






ಪುತ್ತೂರು: ಸುದಾನ ವಸತಿ ಶಾಲೆಯ ಕ್ರೀಡಾಂಗಣದಲ್ಲಿ ಆಗಸ್ಟ್ 29 ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸುದಾನ ವಸತಿ ಶಾಲೆ ಪುತ್ತೂರು ಜಂಟಿ ಆಶ್ರಯದಲ್ಲಿ ಪುತ್ತೂರು ನಗರ ವಲಯ ಮಟ್ಟದ 14 ರ ವಯೋಮಾನದ ವಾಲಿಬಾಲ್ ಪಂದ್ಯಾಟ ನಡೆಯಿತು.


ಪಂದ್ಯಾಟವನ್ನು ತಾಲೂಕು ಪರಿವೀಕ್ಷಣಾಧಿಕಾರಿ ಸಿಲ್ವಿಯಾ ಅವರು ವಾಲಿಬಾಲ್ ಸಹಿತ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿ ಕೃಷ್ಣಯ್ಯ, ಸಹ ನೋಡಲ್ ಅಧಿಕಾರಿ ಪ್ರಮೀಳಾ, ಶಾಲಾ ಮುಖ್ಯೋಪಾಧ್ಯಾಯಿನಿ ಶೋಭಾ ನಾಗರಾಜ್, ಶಾಲಾ ಆಡಳಿತಾಧಿಕಾರಿ ಸುಶಾಂತ್ ಹಾರ್ವಿನ್, ಕೋಶಾಧಿಕಾರಿ ಆಸ್ಕರ್ ಆನಂದ್, ಸುದಾನ ಶಕ್ತಿ ಸ್ಪೋರ್ಟ್ಸ್ ಕ್ಲಬ್ ಸಂಯೋಜಕಿ ಗಾಯತ್ರಿ ಕೆ. ಉಪಸ್ಥಿತರಿದ್ದರು.



ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಫಲಕ ನೀಡಿ ಸಹಕರಿಸಿದ ಶಿಲ್ಪಾ ರೈ (ಕ.ರಾ.ರ.ಸಾ.ನಿ) ಮುಖ್ಯ ಅಭ್ಯಾಗತರಾಗಿ ಕ್ರೀಡಾಪಟುಗಳಿಗೆ ಪ್ರಶಸ್ತಿ ವಿತರಿಸಿದರು.ಬಾಲಕರ ವಿಭಾಗದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಶಾಲೆ ಪ್ರಥಮ, ಸುದಾನ ವಸತಿಯುತ ಶಾಲೆ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಡಿಪ್ಪಾಡಿ ಪ್ರಥಮ, ಸೈಂಟ್ ವಿಕ್ಟರ್ಸ್ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿತು.ಪಂದ್ಯಾಟವನ್ನು ಶಕ್ತಿ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿತ್ತು. ಸುದಾನ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಲೀಲಾವತಿ, ಪುಷ್ಪರಾಜ್, ನವೀನ್ ಮತ್ತು ಜೀವಿತಾ ಎನ್.ಕೆ. ಸಹಕರಿಸಿದರು.










