






- ಅಕ್ಷಯ ಸೇವಾ ಪುರಸ್ಕಾರ, ಅಕ್ಷಯ ಗುರು ಪುರಸ್ಕಾರ, ಅಕ್ಷಯ ಗೌರವ ಪುರಸ್ಕಾರ, 8 ಸಮ್ಮಾನ ಪುರಸ್ಕೃತರು
ಪುತ್ತೂರು: ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಪ್ಯ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಸೆ.12 ರಂದು ಪೂರ್ವಾಹ್ನ ಜರಗಲಿದೆ.


ಕಾರ್ಯಕ್ರಮದ ಉದ್ಘಾಟನೆಯನ್ನು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕಿ ಕಲಾವತಿ ಜಯರಾಮ್ ಜಯಂತ್ ರವರು ನೆರವೇರಿಸಿ ಕೊಡಲಿದ್ದಾರೆ. ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಯಂತ್ ನಡುಬೈಲುರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸನ್ಮಾನಿತ ಗಣ್ಯರನ್ನು ಶಾಸಕ ಅಶೋಕ್ ಕುಮಾರ್ ರೈರವರು ಸನ್ಮಾನಿಸಲಿದ್ದಾರೆ. ಕುಂಬ್ರ ಮೂರ್ತೆದಾರರ ಸಂಘದ ಅಧ್ಯಕ್ಷ ಆರ್.ಸಿ ನಾರಾಯಣ್ ರವರು ಪುಸ್ತಕ ಬಿಡುಗಡೆಯನ್ನು ನೆರವೇರಿಸಲಿದ್ದಾರೆ.



ಅಕ್ಷಯ ಸೇವಾ ಪುರಸ್ಕಾರ/ಅಕ್ಷಯ ಗುರು ಪುರಸ್ಕಾರ/ಅಕ್ಷಯ ಗೌರವ ಪುರಸ್ಕಾರ:
ಈ ಸಂದರ್ಭದಲ್ಲಿ ಬೊಳ್ವಾರು ಮಹಾವೀರ ಆಸ್ಪತ್ರೆಯ ವೈದ್ಯ ಡಾ.ಸುರೇಶ್ ಪುತ್ತೂರಾಯರವರಿಗೆ ಅಕ್ಷಯ ಸೇವಾ ಪುರಸ್ಕಾರ, ಸಂತ ಫಿಲೋಮಿನಾ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಎಸ್.ಐ ಭಟ್ ರವರಿಗೆ ಅಕ್ಷಯ ಗುರು ಪುರಸ್ಕಾರ, ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಇಬ್ರಾಹಿಂ ಕೆ.ರವರಿಗೆ ಅಕ್ಷಯ ಗೌರವ ಪುರಸ್ಕಾರವನ್ನು ಪ್ರದಾನ ಮಾಡಲಾಗುತ್ತದೆ.
ಸಮ್ಮಾನ ಪುರಸ್ಕೃತರು:
ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದು ಆ ವಿದ್ಯಾರ್ಥಿಗಳ ಹೆತ್ತವರು ಶಿಕ್ಷಕರಾಗಿದ್ದ ಸಂದರ್ಭದಲ್ಲಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು ಪ್ರಸಕ್ತ ವರ್ಷದ ಪ್ರಥಮ ಪದವಿ ವಿದ್ಯಾರ್ಥಿಗಳ ಪೋಷಕ ಶಿಕ್ಷಕರಾದ ಆಲರ್ಮೆ ಅಂಗನವಾಡಿ ಕೇಂದ್ರದ ಧೂಮಾವತಿ, ತೆಂಕಿಲ ವಿವೇಕಾನಂದ ಶಾಲೆಯ ರುಕ್ಮಯ ಪೂಜಾರಿ ಬಿ, ನೇರಲ್ಪಲ್ಕೆ ಅಂಗನವಾಡಿ ಕೇಂದ್ರದ ಮೋಹಿನಿ, ಮುಂಡೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ವನಿತಾ ಬಿ, ಕನ್ಯಾನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಳಿನಿ ಪಿ, ಅಜ್ಜಿಕಲ್ಲು ಅಂಗನವಾಡಿ ಕೇಂದ್ರದ ಗೀತಾ ಡಿ, ಕೆಲಿಂಜ ಅಂಗನವಾಡಿ ಕೇಂದ್ರದ ಡಿ.ರೇವತಿ, ಉಪ್ಪಿನಂಗಡಿ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಸುಮಲತಾರವರಿಗೆ ಸನ್ಮಾನ ಪುರಸ್ಕೃತ ಕಾರ್ಯಕ್ರಮ ನೆರವೇರಲಿದೆ ಎಂದು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ, ಬೋಧಕೇತರ ವೃಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









