ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಪ್ರಥಮ ಸಾಂಪ್ರದಾಯಿಕ ಆಟಿ ಕೂಟ ಆಚರಣೆ

0

ನರಿಮೊಗರು: ನರಿಮೊಗರಿನ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಪ್ರಥಮ ಸಾಂಪ್ರದಾಯಿಕ ಆಟಿ ಕೂಟ ಕಾರ್ಯಕ್ರಮವು ಆ.12 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಜಯರಾಮ ಕೆದಿಲಾಯ ಎಸ್. ತೆಂಗಿನ ಕೊಂಬನ್ನು ಅರಳಿಸುವ ಮೂಲಕ ಚಾಲನೆ ನೀಡಿ ಆಟಿ ಅಮಾವಾಸ್ಯೆಯ ಶುಭಾಶಯ ತಿಳಿಸಿದರು. ಶಾಲಾ ಸಹ ಶಿಕ್ಷಕಿ ನೀತು ನಾಯಕ್ ಅವರು ಆಟಿ ತಿಂಗಳ ಮಹತ್ವ, ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಆಚರಣೆಗಳ ಬಗ್ಗೆ ಮಾಹಿತಿ ನೀಡಿದರು.

ಶಾಲಾ ಕಾರ್ಯದರ್ಶಿ ಶ್ರೀ ಕೃಷ್ಣ ಪ್ರಸಾದ್ ಕೆದಿಲಾಯ ಅವರು ಮಾತನಾಡಿ, ತುಳುನಾಡಿನ ಆಚರಣೆಗಳು ಇಂದಿನ ದಿನಗಳಲ್ಲಿ ಬಹಳ ಮುಖ್ಯ. ತುಳು ಸಂಸ್ಕೃತಿಯನ್ನು ಪುನಃ ನೆನಪಿಸುವಂತೆ ಮಾರ್ಗದರ್ಶನ ನೀಡಿದ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು.

ಕೋಶಾಧಿಕಾರಿ ಹರೀಶ್ ಪುತ್ತೂರಾಯ ಅವರು “ನಮ್ಮ ಆಟಿ ಸಂಪ್ರದಾಯದಲ್ಲಿ ವಿಜ್ಞಾನ ಅಡಗಿದೆ. ಪ್ರಕೃತಿಯಲ್ಲಿರುವ ವೈರಾಣುಗಳಿಂದ ರಕ್ಷಣೆ ಪಡೆಯಲು ಉತ್ತಮ ಆಹಾರ ಸೇವನೆ ಮಾಡುವುದು ಆಟಿ ಆಚರಣೆಯ ಒಂದು ಉದ್ದೇಶ” ಎಂದು ಹೇಳಿದರು.

ಆಡಳಿತ ಮಂಡಳಿ ಸದಸ್ಯ ವೆಂಕಟ ಕೃಷ್ಣ ಕೆ.ಕೆ. ಅವರು, ತುಳುನಾಡಿನ ಆಚರಣೆಗಳನ್ನು ತಿಳಿದವರು ಈಗಿನ ಪೀಳಿಗೆಗೆ ತಿಳಿಸುವ ಅವಕಾಶವಾದದ್ದು ಖುಷಿಯ ವಿಷಯ ಎಂದರು.ಕಾರ್ಯಕ್ರಮದಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುರೇಶ್ ಪ್ರಭು ಎಸ್. ಮತ್ತು ಮುಖ್ಯೋಪಾಧ್ಯಾಯ ಪ್ರಸನ್ನ ಕೆ. ಉಪಸ್ಥಿತರಿದ್ದರು.

10ನೇ ತರಗತಿಯ ವಿದ್ಯಾರ್ಥಿಗಳಾದ ಸಾಯಿಸಂಚಿತ್, ಜೀವಿತ್, ಯಜ್ಞೆಶ್ ಪ್ರಾರ್ಥನೆ ಹಾಡಿದರು. ನಂತರ ವಿದ್ಯಾರ್ಥಿಗಳಿಂದ ಆಟಿ ಕಳೆಂಜ, ಚೆನ್ನು ಕುಣಿತ ಪ್ರದರ್ಶನ ನಡೆಯಿತು. ಕೊನೆಯಲ್ಲಿ ಮಕ್ಕಳು ಆಟಿ ವಿಶೇಷ ಪತ್ರೊಡೆ, ಸೊಪ್ಪು ಹಾಗೂ ಅಂಬಟೆಗಳ ಸಾಂಪ್ರದಾಯಿಕ ಖಾದ್ಯಗಳನ್ನು ಸವಿದರು.ಮುಖ್ಯೋಪಾಧ್ಯಾಯ ಶ್ರೀ ಪ್ರಸನ್ನ ಕೆ. ಸ್ವಾಗತಿಸಿದರು.ರಚನಾ ಧನ್ಯವಾದ ನೀಡಿದರು. ಮುರಳಿಕೃಷ್ಣ ನಿರೂಪಿಸಿದರು. ತುಳುನಾಡಿನ ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಆಹಾರ ಪದ್ಧತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ ಆಟಿ ಕೂಟ ಅರ್ಥಪೂರ್ಣವಾಗಿ ನೆರವೇರಿತು.

LEAVE A REPLY

Please enter your comment!
Please enter your name here