






- ಆತಿಥ್ಯದ ಹೊಸ ಅನುಭವಕ್ಕಾಗಿ ಶುದ್ಧ ಸಸ್ಯಾಹಾರಿ ತಾಣ
- ಸಮಾರಂಭ ಆಯೋಜನೆಗೂ ಸುಂದರ ಸಭಾಂಗಣ
ಪುತ್ತೂರು: ಬೊಳುವಾರು ಮಹಾವೀರ್ ಮಾಲ್ನಲ್ಲಿ ಆ.27ರ ಬೆಳಗ್ಗೆ 9 ಗಂಟೆಗೆ ವಿಶ್ವರಂಜಿನಿ ಹೊಟೇಲ್ ಶುಭಾರಂಭಗೊಳ್ಳಲಿದ್ದು, ಶುದ್ಧ ಸಸ್ಯಾಹಾರಿ ಆಹಾರ ಪ್ರಿಯರಿಗೆ ಪುತ್ತೂರು ಹೃದಯ ಭಾಗದಲ್ಲಿ ಹೊಸ ರುಚಿಯ ತಾಣವೊಂದು ತೆರೆದುಕೊಳ್ಳುತ್ತಿದೆ. ಉತ್ತಮ ಗುಣಮಟ್ಟದ ಆಹಾರ, ವೇಗದ ಸೇವೆ ಹಾಗೂ ಆರಾಮದಾಯಕ ವಾತಾವರಣಕ್ಕೆ ಆದ್ಯತೆ ನೀಡಿರುವ ವಿಶ್ವರಂಜಿನಿ ರೆಸ್ಟೋರೆಂಟ್ ಕುಟುಂಬ ಸದಸ್ಯರಿಗೆ ಸವಿಯೂಟ ಸೇವೆ ಮಾತ್ರವಲ್ಲದೇ ವಿವಿಧ ಸಮಾರಂಭಗಳ ಆಯೋಜನೆಗೆ ಸೂಕ್ತ ತಾಣವಾಗುವ ನಿರೀಕ್ಷೆಯಿದೆ.


ವಿಶ್ವರಂಜಿನಿ ಹೊಟೇಲ್ನ ಪ್ರಮುಖ ವಿಶೇಷತೆ ಎಂದರೆ ಅದು ಶುದ್ಧ ಸಸ್ಯಾಹಾರಿ ತಿನಿಸು. ಗ್ರಾಹಕರಿಗೆ ರುಚಿಕರವಾದ ಊಟ ಉಪಹಾರಗಳನ್ನು ತ್ವರಿತವಾಗಿ ಪೂರೈಸುವುದರ ಜೊತೆಗೆ, ನೆಮ್ಮದಿಯ ವಾತಾವರಣದಲ್ಲಿ ಆಹಾರ ಸವಿಯುವ ಅನುಭವ ನೀಡಲು ವಿಶ್ವರಂಜಿನಿ ಸಜ್ಜಾಗಿದೆ. ವಿಶೇಷವಾಗಿ ನಾನ್-ಎಸಿ ಡೈನಿಂಗ್ ವ್ಯವಸ್ಥೆಯೊಂದಿಗೆ, ಪ್ರತ್ಯೇಕವಾಗಿ ಎಸಿ ಡೈನಿಂಗ್ ಸೌಲಭ್ಯವೂ ಗ್ರಾಹಕರಅನುಕೂಲಕ್ಕೆ ಮತ್ತಷ್ಟೂ ಪೂರಕವಾಗಿದೆ.




ಕುಟುಂಬದ ಶುಭ ಸಮಾರಂಭಗಳು, ಹುಟ್ಟುಹಬ್ಬದ ಆಚರಣೆಗಳು ಹಾಗೂ ಇತರ ಕಾರ್ಯಕ್ರಮಗಳನ್ನು ಆಯೋಜಿಸಲು ಇಲ್ಲಿ ಅಚ್ಚುಕಟ್ಟಾದ ಸಭಾಂಗಣದ ವ್ಯವಸ್ಥೆ ಜೊತೆಗೆ, ಸಭೆಗಳು ಹಾಗೂ ವೃತ್ತಿಪರ ಕಾರ್ಯಕ್ರಮಗಳಿಗೆ ಅನುಕೂಲವಾಗುವ ಕಾನರೆನ್ಸ್ ಹಾಲ್ ಸೌಲಭ್ಯವೂ ಕಲ್ಪಿಸಲಾಗಿದೆ. ಹೀಗಾಗಿ ಊಟದ ಜತೆಗೆ ಸಣ್ಣ-ದೊಡ್ಡ ಕಾರ್ಯಕ್ರಮಗಳನ್ನು ಒಂದೇ ಸೂರಿನಡಿ ಆಯೋಜಿಸಲು ವಿಶ್ವರಂಜಿನಿ ಹೊಟೇಲ್ ಅನುಕೂಲಕರ ತಾಣವಾಗಿದ್ದು , ಪಾರ್ಕಿಂಗ್ ವ್ಯವಸ್ಥೆ ಕೂಡ ಕಲ್ಪಿಸಿರುವುದು ಗ್ರಾಹಕರಿಗೆ ಹೆಚ್ಚಿನ ಅನುಕೂಲ ಒದಗಿಸಲಿದೆ. ವೇಗದ ಸೇವೆ, ಸ್ವಚ್ಛತೆ, ಉತ್ತಮ ಆತಿಥ್ಯ ಮತ್ತು ಆರಾಮದಾಯಕ ಊಟದ ಅನುಭವಕ್ಕೆ ಒತ್ತು ನೀಡಿರುವ ವಿಶ್ವರಂಜಿನಿ ಹೊಟೇಲ್, ಗ್ರಾಹಕರ ಮನಗೆಲ್ಲುವ ವಿಶ್ವಾಸದೊಂದಿಗೆ ತನ್ನ ಪಯಣವನ್ನು ಆರಂಭಿಸಲಿದೆ.
ನೂತನ ರೆಸ್ಟೋರೆಂಟಿನ ಉದ್ಘಾಟನೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ , ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ , ಮಾಜಿ ಶಾಸಕ ಸಂಜೀವ ಮಠಂದೂರು , ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ,ಮಹಾವೀರ ಮೆಡಿಕಲ್ ಸೆಂಟರ್ ಆಡಳಿತ ನಿರ್ದೇಶಕರಾದ ಅಶೋಕ್ ಪಡಿವಾಳ್, ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ, ಮಹಾವೀರ ವೆಂಚರ್ಸ್ನ ಆಡಳಿತ ಪಾಲುದಾರ ಅಜಯ್ ಪಡಿವಾಳ್, ದ.ಕ. ಮ್ಯೂಚುವಲ್ ಬೆನಿಫಿಟ್ ನಿಽ ಸ್ಥಾಪಕ ಸದಸ್ಯರಾದ ಆಲ್ವಿನ್ ಜೋಯೆಲ್ ನರೊನ್ಹಾ , ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲ ಅಧ್ಯಕ್ಷ ಸಂಜೀವ ಪೂಜಾರಿ , ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ , ವಿಜಯ ಸಾಮ್ರಾಟ್ ಪುತ್ತೂರು ಇದರ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ, ಉದ್ಯಮಿ ಶಿವರಾಮ್ ಆಳ್ವ , ಪುತ್ತೂರು ಉಪ ವಿಭಾಗದ ಡಿವೈಎಸ್ಪಿ ಪ್ರಮೋದ್ ಕುಮಾರ್ , ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಚ್ ಮೊಹಮ್ಮದ್ ಅಲಿ ಭಾಗವಹಿಸಲಿದ್ದಾರೆ. ವೈದ್ಯ ಡಾ. ಸುರೇಶ್ ಪುತ್ತೂರಾಯ , ದೈವದ ಮಧ್ಯಸ್ಥ ಮನ್ಮಥ ಶೆಟ್ಟಿ , ಕ್ಯಾಂಪ್ಕೋ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ , ಬಿಜೆಪಿ ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ , ಉದ್ಯಮಿ ವಿಜಯ ಕುಮಾರ್ ಸೊರಕೆ , ವಾಗ್ಮಿ ಡಾ | ಶ್ರೀ ಕೃಷ್ಣ ಉಪಾಧ್ಯಾಯ , ಸಚಿನ್ ಟ್ರೇಡಿಂಗ್ ಮಾಲೀಕ ಸಚಿನ್ ನಾಯಕ್ , ತುಳು ಚಿತ್ರ ನಟ ವಿನೀತ್ ಕುಮಾರ್ , ಅಭ್ಯುದಯ ಸೌಹಾರ್ದ ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕ ವಿಕ್ಟರ್ ಶರೋನ್ ಡಿಸೋಜ ಯುಟ್ಯೂಬರ್ ಸುದರ್ಶನ್ ಭಟ್ ಮತ್ತು ಮನೋಹರ್ ಭಟ್ ಹಾಗೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮೊದಲಾದ ಗಣ್ಯರು ಉಪಸ್ಥಿತರಿರಲಿದ್ದಾರೆಯೆಂದು ಮಾಲೀಕ ವಿಶ್ವನಾಥ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವರಂಜಿನಿಯ ಪಯಣ…
1985ರಲ್ಲಿ ಸುಳ್ಯ ತಾಲೂಕಿನ ಪಂಜದಲ್ಲಿ ವಿಶ್ವರಂಜಿನಿ ಬೇಕರಿಯ ಮೂಲಕ ಉದ್ಯಮ ಕ್ಷೇತ್ರಕ್ಕೆ ಹೆಜ್ಜೆಯಿಟ್ಟ ಕುರಿಯ ಮಾಪಲ ಬಾರಿಕೆ ನಿವಾಸಿ ವಿಶ್ವನಾಥ ಪೂಜಾರಿಯವರ ಪರಿಶ್ರಮ, ಪ್ರಾಮಾಣಿಕತೆ ಮತ್ತು ಗುಣಮಟ್ಟದ ಸೇವೆಯ ಮೂಲಕ ಉದ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದರು. 1987ರಲ್ಲಿ ಪಂಜ ಪಂಚಾಯತ್ ಸಂಕೀರ್ಣದಲ್ಲಿ ವಿಶ್ವರಂಜಿನಿ ಹೋಟೇಲ್ ಆರಂಭಿಸುವ ಮೂಲಕ ಗ್ರಾಹಕ ಸೇವಾ ಕ್ಷೇತ್ರಕ್ಕೆ ಪಾದಾರ್ಪಣೆಯಾಯಿತು. ಸುಮಾರು 39 ವರ್ಷಗಳ ಹೊಟೇಲ್ ಉದ್ಯಮದ ಅನುಭವ, ಅನೇಕ ಗ್ರಾಹಕರ ವಿಶ್ವಾಸ ಮತ್ತು ನಿರಂತರ ಸೇವೆಯ ಪರಂಪರೆಯನ್ನು ಕಟ್ಟಿಕೊಟ್ಟಿದೆ. ರುಚಿಕರ ಆಹಾರ, ಆತ್ಮೀಯ ಆತಿಥ್ಯ ಹಾಗೂ ಗ್ರಾಹಕರ ತೃಪ್ತಿಯನ್ನು ಸದಾ ಆದ್ಯತೆಯಾಗಿ ಹೊಂದಿಕೊಂಡಿರುವ ವಿಶ್ವರಂಜಿನಿಯ ಈ ಪಯಣವು ಕೇವಲ ಒಂದು ಉದ್ಯಮದ ಯಶೋಗಾಥೆಯಲ್ಲ; ಪರಿಶ್ರಮ, ನಂಬಿಕೆ ಮತ್ತು ಸೇವಾ ಮನೋಭಾವದಿಂದ ಕಟ್ಟಿದ ನಾಲ್ಕು ದಶಕಗಳ ಸಾರ್ಥಕ ಸಾಧನೆ.










