ಸದ್ಭಾವನಾ ದಿನ – ಸಮರಸ ಮತ್ತು ಒಗ್ಗಟ್ಟಿನ ಚಿಂತನೆ

0

ಪ್ರತಿ ವರ್ಷ ಆ: 20 ರಂದು ಭಾರತದಾದ್ಯಂತ ‘ಸದ್ಭಾವನಾ ದಿನ’ವನ್ನು ಆಚರಿಸಲಾಗುತ್ತದೆ. ಭಾರತದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಜನ್ಮದಿನದ ನೆನಪಿಗಾಗಿ ಈ ದಿನವನ್ನು ರಾಷ್ಟ್ರೀಯ ಸದ್ಭಾವನಾ ದಿನವನ್ನಾಗಿ ಗುರುತಿಸಲಾಗಿದೆ. ‘ಸದ್ಭಾವನೆ’ ಎಂದರೆ ಒಳ್ಳೆಯ ಭಾವನೆ, ಸೌಹಾರ್ದತೆ ಮತ್ತು ಪರಸ್ಪರ ಗೌರವ. ಈ ದಿನವು ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಶಾಂತಿ, ಸಾಮರಸ್ಯ ಮತ್ತು ಐಕ್ಯತೆಯನ್ನು ಎತ್ತಿಹಿಡಿಯುವ ಪ್ರಮುಖ ಸಂದೇಶವನ್ನು ನೀಡುತ್ತದೆ.

ಭಾರತವು ವಿವಿಧ ಧರ್ಮ, ಭಾಷೆ, ಜಾತಿ ಮತ್ತು ಸಂಸ್ಕೃತಿಗಳ ತವರೂರು. ಈ ಎಲ್ಲಾ ವೈವಿಧ್ಯತೆಗಳ ನಡುವೆ ಸಾಮರಸ್ಯವನ್ನು ಕಾಯ್ದುಕೊಳ್ಳುವುದು ನಮ್ಮ ರಾಷ್ಟ್ರೀಯ ಕರ್ತವ್ಯ. ಸದ್ಭಾವನಾ ದಿನವು ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ಬಾಳುವ ಅಗತ್ಯವನ್ನು ನೆನಪಿಸುತ್ತದೆ.
ಯಾವುದೇ ಸಮಸ್ಯೆಗೆ ಹಿಂಸೆ ಪರಿಹಾರವಲ್ಲ. ಮಾತುಕತೆ, ಪ್ರೀತಿ ಮತ್ತು ಸೌಹಾರ್ದತೆಯ ಮೂಲಕ ಮಾತ್ರ ಶಾಂತಿಯುತ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂಬುದನ್ನು ಈ ದಿನ ನಮಗೆ ಬೋಧಿಸುತ್ತದೆ.

ನವ ಭಾರತದ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ದೊಡ್ಡದು. ಕೋಮು ಸೌಹಾರ್ದತೆ ಮತ್ತು ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ.
ಇಂದಿನ ತಾಂತ್ರಿಕ ಮತ್ತು ಸವಾಲಿನ ಯುಗದಲ್ಲಿ, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವುದು ಅತ್ಯಗತ್ಯವಾಗಿದೆ. ಜಾತಿ-ಧರ್ಮಗಳ ಗಡಿ ಮೀರಿ ಪರಸ್ಪರ ಸಹಕಾರ, ಸಹಾನುಭೂತಿ ಮತ್ತು ಸೋದರತ್ವವನ್ನು ಬೆಳೆಸಿಕೊಳ್ಳುವುದೇ ಸದ್ಭಾವನಾ ದಿನಕ್ಕೆ ನಾವು ನೀಡುವ ನಿಜವಾದ ಅರ್ಥ.
ನಾವು ಪ್ರತಿಯೊಬ್ಬರೂ ಧರ್ಮ, ಭಾಷೆ ಅಥವಾ ಪ್ರದೇಶದ ಆಧಾರದ ಮೇಲೆ ತಾರತಮ್ಯ ಮಾಡದೆ, ಭಾರತೀಯರು ಎಂಬ ಒಂದೇ ಭಾವನೆಯಿಂದ ದೇಶದ ಪ್ರಗತಿಗೆ ಶ್ರಮಿಸುವುದಾಗಿ ಈ ದಿನ ಸಂಕಲ್ಪ ಮಾಡಬೇಕಿದೆ. ಪ್ರೀತಿ ಮತ್ತು ಸೌಹಾರ್ದತೆಯಿಂದ ಮಾತ್ರ ಸಮೃದ್ಧ ಮತ್ತು ಶಾಂತಿಯುತ ಭಾರತವನ್ನು ಕಟ್ಟಲು ಸಾಧ್ಯ ಎಂಬುವುದನ್ನು ಮರೆಯುವಂತಿಲ್ಲ.

LEAVE A REPLY

Please enter your comment!
Please enter your name here