






ಪುತ್ತೂರು: ಪಂಜಳ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ ದಿನಾಚರಣೆಯನ್ನು ಬಾಲವಿಕಾಸ ಸಮಿತಿ ಹಾಗೂ ಸ್ನೇಹ ಯುವಕ ಮಂಡಲ ಮತ್ತು ಇನ್ನಿತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆಸಲಾಯಿತು.


ನಿವೃತ್ತ ಸೈನಿಕ ವಿಶ್ವನಾಥ ಪೂಜಾರಿ ಅನಡ್ಕ ಧ್ವಜಾರೋಹಣ ನೆರೆವೇರಿಸಿ ತಮ್ಮ ಅನುಭಗಳನ್ನು ಹಂಚಿ ಕೊಂಡರು.



ಕಾರ್ಯಕ್ರಮದಲ್ಲಿ ಶಶಿಧರ್ ಕಿನ್ನಿಮಜಲು, ಬಾಲವಿಕಾಸ ಅಧ್ಯಕ್ಷೆ ರಮ್ಯಶ್ರೀ ಶೋಭಿತ್, ಸದಸ್ಯರಾದ ನವೀನ್ ಕುಮಾರ್ ಶಿಬರ, ಸ್ನೇಹ ಯುವಕ ಮಂಡಲದ ಅಧ್ಯಕ್ಷ ಗಣೇಶ್ ಬಂಗೇರ, ನವೀನ್ ರೈ ಪಂಜಳ, ಚಂದ್ರಶೇಖರ ಶೆಟ್ಟಿ, ಜುಬೆರ್, ಅಮ್ಮಿ ಪೂಜಾರಿ, ಆನಂದ ದಂಡ್ಯನೆ ಕುಕ್ಕು, ಗ್ರಾ. ಪಂ ಮಾಜಿ ಸದಸ್ಯ ಸುಧಾಕರ್ ಕುಲಾಲ್, ತಾ. ಪಂ ಮಾಜಿ ಸದಸ್ಯ ಜಯರಾಮ್ ಪೂಜಾರಿ, ಸಮಿತಿ ಸದಸ್ಯರಾದ ಮಂಜುನಾಥ ಶೇಖ, ಹಿರಿಯರಾದ ಸೀತಾರಾಮ ಆಚಾರಿ, ಡೊಂಬಯ ಪೂಜಾರಿ, ಬಾಲಕೃಷ್ಣ ಪೂಜಾರಿ, ದಿನೇಶ್ ಕರ್ಕೇರ, ಪ್ರಕಾಶ್ ಪೂಜಾರಿ, ಮಾಜಿ ಅಧ್ಯಕ್ಷೆ ರಮ್ಲತ್, ಸುಶೀಲ ಕೆ, ಚಂದ್ರಪ್ರಭಾ, ಮಕ್ಕಳ ಪೋಷಕರು, ಶ್ರೀರಾಮ್ ಫ್ರೆಂಡ್ಸ್, ಷಣ್ಮುಖ ಗೆಳೆಯರ ಬಳಗ, ಸಿಗಂದೂರು ಪ್ರವಾಸ ತಂಡ ಹಾಗೂ ಸ್ತ್ರಿ ಶಕ್ತಿ ಗುಂಪಿನ ಸದಸ್ಯರು, ಸ್ಥಳೀಯರು, ಮಕ್ಕಳು ಭಾಗವಹಿಸಿದ್ದರು.
ವಿವಿಧ ಸಂಘ ಸಂಸ್ಥೆಗಳು ಮಕ್ಕಳಿಗೆ ಹಾಗೂ ಮಹಿಳೆಯರಿಗೆ, ಸ್ಪರ್ಧಾ ವಿಜೇತರಿಗೆ ಬಹುಮಾನ ವ್ಯವಸ್ಥೆ, ಸಿಹಿತಿಂಡಿ ವ್ಯವಸ್ಥೆ ಹಾಗೂ ಉಪಹಾರದ ವ್ಯವಸ್ಥೆಯನ್ನು ಮಾಡಿದರು.
ನವೀನ್ ರೈ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಬಾ.ವಿ. ಸಮಿತಿ ಮಾಜಿ ಅಧ್ಯಕ್ಷೆ ರಮ್ಲತ್ ಅವರನ್ನು ಸನ್ಮಾನಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ವೃಂದ ವಂದಿಸಿದರು, ಸಹಾಯಕಿ ಜಯಂತಿ ಸಹಕರಿಸಿದರು.










