







ಪುತ್ತೂರು: ನೆಲ್ಯಾಡಿ ದಿ. ಕೃಷ್ಣ ಜೋಗಿ ಅವರ ಪತ್ನಿ ಸೀತಾ ಜೋಗಿ (87) ಅವರು ಪುತ್ತೂರು ಕೆಮ್ಮಿಂಜೆ ಗ್ರಾಮದ ಪುತ್ತೂರಮೂಲೆ ನಿವಾಸಿ ಹಾಗೂ ಪುತ್ತೂರು ಜೋಗಿ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿರುವ ಅಳಿಯ ದಯಾನಂದ ಜೋಗಿ ಅವರ ಮನೆಯಲ್ಲಿ ನಿಧನರಾದರು.


ಸೀತಾ ಅವರು ಹಲವು ವರ್ಷಗಳಿಂದ ಅಳಿಯ ದಯಾನಂದ ಮತ್ತು ಮಗಳು ವಿಜಯ ಅವರ ಜೊತೆಗಿದ್ದರು. ಮೃತರು ಪುತ್ರಿಯರಾದ ಮಲ್ಲಿಕಾ, ಪುಷ್ಪ, ಮುಂಡೂರು ಶಾಲೆಯ ಮುಖ್ಯಗುರು ವಿಜಯ ದಯಾನಂದ ಹಾಗೂ ಪುತ್ತೂರು ಅರಣ್ಯ ಇಲಾಖೆಯ ಸಿಬ್ಬಂದಿ ಶ್ರೀಲತಾ ಸೇರಿದಂತೆ ಅಳಿಯಂದಿರು, ಮೊಮ್ಮಕ್ಕಳು ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.



ಮೃತರ ಅಂತ್ಯಸಂಸ್ಕಾರವನ್ನು ಸೆ.9ರಂದು ಮಧ್ಯಾಹ್ನ 12 ಗಂಟೆಯೊಳಗೆ ನೆರವೇರಿಸಲಾಗುವುದು ಎಂದು ಅಳಿಯ ದಯಾನಂದ ಜೋಗಿ ತಿಳಿಸಿದ್ದಾರೆ.










