






4,68,29,255 ರೂ. ವ್ಯವಹಾರ, ರೂ. 7.09 ಲಕ್ಷ ಲಾಭ, ಶೇ. 12 ಡಿವಿಡೆಂಡ್


ಪುತ್ತೂರು: ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ 4,68,29,255 ರೂ.ಗಳ ವ್ಯವಹಾರ ನಡೆಸಿ, 7.09 ರೂ ಲಕ್ಷ ನಿವ್ವಳ ಲಾಭ ಪಡೆದಿರುತ್ತದೆ ಎಂದು ಸಂಘದ ಅಧ್ಯಕ್ಷ ಕೃಷ್ಣ ಭಟ್ ಕುಕ್ಕುಜೆರವರು ಹೇಳಿದರು.



ಅವರು ಆ. 21 ರಂದು ಸವಣೂರು ಯುವ ಸಭಾಭವನದಲ್ಲಿ ಜರಗಿದ ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಎಲ್ಲಾ ಸದಸ್ಯರುಗಳು ಮತ್ತು ಆಡಳಿತ ಮಂಡಳಿಯ ಹಾಗೂ ಸಿಬ್ಬಂದಿಗಳ ಪ್ರೋತ್ಸಾಹದಿಂದ ಸಂಘವು ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದ್ದು, ವರದಿ ಸಾಲಿನಲ್ಲಿ ಸದಸ್ಯರುಗಳಿಗೆ ಶೇ 12 ಡಿವಿಡೆಂಡ್ ಹಾಗೂ ಪ್ರತಿ ಲೀಟರ್ ಹಾಲಿಗೆ 1.11 ಪೈಸೆ ಬೋನಸ್ ನೀಡಲಾಗುವುದು ಎಂದ ಅವರು, ಸಂಘವು 41 ನೇ ವರುಷದಲ್ಲಿ ಮುನ್ನಡೆಯುತ್ತಿದ್ದು, ಹೈನುಗಾರರ ನಿರಂತರ ಪ್ರೋತ್ಸಾಹದಿಂದ ಸಂಘವು ಪ್ರಗತಿಯ ಪಥದಲ್ಲಿ ಸಾಗುತ್ತಿದೆ. ಹೈನುಗಾರರು ಹೆಚ್ಚು ಹೆಚ್ಚು ಹಾಲನ್ನು ಸಂಘಕ್ಕೆ ಪೂರೈಕೆ ಮಾಡುವಲ್ಲಿ ಪ್ರಯತ್ನಿಸಿ, ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸುವಲ್ಲಿ ಸಹಕರಿಸುವಂತೆ ವಿನಂತಿಸಿದರು.

ಹೆಚ್ಚು ಹಾಲು ಸಂಘಕ್ಕೆ ಹಾಕಬೇಕು- ಸುದರ್ಶನ್ ನಾೖಕ್ :
ಸಂಘದ ಸದಸ್ಯ ಸುದರ್ಶನ್ ನಾೖಕ್ ಕಂಪ ಮಾತನಾಡಿ ಸಂಘ ಉತ್ತಮ ಸ್ಥಿತಿಯಲ್ಲಿ ಈ ಬಾರಿ ಒಳ್ಳೆಯ ಲಾಭ ಬಂದಿರುವುದು ಖುಷಿಯ ವಿಚಾರವಾಗಿದೆ. ಸಂಘದ ನಿರ್ದೇಶಕರುಗಳು ಹೆಚ್ಚಿನ ಹಾಲು ಪೂರೈಕೆ ಮಾಡುವ ಬಗ್ಗೆ ಮನಸು ಮಾಡಬೇಕು ಎಂದರು.
ಹೆಚ್ಚು ಹಾಲು ಪೂರೈಸಿದವರು:
ವರದಿ ಸಾಲಿನಲ್ಲಿ ಸಂಘಕ್ಕೆ ಹೆಚ್ಚು ಹಾಲು ಹಾಕಿದವರಲ್ಲಿ ಪ್ರಥಮ: ಯತೀಂದ್ರ ಶೆಟ್ಟಿ ಮಠ, ದ್ವಿತೀಯ – ಸವಣೂರು ಕೆ.ಸೀತಾರಾಮ ರೈ , ತೃತೀಯ- ರಜನಿ ರವರು ಗೌರವಕ್ಕೆ ಪಾತ್ರರಾಗಿದ್ದು, ಇವರುಗಳಲ್ಲಿ ಉಪಸ್ಥಿತರಿದ್ದ ಯತೀಂದ್ರ ಶೆಟ್ಟಿ ಮತ್ತು ರಜನಿ ರವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.
ಅದೇ ರೀತಿ ಅತೀ ಹೆಚ್ಚು ಹಾಲು ಹಾಕಿದ ಹಿರಿಯ ನಾಗರಿಕರು ವಿಭಾಗದಲ್ಲಿ ಪ್ರಥಮ : ಸವಣೂರು ಸೀತಾರಾಮ ರೈ, ದ್ವೀತಿಯ : ಸುದರ್ಶನ್ ನಾಯಕ್ ಕಂಪ, ತೃತೀಯ : ಪದ್ಮಯ್ಯ ಗೌಡ ಪರಣೆರವರುಗಳು ಆಯ್ಕೆಯಾಗಿದ್ದು ಇವರುಗಳಲ್ಲಿ ಸುದರ್ಶನ್ ನಾೖಕ್ ಮತ್ತು ಪದ್ಮಯ್ಯ ಗೌಡ ಅವರನ್ನು ಗೌರವಿಸಲಾಯಿತು. ಹಿಂಡಿ ಖರೀದಿಯಲ್ಲಿ ಪ್ರಥಮ : ಸವಣೂರು ಸೀತಾರಾಮ ರೈ, ದ್ವೀತಿಯ: ಯತೀಂದ್ರ ಶೆಟ್ಟಿ ಮಠ, ತೃತೀಯ : ಪದ್ಮಯ್ಯ ಗೌಡ ಪರಣೆ, ಇವರುಗಳಲ್ಲಿ ಯತೀಂದ್ರ ಶೆಟ್ಟಿ ಮಠ ಮತ್ತು ಪದ್ಮಯ್ಯ ಗೌಡ ಪರಣೆ ಅವರನ್ನು ಗೌರವಿಸಲಾಯಿತು. ಗುಣಮಟ್ಟದ ಹಾಲು ಪೂರೈಕೆ ವಿಭಾಗದಲ್ಲಿ ಸದಾಶಿವ ರೈಯವರು ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ
ರೈತರು ಪಡೆದುಕೊಳ್ಳಬೇಕು- ಡಾ. ಅನುದೀಪ್
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ. ಅನುದೀಪ್ ಮಾತನಾಡಿ ಹೈನುಗಾರಿಕೆಯಲ್ಲಿ ಪ್ರಗತಿ ಸಾಧಿಸಲು ಅನೇಕ ದಾರಿಗಳು ಇದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಗಡಸು ಸಾಕಣೆ ಯೋಜನೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ತುಂಬಾ ಸಂತೋಷದ ವಿಚಾರವಾಗಿದೆ- ಮಾಲತಿ
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಮಾತನಾಡಿ ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘ ಹೆಚ್ಚು ಲಾಭ ಬಂದಿರುವುದು , ಯುವಕ-ಯುವತಿಯರು ಹೈನುಗಾರಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು.
ಹರೀಶ್ ಅವರಿಗೆ ಸನ್ಮಾನ
ಸಂಘದಲ್ಲಿ 5 ವರ್ಷಗಳಿಂದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಹರೀಶ್ ರವರು ಸೆ. 1 ರಿಂದ ಮಂಗಳೂರಿನಲ್ಲಿ ಉದ್ಯೋಗಕ್ಕೆ ಸೇರ್ಪಡೆಗೊಳ್ಳುವುದರಿಂದ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷರಾದ ಆಶಾ ರೈ ಕಲಾಯಿ, ನಿರ್ದೇಶಕರುಗಳಾದ ಪ್ರೇಮಚಂದ್ರ ಮೆದು, ಜಯರಾಮ ರೈ ಸೋಂಪಾಡಿ, ಪದ್ಮಯ್ಯ ಗೌಡ ಪರಣೆ, ಆಶಾಲತಾ ಬರೆಮೇಲು, ಗೀತಾ ಕುದ್ಮನಮಜಲು, ಬಾಬು ಮುಗೇರು, ಪ್ರಶಾಂತ್ ಕುಮಾರ್ ಗುಂಡ್ಯಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಕೃಷ್ಣ ಭಟ್ ಕುಕ್ಕುಜೆ ಸ್ವಾಗತಿಸಿ, ನಿರ್ದೇಶಕ ಗಂಗಾಧರ ಸುಣ್ಣಾಜೆ ವಂದಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಹರೀಶ್ ವರದಿ ವಾಚಿಸಿದರು. ಸಂಘದ ಸಿಬ್ಬಂದಿ ಶೋಭಾ ಪ್ರಾರ್ಥಿಸಿದರು. ಸಂಘದ ನಿಯೋಜಿತ ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯಲತಾ, ಸಂಘದ ಹಸಿರು ತೋಟ ಮೇಲ್ವಿಚಾರಕ ರಮೇಶ್, ಹಾಲು ಪರೀಕ್ಷಕಿ ಸುಜಾತ, ಸಹಾಯಕಿ ಶೋಭಾ ಹಾಗೂ ಕೃ.ಗ. ಕಾರ್ಯಕರ್ತ ಧನಂಜಯ ಸಹಕರಿಸಿದರು.

ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷೆ ಮಮತಾ ರೈ ದೇವಸ್ಯ, ಮಾಸ್ ಸಂಸ್ಥೆಯ ಸವಣೂರು ಶಾಖಾ ವ್ಯವಸ್ಥಾಪಕ ಚೇತನ್ ಪ್ರಕಾಶ್, ಪ್ರಗತಿಪರ ಕೃಷಿಕ ಸತೀಶ್ ಶೆಟ್ಟಿ ಕಿನಾರ, ರಾಘವ ಗೌಡ, ನ್ಯಾಯವಾದಿ ಮಹಾಬಲ ಶೆಟ್ಟಿ ಕೊಮ್ಮಂಡ, ಸಂಜೀವ ಪೂಜಾರಿ ಅಗರಿ, ರತ್ನಾಕರ ಪೂಜಾರಿ ಅಗರಿ, ನಾರಾಯಣ ಗೌಡ ಪೂವ, ಮನೋಹರ್ ರೈ ಕೆರೆಕ್ಕೋಡಿ ಸಹಿತ ಸವಣೂರು ಹಾಲು ಉತ್ಪಾದಕರ ಸಂಘದ ಸದಸ್ಯರು ಭಾಗವಹಿಸಿದ್ದರು
ಸವಣೂರು ಸೀತಾರಾಮ ರೈ ಅವರಿಗೆ ಅವರ ನಿವಾಸದಲ್ಲಿ ಗೌರವರ್ಪಣೆ
ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ ಹಿರಿಯ ನಾಗರಿಕರು ವಿಭಾಗದಲ್ಲಿ ಮತ್ತು ಹಿಂಡಿ ಖರೀದಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುವ ಸಹಕಾರರತ್ನ ಸವಣೂರು ಸೀತಾರಾಮ ರೈಯವರನ್ನು ಸಂಘದ ವತಿಯಿಂದ ಆ. 22 ರಂದು ಸೀತಾರಾಮ ರೈಯವರ ನಿವಾಸಕ್ಕೆ ಭೇಟಿ ನೀಡಿದ ಸಂಘದ ಅಧ್ಯಕ್ಷ ಕೃಷ್ಣ ಭಟ್ ಕುಕ್ಕುಜೆ, ಉಪಾಧ್ಯಕ್ಷೆ ಆಶಾ ರೈ ಕಲಾಯಿ ಮತ್ತು ನಿರ್ದೇಶಕರುಗಳು ಗೌರವಿಸಿ, ಅಭಿನಂದಿಸಿದರು.










