







ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ನೌಕರ ದಿ.ಗೋಪಾಲಕೃಷ್ಣಯ್ಯ ಅವರ ಪತ್ನಿ ಪುಷ್ಪಾವತಿ(92ವ) ಅವರು ಆ.21ರ ನಸುಕಿನ ಜಾವ ನಿಧನರಾದರು.


ಹಲವಾರು ವರ್ಷಗಳ ಹಿಂದೆ ದೇವಳದ ಬಳಿಯ ಶಾಲೆಯಿದ್ದಾಗ ಅಲ್ಲಿ ಆರಂಭಗೊಂಡ ಮಂದಿರದಿಂದ ಹಿಡಿದು ಶಾರದಾ ಭಜನಾ ಮಂದಿರದ ಸೇವಾ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಪುಷ್ಪಕ್ಕ ಎಂದೇ ಚಿರಪರಿಚಿತರಾಗಿದ್ದ ಪುಷ್ಪಾವತಿ ಅವರು ಮುಕ್ವೆಯಲ್ಲಿರುವ ಹಿರಿಯ ಪುತ್ರ ಪಿ.ಜಿ.ಚಂದ್ರಶೇಖರ್ ರಾವ್ ಅವರ ಮನೆಯಲ್ಲಿ ನಿಧನರಾದರು.



ಮೃತರು ಪುತ್ರರಾದ ಪಿ.ಜಿ.ಚಂದ್ರಶೇಖರ್ ರಾವ್, ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಮೂವರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು ಹಾಗು ಮೊಮ್ಮಕ್ಕಳನ್ನು ಅಗಲಿದ್ದಾರೆ.










