ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸುವರ್ಣ ಮಹೋತ್ಸವ ಆಚರಣೆ – ಅಡಿಕೆ ರಫ್ತು ಅವಕಾಶಗಳು ಮತ್ತು ಸಾಧಕ-ಬಾಧಕಗಳು ವಿಚಾರಗೋಷ್ಠಿ

0

ಪುತ್ತೂರು: ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಸುವರ್ಣ ಮಹೋತ್ಸವದ ವರ್ಷಾಚರಣೆಯ ಪ್ರಯುಕ್ತ, ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜದ ಸಹಯೋಗದಲ್ಲಿ “ಅಡಿಕೆ ರಫ್ತುಗಳಿಗೆ ಇರುವ ಅವಕಾಶ ಮತ್ತು ಅದರ ಸಾಧಕ-ಬಾಧಕಗಳು” ವಿಷಯದ ಕುರಿತು ವಿಚಾರಗೋಷ್ಠಿ ಹಾಗೂ ಸಭಾ ಕಾರ್ಯಕ್ರಮವು ಪರ್ಪುಂಜದ ’ಶಿವಕೃಪಾ ಆಡಿಟೋರಿಯಂ’ನಲ್ಲಿ ಸೆ.10 ರಂದು ನಡೆಯಿತು.


ಅಡಿಕೆ ಬೆಳೆಗಾರರಿಗೆ ಹೊಸ ದಾರಿ ಮತ್ತು ಚಿಂತನೆ:
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯಕುಮಾರ್ ರೈ ಕೋರಂಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದಕ್ಷಿಣ ಕನ್ನಡ, ಉಡುಪಿ ಕಾಸರಗೋಡು ಹಾಗೂ ದೇಶದ ಬೇರೆ ಬೇರೆ ಭಾಗದಲ್ಲಿ ಅಡಿಕೆಯನ್ನು ಪ್ರಮುಖ ಬೆಳೆಯಾಗಿ ಬೆಳೆಯುತ್ತಾರೆ ಪ್ರಸ್ತುತ ಅಡಿಕೆ ಧಾರಣೆ ಕೆ. ಜಿ ಒಂದಕ್ಕೆ 559 ನೀಡುತ್ತಿದೆ. ಆದರೆ ಅಡಿಕೆ ಬೆಳೆಗಾರರಲ್ಲಿ ಅತಂಕ ಸೃಷ್ಟಿಯಾಗುತ್ತಿದೆ. ಸರಕಾರವು ಅಡಿಕೆಯನ್ನು ನೇರವಾಗಿ ಆಹಾರ ಪಟ್ಟಿಗೆ ಸೇರಿಸಲು ಒಪ್ಪುವುದಿಲ್ಲ ಕೃಷಿ ತೋಟಗಾರಿಕೆ ಅಧಿಕಾರಿಗಳು, ಅಡಿಕೆಯ ಜತೆಗೆ ಇತರ ಉಪ ಬೆಳೆಗಳನ್ನು ಬೆಳೆಯಲು ಹೇಳುತ್ತಾರೆ ಇದರಿಂದ ಅಡಿಕೆ ಬೆಳೆ ಮುಂದಿನ ದಿನಗಳಲ್ಲಿ ಇರಬಹುದಾ ಎಂಬ ಬಗ್ಗೆ ಅಡಿಕೆ ಬೆಳೆಗಾರರಲ್ಲಿ ಅತಂಕ ಉಃಟಾಗಿದೆ. ಇದರಿಂದ ಅಡಿಕೆ ಉಪಯೋಗ ಏನು ಮತ್ತು ಮಾರಟ ವ್ಯವಸ್ಥೆ ಯಾವ ರೀತಿಯಲ್ಲಿ ವೃದ್ಧಿಸಬಹುದು ಎಂಬ ಮಾಹಿತಿಯನ್ನು ಬೆಂಗಳೂರು ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ನೀಡಲಿದ್ದಾರೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೃಷಿಕರಿಗೆ ಸಲಹೆ ನೀಡಿ ಶುಭ ಹಾರೈಸಿದರು.


ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ನಿರ್ದೇಶಕ ಪದ್ಮನಾಭ ರೈ ಕಲ್ಲಡ್ಕ ಮಾತನಾಡಿ, “ಕೃಷಿ ಸಮಾಜ ಮತ್ತು ಕೃಷಿ ಇಲಾಖೆ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ.ಪುತ್ತೂರು ತಾಲೂಕಿನಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಪಣತೊಟ್ಟು ಕಾರ್ಯಪ್ರವತ್ತರಾಗಿ ಮುಂದಿನ ಡಿಸೆಂಬರ್ ಅಂತ್ಯದೊಳಗೆ ಉದ್ಘಾಟನೆ ನಡೆಯಲಿದೆ ಎಂದ ಅವರು ರಪ್ತು ಆಧಾರಿತ ಕೆಲವು ಉದ್ಯಮ ಮಾಡಿ ತೋರಿಸಬೇಕಾಗಿದೆ ಈ ಬಗ್ಗೆ ಸಾಮಾನ್ಯ ಕಳಕಳಿ ಇರುವ ಒಬ್ಬ ಯಾರದರು ಮುಂದೆ ಬಂದು ಮಾಡಿದ್ರೆ ಊರಿನವರಿಗೆ ಪ್ರಯೋಜನವಾಗಹುದು ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿನಲ್ಲಿ ಕನಿಷ್ಠ ಒಂದು, ಎರಡು ಉದ್ಯಮ ಪ್ರಾರಂಭಿಸುವಂತೆ ಪ್ರಾಧಿಕಾರದ ಪ್ರಬಂಧಕ ಧರ್ಮ ರಾವ್ ರವರಿಗೆ ಸಲಹೆ ಮಾಡಿ, ಜಿಲ್ಲೆಯ ಅಭಿವೃದ್ಧಿ ಜತೆಗೆ ದೇಶದ ಅಭಿವೃದ್ಧಿಗೆ ಕೈಜೋಡಿಸುವಂತೆ ಹೇಳಿ ಶುಬ ಹಾರೈಸಿದರು. ಮಾಜಿ ಸೈನಿಕ, ಕರ್ನಾಟಕ ಕೃಷಿ ಮಾರಾಟ ಮಂಡಳಿ ಬೆಂಗಳೂರು ಇದರ ಮಾಜಿ ಸದಸ್ಯ ಅಮ್ಮಣ್ಣ ರೈ ದೇರ್ಲ ಮಾತನಾಡಿ ನಾವೆಲ್ಲರೂ ಕೃಷಿಕರು, ಕೃಷಿಕರ ಶ್ರಮಕ್ಕೆ ಸರಿಯಾದ ಬೆಲೆ ಸಿಗಬೇಕು ಬಗ್ಗೆ ಗಂಭೀರ ಚರ್ಚೆಗಳಾಗಬೇಕು ಕೃಷಿಕರು ಬೆಳೆದ ಬೆಳೆಗೆ ನ್ಯಾಯ ದೊರೆಯಬೇಕು. ಈ ಬಗ್ಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಗಮನಹರಿಸಬೇಕು. ಕುಂಬ್ರ ಸಹಕಾರಿ ಸಂಘದ 50 ನೇ ವರ್ಷಾಚರಣೆ ಅಂಗವಾಗಿ ರೈತರಿಗೆ ಅನುಕೂಲಕರವಾದ ಹಲವು ಕೆಲಸಗಳನ್ನು ಮಾಡುತ್ತ ಬರುವ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿ ಶುಭ ಹಾರೈಸಿದರು.


ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ರವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು 1975 ರಲ್ಲಿ ಆರಂಭ ಗೊಂಡು ಇಂದು 50 ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ಈ ವರ್ಷವನ್ನು ಅರ್ಥಪೂರ್ಣ ಗೊಳಿಸುವ ನಿಟ್ಟಿನಲ್ಲಿ ಸುಳ್ಯಪದವಿನಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಕಟ್ಟಡ ನಿರ್ಮಾಣ ಮಾಡಿ ಜಾಗ ಧಾನ ಮಾಡಿದ ಭಟ್ ರವರ ಭಾವಚಿತ್ರ ಅಣವರಣ ಗೊಳಿಸಲಾಗಿದೆ ಕೃಷಿಕ ಸಮಾಜ ಜೊತೆಗೆ ರೈತ ದಿನಾಚರಣೆ ಬಡಗನ್ನೂರಲ್ಲಿ ಕೃಷಿ ಸಮಗ್ರ ಮಾಹಿತಿ ಕಾರ್ಯಾಗಾರ ಇತ್ಯಾದಿ ಹಲವು ಅಭಿವೃದ್ಧಿ ಕಾರ್ಯಕ್ರಮ ಮಾಡುತ್ತ ಇಂದು ಅಡಿಕೆ ರಫ್ತು ಅವಕಾಶಗಳು ಮತ್ತು ಸಾಧಕ ಬಾಧಕಗಳು ವಿಚಾರಗೋಷ್ಠಿ ಆಯೋಜಿಸಲಾಗಿದೆ. ಇದೊಂದು ಉತ್ತಮ ಕಾರ್ಯಕ್ರಮ ರೈತರು ಇಂತಹ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಂಡು ಅದನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕಾದ ಅಗತ್ಯತೆ ಇದೆ. ಕಾರ್ಯಕ್ರಮ ಯಶಸ್ಸಿಯಾಗಲಿ ಎಂದು ಹಾರೈಸಿದರು.


ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ರಫ್ತು ವಿಭಾಗದ ವಲಯ ಮೇಲ್ವಿಚಾರಕರು, ಸಹಾಯ ಪ್ರಬಂಧಕರಾದ ಧರ್ಮರಾವ್ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಕೃಷಿ ಅಧಿಕಾರಿಗಳಾದ ಪೂಜಾ ಅಡಿಕೆ ರಫ್ತುಗಳಿಗೆ ಇರುವ ಅವಕಾಶ ಮತ್ತು ಅದರ ಸಾಧಕ-ಬಾಧಕಗಳು” ವಿಷಯದ ಕುರಿತು ಮಾಹಿತಿ ಸಮಗ್ರ ನೀಡಿದರು. ಕೃಷಿ ಸಮಾಜ ವಿಜ್ಞಾನಿ ಡಾ.ಎ.ಎ ಫಝಲ್
ಪ್ರಧಾನಮಂತ್ರಿ ಅವರ ಸಾವಯವ ಕೃಷಿ ಯೋಜನೆಯಡಿ ಕಿರು ಆಹಾರ ಉತ್ಪನ್ನ ಸಂಸ್ಕರನ ಘಟಕ ಮತ್ತು ಸಾಲ ಸೌಲಭ್ಯಗಳು ರಫ್ತು ಮಾಡಲು ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಹಿರಿಯ ವಿಜ್ಞಾನಿ ಟಿ.ಜೆ ರಮೇಶ್, ಮಂಗಳೂರು ಕೃಷಿ ವಿಶ್ವ ವಿದ್ಯಾಲಯದ ವಿಜ್ಞಾನಿ ಡಾ .ರಶ್ಮಿ ,ತೋಟಗಾರಿಕೆ ಮುಖ್ಯಸ್ಥರಾದ ಶಿವಪ್ರಕಾಶ್ ಉಪಸ್ಥಿತರಿದ್ದರು. ಉಷಾ ನಾರಾಯಣ್ ಪ್ರಾರ್ಥಿಸಿದರು. ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್ ಸ್ವಾಗತಿಸಿದರು. ರಾಜೀವಿ ರೈ, ಕುಂಞರಾಮ ಮಣಿಯಾಣಿ, ವಸಂತ್ ಕುಮಾರ್, ಶ್ರೀನಿವಾಸ್ ಮುಡಾಲ, ವಿನೋದ್ ರೈ, ಸತೀಶ್ ಕೈಕಾರ, ಶಿವರಾಮ್ ಶೆಟ್ಟಿ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಅಮರನಾಥ ರೈ ಕೈಕಾರ ವಂದಿಸಿದರು ನಿರ್ದೇಶಕ ತಿಲಕ್ ರೈ ಕುತ್ಯಾಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here