ಸೆ.14 : ಕಡೇಶಿವಾಲಯದಲ್ಲಿ 43ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ – ವಿವಿಧ ಧಾರ್ಮಿಕ ಕಾರ್ಯಕ್ರಮ

0

ಕಡೇಶಿವಾಲಯ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ 43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.14ರಂದು ನಡೆಯಲಿದೆ.

ಭಾದ್ರಪದ ಶುಕ್ಲ ಚತುರ್ಥಿ ಪ್ರಯುಕ್ತ ಹಮ್ಮಿಕೊಂಡಿರುವ ಗಣೇಶೋತ್ಸವದ ಅಂಗವಾಗಿ ಬೆಳಿಗ್ಗೆ 7 ಗಂಟೆಗೆ ಗಣಹೋಮ, 8.30ಕ್ಕೆ ಗಣಪತಿ ದೇವರ ಪ್ರತಿಷ್ಠೆ, 9 ಗಂಟೆಗೆ ಮಹಾಪೂಜೆ, 11 ಗಂಟೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ 1ರಿಂದ ಅನ್ನ ಸಂತರ್ಪಣೆ ನಡೆಯಲಿದೆ.ಸಂಜೆ 6.30ರಿಂದ ಧಾರ್ಮಿಕ ಸಭೆ ನಡೆಯಲಿದೆ.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ನುಳಿಯಾಲು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸಹಜ ಕೃಷಿಕರು ಮತ್ತು ಸಾಮರಸ್ಯ ವೇದಿಕೆ ಸಹ ಸಂಯೋಜಕ ಶಿವಪ್ರಸಾದ್ ಮಲೆಬೆಟ್ಟು ಧಾರ್ಮಿಕ ಪ್ರವಚನ ನೀಡಲಿದ್ದಾರೆ.ಅಮರನಾಥ ಅಜಿಲರು ಅರಿಕಲ್ಲು, ಶ್ಯಾಮ್ ಭಟ್ ಜತ್ತನಕೋಡಿ, ಮಾಜಿ ನಿರ್ದೇಶಕ ಕೆ.ಟಿ. ಸುವರ್ಣ, ನಿವೃತ್ತ ಅಧಿಕಾರಿ ವೀರಪ್ಪ ನಾಯ್ಕ್ ನೆಕ್ಕಿಲಾಡಿ, ನಿಷ್ಕಲ್ ಮಾರ್ಕೆಟಿಂಗ್ ಮಾಲಕ ಶಶಿಧರ್ ಶೆಟ್ಟಿ ಕುರುಂದ್ಲಾಜೆ, ವರಮಹಾಲಕ್ಷ್ಮಿ ಪೂಜಾ ಸೇವಾ ಸಮಿತಿ ಅಧ್ಯಕ್ಷೆ ಶಾಲಿನಿ ಸುಂದರ ಗೌಡ, ವಿನಾಯಕ ಬೋರ್‌ವೆಲ್ಸ್‌ನ ಪ್ರಸಾದ್ ಕುಲಾಲ್ ಮಾಣಿ ಅತಿಥಿ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.

ಸಂಜೆ 6.30ರಿಂದ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ವೈಭವ ನಡೆಯಲಿದೆ.ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಭಾಗವತರಾಗಿ, ತೆಂಕು-ಬಡಗು ಸವ್ಯಸಾಚಿ ಡಾ. ಸತ್ಯನಾರಾಯಣ ಪುಣಿಂಚಿತ್ತಾಯ ಮುಖ್ಯ ವೇಷದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಸುಜಯ್ ರವಿಚಂದ್ರ ಕನ್ನಡಿಕಟ್ಟೆ ಮತ್ತು ಮಂದಾರ ಗಿರೀಶ್ ರೈ ಕಕ್ಕೆಪದವು ಹಿಮ್ಮೇಳದಲ್ಲಿ ಗಾನ, ಚೈತನ್ಯ ಕೃಷ್ಣ ಪದ್ಯಾಣ, ಶ್ರೀಧರ ವಿಟ್ಲ ಮದ್ದಳೆ ಮತ್ತು ರಾಜೇಂದ್ರ ಕೃಷ್ಣ ಪಂಜಿಗದ್ದೆ ಚಕ್ರತಾಳದಲ್ಲಿ ಸಹಕರಿಸಲಿದ್ದಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here