ಜೀರ್ಣೋದ್ಧಾರಗೊಳ್ಳಲಿದೆ ಇತಿಹಾಸ ಪ್ರಸಿದ್ಧ ಕಲ್ಪಣೆ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಮಂಜಕೊಟ್ಯ- ವಿಜ್ಞಾಪನಾ ಪತ್ರ ಬಿಡುಗಡೆ

0

ಪುತ್ತೂರು: ಸರ್ವೆ ಗ್ರಾಮದ ಕಲ್ಪಣೆಯಲ್ಲಿರುವ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಮಂಜಕೊಟ್ಯದ ಜೀರ್ಣೋದ್ಧಾರ ಕಾರ್ಯ ನಡೆಯಲಿದ್ದು ಅದರ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ ಆ.31ರಂದು ಕಲ್ಪಣೆ ಮೊಗೇರ ಸಮುದಾಯ ಭವನದಲ್ಲಿ ನಡೆಯಿತು.

ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ದ.ಕ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು ಮಾತನಾಡಿ ಒಗ್ಗಟ್ಟಿನಿಂದ ಯಾವುದೇ ಕಾರ್ಯ ಮಾಡಿದರೂ ಅದರಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ, ಕಲ್ಪಣೆ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಮಂಜಕೊಟ್ಯ ಇದರ ಜೀರ್ಣೋದ್ಧಾರ ನಡೆಯಲಿರುವ ಹಿನ್ನೆಲೆಯಲ್ಲಿ ಎಲ್ಲರೂ ಸಹಕಾರ ಕೊಡುವ ಮೂಲಕ ಯಶಸ್ಸುಗೊಳಿಸಬೇಕು ಎಂದು ಹೇಳಿದರು.

ಮುಂಡೂರು ಗ್ರಾ.ಪಂ ಮಾಜಿ ಸದಸ್ಯ ಕಮಲೇಶ್ ಸರ್ವೆದೊಳಗುತ್ತು ಮಾತನಾಡಿ ಈ ಕ್ಷೇತ್ರಕ್ಕೆ ಶಾಸಕರು ಈಗಾಗಲೇ ಧಾರ್ಮಿಕ ದತ್ತಿ ಇಲಾಖೆಯಿಂದ 10 ಲಕ್ಷ ರೂ ಮಂಜೂರುಗೊಳಿಸಿದ್ದಾರೆ, ಜೀರ್ಣೋದ್ಧಾರ ಕಾರ್ಯಕ್ಕೆ ಹೆಚ್ಚಿನ ಖರ್ಚುವೆಚ್ಚ ಇರುವ ಕಾರಣ ನಾವೆಲ್ಲರೂ ಸೇರಿ ಈ ಕ್ಷೇತ್ರವನ್ನು ಬೆಳಗಿಸುವ ಕಾರ್ಯ ಮಾಡೋಣ ಎಂದು ಹೇಳಿದರು.

ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಮಂಜಕೊಟ್ಯ ಇದರ ಗೌರವಾಧ್ಯಕ್ಷ ರಾಮಚಂದ್ರ ಸೊರಕೆ ಮಾತನಾಡಿ ನಾವೆಲ್ಲರೂ ಒಂದೇ, ನಮ್ಮಲ್ಲಿ ಮೇಲು-ಕೀಳು ಎಂಬ ಬೇಧಭಾವವಿಲ್ಲ, ಎಲ್ಲರನ್ನು ವಿಶ್ವಾಸಕ್ಕೆ ಪಡೆದುಕೊಂಡು ಕಲ್ಪಣೆ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಮಂಜಕೊಟ್ಯ ಇದರ ಜೀರ್ಣೋದ್ಧಾರವನ್ನು ಮಾಡಬೇಕಾಗಿದೆ ಎಂದು ಹೇಳಿದರು.

ಕೆದಂಬಾಡಿ ಗ್ರಾ.ಪಂ ಮಾಜಿ ಸದಸ್ಯ ಪ್ರವೀಣ್ ಶೆಟ್ಟಿ ತಿಂಗಳಾಡಿ ಮಾತನಾಡಿ ಕಲ್ಪಣೆ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಮಂಜಕೊಟ್ಯ ಇದರ ಜೀರ್ಣೋದ್ಧಾರ ಕಾರ್ಯಕ್ಕೆ ನಾವೆಲ್ಲರೂ ಸಹಕಾರ ಕೊಡಬೇಕು, ನಾನು ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದನಿದ್ದೇನೆ ಎಂದು ಹೇಳಿದರು.

ಪುತ್ತೂರು ತಾಲೂಕು ಮೊಗೇರ ಸಂರ್ಘದ ಅಧ್ಯಕ್ಷ ಸುಂದರ ಕೇಪುಳು, ಕಾರ್ಯದರ್ಶಿ ಮುಕೇಶ್ ಕೆಮ್ಮಿಂಜೆ, ಉಮೇಶ್ ಸುವರ್ಣ ಸೊರಕೆ ಮೊದಲಾದವರು ಮಾತನಾಡಿ ಜೀರ್ಣೋದ್ಧಾರಗೊಳ್ಳಲಿರುವ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಮಂಜಕೊಟ್ಯ ಇದಕ್ಕೆ ಸಹಕಾರ ನೀಡುವುದಾಗಿ ತಿಳಿಸಿ ಸಲಹೆ ಸೂಚನೆಗಳನ್ನು ನೀಡಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕುಟ್ಟಿ ಎಂ.ಕೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಜ್ಞಾಪನಾ ಪತ್ರ ಬಿಡುಗಡೆ:
ಜೀರ್ಣೋದ್ಧಾರಗೊಳ್ಳಲಿರುವ ಕಲ್ಪಣೆ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಮಂಜಕೊಟ್ಯ ಇದರ ವಿಜ್ಞಾಪನಾ ಪತ್ರವನ್ನು ಉಮೇಶ್ ಸುವರ್ಣ ಬಿಡುಗಡೆಗೊಳಿಸಿದರು.

ವೇದಿಕೆಯಲ್ಲಿ ಯತೀಶ್ ರೈ ಮೇಗಿನಗುತ್ತು, ರಾಮಣ್ಣ ರೈ ಬೊಟ್ಯಾಡಿ, ರಾಧಾಕೃಷ್ಣ ರೈ ರೆಂಜಲಾಡಿ, ಮಾಯಿಲ ಸೊರಕೆ, ಶಶಿಧರ ಕಡ್ಯ, ಪುತ್ರಮೊಗೇರ ಅಲ್ಂಗಪೆ, ಮಾಂಕು ಮೊಗೇರ ಅರಂತೋಡು ಉಪಸ್ಥಿತರಿದ್ದರು.

ಕಲ್ಪಣೆ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಮಂಜಕೊಟ್ಯ ಇದರ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಅರುಣ್ ಕಲ್ಲಮ ಸ್ವಾಗತಿಸಿದರು. ಸವಿತಾ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.
ಗಣೇಶ್ ನೇರೋಳ್ತಡ್ಕ, ಚೋಮ ಭಕ್ತಕೋಡಿ, ಧನಂಜಯ ಭಕ್ತಕೋಡಿ, ಬಾಲಕೃಷ್ಣ ಕಲ್ಲಗುಡ್ಡೆ, ದಿನೇಶ್ ಭಕ್ತಕೋಡಿ, ಮಂಜುನಾಥ ಪ್ರಸಾದ್ ಸಹಕರಿಸಿದರು.

LEAVE A REPLY

Please enter your comment!
Please enter your name here