








ಅರಿಯಡ್ಕ: ಸಾರ್ವಜನಿಕ ಶ್ರೀ ನಾಗನ ಕಟ್ಟೆ ಸಮಿತಿ ಕೌಡಿಚ್ಚಾರು -ಅರಿಯಡ್ಕ ಇಲ್ಲಿ ಆ.17 ರಂದು ಪುರೋಹಿತ ಶ್ರೀ ಶಿವಪ್ರಸಾದ ಕಡಮಣ್ಣಾಯರವರ ಪೌರೋಹಿತ್ಯದಲ್ಲಿ ನಾಗರ ಪಂಚಮಿ ಆಚರಣೆ ನಡೆಯಿತು.ಕಾರ್ಯಕಮದಲ್ಲಿ ಸಮಿತಿ ಸದಸ್ಯರು,ಶ್ರೀ ಕೃಷ್ಣ ಭಜನಾ, ಪದಾಧಿಕಾರಿಗಳು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸದಸ್ಯರು,ವಾಹನ ಚಾಲಕ ಮಾಲಕರ ಸಂಘ ಸದಸ್ಯರು, ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.















