







ಪುತ್ತೂರು: ತುಳುಕೂಟ ಪುತ್ತೂರು ಇದರ ವತಿಯಿಂದ ತುಳುನಾಡ್’ಡ್ ಆಟಿ ತಿಂಗೊಲ್-ಮರ್ಯಲ (ತುಳುನಾಡಿನಲ್ಲಿ ಆಟಿ ತಿಂಗಳು-ಮಳೆಗಾಲ) ವಿಷಯದಲ್ಲಿ ತುಳು ಕವಿಗೋಷ್ಠಿಯನ್ನು ಜಿ.ಎಲ್.ವನ್ ಮಾಲ್’ನಲ್ಲಿ ಏರ್ಪಡಿಸಲಾಗಿತ್ತು. ಚಿಗುರಲೆ ಸಾಹಿತ್ಯ ಬಳಗದ ಸಂಚಾಲಕ ನಾರಾಯಣ ಕುಂಬ್ರ ಅವರು ಕವಿಗೋಷ್ಠಿಯನ್ನು ಉದ್ಘಾಟಿಸಿ ಶುಭಹಾರೈಸಿದರು. ಹಿರಿಯರು ಕಿರಿಯರು ಸೇರಿದಂತೆ ಒಟ್ಟು 23 ಕವಿಗಳು ಸ್ವರಚಿತ ಕವನ ವಾಚಿಸಿದರು.


ಹಂಸರಾಗ ಶೆಟ್ಟಿ ಗೋಳಿತ್ತೊಟ್ಟು, ಪೂರ್ಣಿಮಾ ಸಾಲೆತ್ತೂರು, ಸವಿತಾ ಕರ್ಕೇರ ಕಾವೂರು, ರಶ್ಮಿತಾ ಸುರೇಶ್ ಜೋಗಿಬೆಟ್ಟು, ಜಯರಾಮ ಪಡ್ರೆ, ನಮಿತಾ ಮಣಿ ಪಡ್ಡಾಯೂರು, ರಾಜಾರಾಮ್ ನೆಲ್ಲಿತ್ತಾಯ, ಅಶ್ವಿನಿ ತೆಕ್ಕುಂಜ ಕುರ್ನಾಡ್, ಗಿರೀಶ್ ಪೆರಿಯಡ್ಕ, ಹರ್ಷಿತಾ ಪಿ, ಆದ್ಯಂತ್ ಅಡೂರು, ಚಿತ್ರಾಕ್ಷಿ ಮುಗೇರ ತೆಗ್ಗು, ಮೋಹಿತಾ ಹೊಸ್ಮಠ, ದೇವಿಕಾ ಪಡುಮಲೆ, ಮಂಜುಳಾ ಮುರಳಿ ಕೃಷ್ಣ ಪುತ್ತೂರು, ಅಕ್ಷತಾ ನಾಗನಕಜೆ, ಸೌಜನ್ಯ ಬಿ.ಎಂ, ತಸ್ಮಯ್ ಪಂಚೋಡಿ, ತನ್ಮಯ್ ಪಂಚೋಡಿ, ತಶ್ವಿ ಶಾಂಭವಿ ಜೋಗಿಬೆಟ್ಟು, ಮಲ್ಲಿಕಾ ಜೆ ರೈ ಪುತ್ತೂರು, ನಂದನ. ಪಿ. ಶೆಟ್ಟಿ ಮತ್ತು ಕೊಡಗಿನಿಂದ ಬಂದ ತನ್ಸೀರಾ ಆತೂರು ಸ್ವರಚಿತ ತುಳು ಕವನಗಳನ್ನು ವಾಚಿಸಿದರು.




ಬಹುಭಾಷಾ ಸಾಹಿತಿ, ತುಳು ಲಿಪಿ ತಜ್ಞೆ, ಕರ್ನಾಟಕ ತುಳು ಅಕಾಡೆಮಿಯ ಮಾಜಿ ಸದಸ್ಯರೂ ಆಗಿರುವ ಶ್ರೀಶಾವಾಸವಿ ತುಳುನಾಡ್ ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ತುಳುಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನ್ಹಸ್ ಹಾಗೂ ಹಿರಿಯರಾದ ಎ. ವಿ. ಜಿ. ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ವೆಂಕಟರಮಣ ಗೌಡ ಕಳುವಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಾಗವಹಿಸಿದ ಎಲ್ಲಾ ಕವಿಗಳಿಗೆ ನೆನಪಿನೋಲೆ ಹಾಗೂ ಸ್ಮರಣಿಕೆಗಳನ್ನು ವಿತರಿಸಲಾಯಿತು. ಸುದಾನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಾಕ್ಷಿ ಅಂಚನ್ ಕಲ್ಲಡ್ಕ ಕಾರ್ಯಕ್ರಮ ನಿರ್ವಹಿಸಿ ತುಳುಕೂಟದ ಕಾರ್ಯದರ್ಶಿ ಡಾ. ರಾಜೇಶ್ ಬೆಜ್ಜಂಗಳ ವಂದಿಸಿದರು.










