ಆಲಂಕಾರು ದುರ್ಗಾಂಬಾ ಪದವಿ ಪೂರ್ವ ವಿದ್ಯಾಲಯದ ಬಾಲಕ ಮತ್ತು ಬಾಲಕಿಯರ ಕಬಡ್ಡಿ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಆಲಂಕಾರು:ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಸೈಂಟ್ ಜೋಕಿಮ್ಸ್ ಪದವಿಪೂರ್ವ ಕಾಲೇಜು ಕಡಬ ಇದರ ಆಶ್ರಯದಲ್ಲಿ ನಡೆದ ಕಡಬ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ಬಾಲಕ ಮತ್ತು ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಆಲಂಕಾರು ದುರ್ಗಾಂಬಾ ಪದವಿಪೂರ್ವ ಕಾಲೇಜಿನ ಬಾಲಕ ಹಾಗೂ ಬಾಲಕಿಯರ ತಂಡಗಳೆರಡೂ ಅದ್ಭುತ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಬಾಲಕರ ವಿಭಾಗದ ಉತ್ತಮ ದಾಳಿಗಾರ ಪ್ರಶಸ್ತಿಯನ್ನು ಭವಿಷ್, ಉತ್ತಮ ಹಿಡಿತಗಾರ ಪ್ರಶಸ್ತಿಯನ್ನು ಸಾಯಿರಾಜ್ ವಿನೋದ್ ಹಾಗೂ ಬಾಲಕಿಯರ ವಿಭಾಗದ ಉತ್ತಮ ಹಿಡಿತಗಾರ್ತಿ ಪ್ರಶಸ್ತಿಯನ್ನು ಎಸ್. ಆರ್. ಕರಿಷ್ಮಾ , ಸವ್ಯಸಾಚಿ ಪ್ರಶಸ್ತಿಯನ್ನು ಅಭಿಜ್ಞಾ ಡಿ. ಪಡೆದುಕೊಂಡಿರುತ್ತಾರೆ.


ತಂಡದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಪ್ರಣಮ್ಯ, ಯಶಸ್ವಿನಿ, ಧನ್ಯ ಪೂರ್ವಿತಾ, ಯಶ್ವಿನಿ, ಅಭಿಜ್ಞಾ, ಲಿಖಿತಾ, ಪ್ರೀತಾ, ವಂದನಾ, ಕರಿಷ್ಮಾ, ಲಿಖಿತಾ ಮತ್ತು ವಿಕಾಸ್, ಪೂರ್ಣೇಶ್, ಪ್ರೀತಮ್, ಕೃತಿಕ್, ಭವಿಷ್, ಪ್ರಥಮ್ ಶೆಟ್ಟಿ, ಸಾಯಿರಾಜ್ ವಿನೋದ್, ಲಿಖಿತ್ ಎಮ್, ಹರಿಪ್ರಸಾದ್, ಜೀವನ್, ಮೋಕ್ಷಿತ್ ಎಮ್, ರಚನ್ ಪಿ. ಆರ್, ವಂಶಿತ್ ದರ್ಶಿತ್, ಯಶ್ವಿನ್ ತಂಡದಲ್ಲಿ ಭಾಗವಹಿಸಿದ್ದರು. ಇವರಿಗೆ ಉತ್ತಮ ತರಬೇತಿ ನೀಡಿದವರು ದೈಹಿಕ ಶಿಕ್ಷಣ ಉಪನ್ಯಾಸಕ ಶ್ರೇಯಸ್ಸು ರೈ ಯವರನ್ನು ಆಡಳಿತ ಮಂಡಳಿಯ ಅಧ್ಯಕ್ಷ ದಯಾನಂದ ರೈ ಮನವಳಿಕೆ, ಕಾರ್ಯದರ್ಶಿ ಈಶ್ವರ ಗೌಡ ಪಜ್ಜಡ್ಕ, ಆಡಳಿತಾಧಿಕಾರಿ ಶ್ರೀಪತಿರಾವ್ ಹೆಚ್. , ಕಾರ್ಯಕಾರಿ ಸಮಿತಿಯ ಸದಸ್ಯರು, ರಕ್ಷಕ ಶಿಕ್ಷಕ ಸಂಘ, ಹಿರಿಯ ವಿದ್ಯಾರ್ಥಿ ಸಂಘ, ಪ್ರಾಂಶುಪಾಲರು ರೂಪ . ಜೆ. ರೈ , ಮುಖ್ಯ ಗುರುಗಳು ನವೀನ್ ರೈ , ಬೋಧಕ ಬೋಧಕೇತರ ಸಿಬ್ಬಂದಿಗಳು, ಪೋಷಕರು, ವಿದ್ಯಾರ್ಥಿ ವೃಂದದವರು ವಿದ್ಯಾಸಂಸ್ಥೆಯ ವತಿಯಿಂದ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here