







ಪುತ್ತೂರು: ಆ. 9 ರಂದು ನಿಧನ ಹೊಂದಿದ ಪಾದಲ್ಪಾಡಿ ಆನಂದ ಚೌಟರವರ ಉತ್ತರ ಕ್ರಿಯೆ ಮತ್ತು ನುಡಿನಮನ ಸಲ್ಲಿಸುವ ಶ್ರದ್ಧಾಂಜಲಿ ಸಭೆಯು ಆ. 19 ರಂದು ಮಂಗಳೂರು ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಮಂಜುಶ್ರೀ ಸಭಾಂಗಣದಲ್ಲಿ ಜರಗಿತು.
ಶಿಕ್ಷಕ ರವೀಂದ್ರ ರೈ ರವರು ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ ಆನಂದ ಚೌಟ ಪಾದಲ್ಪಾಡಿ ಅವರು ಸಮಾಜದಲ್ಲಿ ಪ್ರೀತಿ- ವಿಶ್ವಾಸದಿಂದ ಬಾಳಿ,ಜೀವನದಲ್ಲಿ ಆದರ್ಶ ಬದುಕು ನಡೆಸಿ, ಇದೀಗ ನಮ್ಮನ್ನು ಅಗಲಿದ್ದಾರೆ, ಅವರು ವಿದೇಶದಲ್ಲಿ ಉದ್ಯೋಗಿಯಾಗಿ, ಬಳಿಕ ಕೃಷಿ ಕಾಯಕದೊಂದಿಗೆ ಸಮಾಜ ಮತ್ತು ಕುಟುಂಬದವರೊಂದಿಗೆ ಬೆರೆತು ಬಾಳುತ್ತಿದ್ದರು ಎಂದು ನುಡಿನಮನ ಸಲ್ಲಿಸಿದರು.
ಆನಂದ ಚೌಟ ರವರ ಪತ್ನಿ ಮೀನಾಕ್ಷಿ ಚೌಟ ಮನವಳಿಕೆ, ಪುತ್ರಿಯರಾದ ಅತ್ಮೀಕ ಶೆಟ್ಟಿ, ಅನ್ವಿತಾ ಚೌಟ, ಅಳಿಯ ಸಂದೇಶ್ ಶೆಟ್ಟಿ, ಸಹೋದರ ವೆಂಕಪ್ಪ ಚೌಟ ಪಾದಲ್ಪಾಡಿ,ನಾರಾಯಣ ಚೌಟ ಪಾದಲ್ಪಾಡಿ, ಭುಜಂಗ ಚೌಟ ಪಾದಲ್ಪಾಡಿ, ದಾಮೋದರ ಚೌಟ ಪಾದಲ್ಪಾಡಿ ಹಾಗೂ ಭಾವ ರವೀಂದ್ರನಾಥ ರೈ ಕುಯ್ಯೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.



ಸಮಾರಂಭದಲ್ಲಿ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ವಿವಿಧ ಸಂಘ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ನೂರಾರು ಮಂದಿ ಭಾಗವಹಿಸಿದರು.













