







ಪುತ್ತೂರು: ಕೆ.ಎಸ್.ಆರ್.ಟಿ.ಸಿ ನಿವೃತ್ತ ಚಾಲಕ ಮುಕ್ರಂಪಾಡಿ ನಿವಾಸಿ ಶ್ರೀನಿವಾಸ ಆಚಾರ್ಯ(76ವ)ರವರು ಸೆ.8ರಂದು ನಿಧನರಾದರು.


ನಿವೃತ್ತಿಯ ಬಳಿಕ ಮಗಳಂದಿರ ಮನೆಗೆ ಹೋಗಿ ಬರುತ್ತಿದ್ದ ಅವರು ಸಾಮೆತ್ತಡ್ಕದಲ್ಲಿರುವ ಪುತ್ರಿ ಬ್ಯಾಂಕ್ ಉದ್ಯೋಗಿ ಮಮತಾ ಅವರ ಮನೆಯಲ್ಲಿದ್ದರು. ಆರೋಗ್ಯದಲ್ಲಿ ಏರು ಪೇರಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.



ಅಲ್ಲಿ ಅವರು ನಿಧನರಾದರು. ಮೃತರು ಪುತ್ರಿಯರಾದ ಯಶೋದಾ, ಮಮತಾ, ಶಿಲ್ಪ, ಮಾದವಿ, ಪಂಚಮಿ, ಸುಮ, ಸಿಂಧು, ವರ್ಷ ಮತ್ತು ಅಳಿಯಂದಿರು ಹಾಗು ಮೊಮ್ಮಕ್ಕಳನ್ನು ಅಗಲಿದ್ದಾರೆ.










