






ವಿಟ್ಲ: ಇಲ್ಲಿನ ಅರಮನೆ ರಸ್ತೆಯ ನಾಯಕ್ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಆ.30ರಂದು ರವಿ ಡೆಂಟಲ್ ಕ್ಲಿನಿಕ್ ಶುಭಾರಂಭಗೊಂಡಿತು. ಸುಳ್ಯ ಕೆವಿಜಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರೊಫೆಸರ್ ಹಾಗೂ ವಿಭಾಗ ಮುಖ್ಯಸ್ಥರಾಗಿರುವ ಡಾ| ಎಲ್. ಕೃಷ್ಣಪ್ರಸಾದ್ ದೀಪಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿದರು.



ಸುಳ್ಯ ಕೆವಿಜಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಮಾಧವ ಬಿ.ಟಿ., ನಾಯಕ್ ಕಾಂಪ್ಲೆಕ್ಸ್ ನ ಮಾಲಕರು, ಉದ್ಯಮಿ ಎಂ. ರಾಧಾಕೃಷ್ಣ ನಾಯಕ್, ಲಯನ್ ಪೂರ್ವ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಸುದರ್ಶನ್ ಪಡಿಯಾರ್, ವಿಟ್ಲ ಬಂಟರ ಸಂಘದ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಎರ್ಮೆನಿಲೆ, ಹಿರಿಯ ದಂತವೈದ್ಯ ಡಾ. ಶರತ್ ಚಂದ್ರ ಶೆಟ್ಟಿ, ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಮಂಗೇಶ್ ಭಟ್ ವಿಟ್ಲ, ನಿವೃತ್ತ ಎಲ್.ಐ. ಸಿ. ಅಧಿಕಾರಿ ಸದಾನಂದ ಶೆಟ್ಟಿ, ಶ್ರವಣ ಜ್ಯುವೆಲ್ಲರ್ಸ್ ನ ಮಾಲಕರಾದ ಸದಾಶಿವ ಆಚಾರ್ಯ, ಉದ್ಯಮಿ ಸುಬ್ರಾಯ ಪೈ, ನಿವೃತ್ತ ಸೈನಿಕ ಹರೀಶ್ ಶೆಟ್ಟಿ, ಡಾ. ಆಶಾ ಪುತ್ತೂರು, ಡಾ. ನಿಶಿತ್ ಪುತ್ತೂರು, ಮನೋಜ್ ವಿಟ್ಲ, ಎಸ್.ಡಿ.ಎಂ. ಕಾನೂನು ಕಾಲೇಜಿನ ಪ್ರಾಂಶುಪಾಲರಾದ ತಾರನಾಥ ಶೆಟ್ಟಿ, ವಜ್ರ ಜ್ಯುವೆಲ್ಲರ್ಸ್ ನ ಮಾಲಕ ರವಿಚಂದ್ರ ಕಾಮತ್ , ಗೀತಾ ಜ್ಯುವೆಲ್ಲರ್ಸ್ ಮಾಲಕ ಪ್ರಭಾಕರ ಆಚಾರ್ಯ,
ಉದ್ಯಮಿ ಸುರೇಶ್ ಮಂಗಳೂರು, ಸತೀಶ್ ಶೆಟ್ಟಿ ಕೊಂಬೆಟ್ಟು, ರಾಜೇಶ್ ಶೆಟ್ಟಿ, ಪುತ್ತೂರು ಲಯನ್ಸ್ ಕ್ಲಬ್ ನ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಸುಧಾಕರ ನಾಯಕ್ ಪುತ್ತೂರು, ಸದಾನಂದ ಗೌಡ, ವಕೀಲರಾದ ಹರಿಣಾಕ್ಷಿ ಜೆ. ಶೆಟ್ಟಿ, ಅರುಣ್ ಕುಮಾರ್ ರೈ ಕಬಕ, ವೈದ್ಯರರಾದ ಡಾ. ಕ್ಷಮಾ ರೈ ರವರ ತಂದೆ ಅರವಿಂದ ಭಗವಾನ್ ರೈ, ತಾಯಿ ಮಲ್ಲಿಕಾ ಎ ರೈ ಸೇರಿದಂತೆ ಹಲವರು ಉಪಸ್ಥಿತರಿದ್ದು ಸಂಸ್ಥೆಗೆ ಶುಭಹಾರೈಸಿದರು. ಡೆಂಟಲ್ ಸರ್ಜನ್ ಡಾ.ಕ್ಷಮಾ ರೈ ಸ್ವಾಗತಿಸಿದರು.













