







ಪಾಣಾಜೆ: ಪಾಣಾಜೆ ಹವ್ಯಕರು ವತಿಯಿಂದ ಸಂಸ್ಕಾರ ಮತ್ತು ಜೀವನದ ಮೌಲ್ಯಗಳು ಉಪನ್ಯಾಸ ಮತ್ತು ಮುಕ್ತ ಚರ್ಚೆ ಕಾರ್ಯಕ್ರಮ ಇತ್ತೀಚೆಗೆ ಪಾಣಾಜೆ ನೆಲ್ಲಿತ್ತಿಮಾರ್ ಶ್ರೀ ದುರ್ಗಾ ಸಭಾಭವನದಲ್ಲಿ ಜರಗಿತು.


ಪಾಣಾಜೆ ಹವ್ಯಕರು ಸಂಘವನ್ನು ಸಂಘದ ಅಧ್ಯಕ್ಷ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು ದೀಪ ಬೆಳಗಿಸುವ ಮೂಲಕ ಉದ್ಘಾಟನೆಗೊಳಿಸಿದರು. ಸಂಪನ್ಮೂಲ ವ್ಯಕ್ತಿ ಪವನ್ ಕಿರಣ್ ಕೆರೆ ಅವರಿಂದ ಸಂಸ್ಕಾರ ಮತ್ತು ಜೀವನ ಮೌಲ್ಯಗಳು ಎಂಬ ವಿಷಯಗಳ ವಿಷಯಗಳ ಬಗ್ಗೆ ಉಪನ್ಯಾಸ ನಡೆಯಿತು.




ವೇದಿಕೆಯಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಇದರ ಸ್ಥಾಪಕ ಅಧ್ಯಕ್ಷರಾದ ಅರುಣ್ ಕುಮಾರ್ ಪುತ್ತಿಲ ಮತ್ತು ಸಂಘದ ಸದಸ್ಯರು ಹಿರಿಯರು ಭಾಗವಹಿಸಿದ್ದರು. ಪಾಣಾಜೆ ಪೆರ್ಲ ಇರ್ದೆ ಬೆಟ್ಟಂಪಾಡಿ ಗ್ರಾಮದ ಹವ್ಯಕರು ಉಪಸ್ಥಿತರಿದ್ದರು. ರಕ್ಷಿತಾ ಕಾಕೆಕೊಚ್ಚಿ ಪ್ರಾರ್ಥಿಸಿದರು.










