







ವಿಟ್ಲ: ಝೀ ಕನ್ನಡದ ಸರಿಗಮಪ ಲಿಟಲ್ ಚಾಂಪ್ಸ್ ರಿಯಾಲಿಟಿ ಶೋನಲ್ಲಿ ಪ್ರಥಮ ಸ್ಥಾನ ಪಡೆದು ವಿಜೇತರಾದ ವಿಟ್ಲದ ಪ್ರತಿಭೆ ಅಶ್ಮಿತ್ ಎ.ಜೆ ಅವರಿಗೆ ಹುಟ್ಟೂರಿನಲ್ಲಿ ಗೌರವ-ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿದೆ.


ಪುಣಚ ಗ್ರಾಮದ ಮೂಡಂಬೈಲ್ ನಿವಾಸಿ ಜಯರಾಮ್-ರೇವತಿ ದಂಪತಿಗಳ ಪುತ್ರ ಅಶ್ಮಿತ್ ಅವರು ರಿಯಾಲಿಟಿ ಶೋನಲ್ಲಿ ವಿಜಯಶಾಲಿಯಾಗಿದ್ದು, ಈ ಗೆಲುವಿನ ಹಿನ್ನೆಲೆಯಲ್ಲಿ ಆ. 25ರಂದು ಸಂಜೆ 3 ಗಂಟೆಗೆ ವಿಟ್ಲದಲ್ಲಿ ರೋಡ್ ಶೋ ಆಯೋಜಿಸಲಾಗಿದೆ.



ಮೆರವಣಿಗೆಯು ಸಾಲೆತ್ತೂರು ರಸ್ತೆಯ ವಿಟ್ಲ ನಿರೀಕ್ಷಣ ಮಂದಿರದಿಂದ (IB) ಹೊರಟು ಜೈನ ಬಸದಿ ವರೆಗೆ ತೆರಳಿ, ಅಲ್ಲಿಂದ ತಿರುಗಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದವರೆಗೆ ಪ್ರಮುಖ ರಸ್ತೆಯಲ್ಲಿ ಸಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಶ್ಮಿತ್‌ಗೆ ಶುಭ ಹಾರೈಸುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










