ಅನುರಾಗ ವಠಾರದಲ್ಲಿ ಕುಶಲ ಹಾಸ್ಯಪ್ರಿಯರ ಸಂಘದ ಹಾಸ್ಯೋಲ್ಲಾಸ ಮತ್ತು ಧಾರ್ಮಿಕ ಕಾರ್ಯಕ್ರಮ

0

ಪುತ್ತೂರು: ಹಬ್ಬಗಳ ಆಚರಣೆಯು ಕೇವಲ ಸಂಭ್ರಮಕ್ಕಾಗಿ ಮಾತ್ರವಲ್ಲ, ಜೀವನ ಮೌಲ್ಯಗಳನ್ನು ಹಾಗೂ ಸಂಸ್ಕೃತಿಯನ್ನು ಜನರಿಗೆ ತಲಪಿಸುವ ರೀತಿಯಾಗಬೇಕು ಎಂದು ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಸುಜಾತಾ ಅವರು ನುಡಿದರು.

ಪುತ್ತೂರಿನ ಅನುರಾಗ ವಠಾರದ ಸಭಾಂಗಣದಲ್ಲಿ ಕುಶಲ ಹಾಸ್ಯಪ್ರಿಯರ ಸಂಘದ ವತಿಯಿಂದ ನಡೆದ ಹಬ್ಬದ ಆಚರಣೆ ಹಾಗೂ ಹಾಸ್ಯೋಲ್ಲಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾರೈಸಿದರು.

ಸುದಾಮ ಕೆದಿಲಾಯ ಅತಿಥಿಗಳನ್ನು ಪರಿಚಯಿಸಿ ಸಾಂದರ್ಭಿಕವಾಗಿ ಮಾತನಾಡಿದರು. ಸಂಘದ ಅಧ್ಯಕ್ಷರಾದ ಜಯರಾಮ ಪುಣಚಿತ್ತಾಯ, ಸದಾನಂದ ಮೂಡಬಿದರೆ ಮತ್ತು ಸತ್ಯೇಶ್ ಕೆದಿಲಾಯ ನಗೆಚಟಾಕಿ ಹಾರಿಸಿದರು. ಸುಬ್ರಹ್ಮಣ್ಯ ಶರ್ಮ ಹಾಸ್ಯ ನುಡಿಗಳನ್ನಾಡಿ, ಭಕ್ತಿಗೀತೆಯೊಂದಿಗೆ ಸಭಿಕರನ್ನು ರಂಜಿಸಿದರು.



ಸಾವಿತ್ರಿ ಭಟ್ ಬಡೆಕ್ಕಿಲ ಪ್ರಾರ್ಥಿಸಿ, ಶಂಕರಿ ಶರ್ಮ ಕಾರ್ಯಕ್ರಮವನ್ನು ನಿರ್ವಹಿಸಿದರು. ಪೂಜೆಯ ಬಳಿಕ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here