







ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿ ಪುತ್ತೂರಿನ ಎಸ್.ಬಿ.ಬಿ. ಸೆಂಟರ್ ನಲ್ಲಿ ಶಾಖೆಯನ್ನು ಹೊಂದಿರುವ ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ. ಆಪರೇಟಿವ್ ಗೆ ಪ್ರಥಮ ಬಾರಿಗೆ ಸಾಧನಾ ಪ್ರಶಸ್ತಿ ಲಭಿಸಿದೆ.


2025-26 ನೇ ಆರ್ಥಿಕ ಸಾಲಿನಲ್ಲಿ ಸಂಘವು ರೂ. 272 ಕೋಟಿ ವ್ಯವಹಾರ, ರೂ. 163 ಕೋಟಿ ಠೇವಣಿ, ರೂ. 109 ಕೋಟಿ ಸಾಲ ನೀಡಿ ಅಭೂತಪೂರ್ವ ಸಾಧನೆ ಮಾಡಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಎಸ್ ಸಿ ಡಿ ಸಿ ಸಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ. ಎನ್. ರಾಜೇಂದ್ರ ಕುಮಾರ್ ರವರು ಸಂಘದ ಅಧ್ಯಕ್ಷರಾದ ಮಂಜಪ್ಪ ಪಿ. ಹಾಗೂ ಉಪಾಧ್ಯಕ್ಷರಾದ ಕೀರ್ತನ್ ಕುಮಾರ್ ಎಂ. ರವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.



ಈ ಸಂದರ್ಭದಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ ನ ನಿರ್ದೇಶಕರುಗಳಾದ ಶಶಿಕುಮಾರ್ ರೈ ಬಾಲ್ಯೊಟು, ಟಿ.ಜಿ.ರಾಜಾರಾಮ್ ಭಟ್, ಎಸ್.ಎನ್.ಮನ್ಮಥ, ಎಸ್.ಬಿ.ಜಯರಾಮ ರೈ, ಸಹಕಾರ ಸಂಘಗಳ ಉಪನಿಬಂಧಕರಾದ ಎಚ್. ಎನ್. ರಮೇಶ್ , ಮೊದಲಾದವರು ಉಪಸ್ಥಿತರಿದ್ದರು.










