಶೋಧ, ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಅಧ್ಯಕ್ಷ ಧರ್ಮಪಾಲ ಕಲ್ಪಡ, ಕಾರ್ಯದರ್ಶಿ ಯಜ್ಞೇಶ್ ಪೆರ್ಲೋಡಿ, ಕೋಶಾಧಿಕಾರಿ ರಾಜೇಶ್ ಮೀಜೆ, ಕಾಣಿಯೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಓಡಬಾಯಿ, ಪ್ರಮುಖರಾದ ಕೇಶವ ಕಾಣಿಯೂರು, ದೀಕ್ಷಿತ್ ಕಂಪ, ಕೀರ್ತಿಕುಮಾರ್ ಎಲುವೆ, ವಿನಯ್ ಎಲುವೆ, ಪರಮೇಶ್ವರ ಅನಿಲ, ಗಗನ್ ಮಠತ್ತಾರು, ಯತಿರಾಜ್ ಕಲಾಯಿ, ಸತೀಶ್ ಬಾರೆಂಗಳ, ಕುಸುಮಾಧರ ಅಭಿಕಾರ್, ಯೋಗಿತ್ ಅಗಳಿ, ಚಂದ್ರಶೇಖರ್ ಬಾರೆಂಗಳ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here