






ಪುತ್ತೂರು: ಸೆ. ರಂದು ನರೇಂದ್ರ ಪಿ.ಯು ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಡೆಸಿದ Classroom Decoration (Video Editing) ಸ್ಪರ್ಧೆಯಲ್ಲಿ 10ನೇ ತರಗತಿಯ ಉದಿತ್ ಟಿ, ಚಿಕ್ಕಮುಡ್ನೂರು ಬಾಸ್ಕರ ಸುವರ್ಣ ಮತ್ತು ವಸಂತಿ ಅವರ ಪುತ್ರ, ಮತ್ತು ಪ್ರಣಾಮ್ ಡಿ.ಕೆ, ಮಾಡಾವು ದಿನೇಶ್ ಎಂ ಮತ್ತು ಜ್ಯೋತಿ ಕೆ ಅವರ ಪುತ್ರ ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಪಡೆದಿದ್ದಾರೆ.


ಅದೇ ರೀತಿ Classroom Decoration (Classroom Board Decoration) ಸ್ಪರ್ಧೆಯಲ್ಲಿ 10ನೇ ತರಗತಿಯ ದ್ರಿಶಾ ಪಿ, ನರಿಮೊಗರು ಪ್ರಶಾಂತ್ ಎಂ.ಪಿ ಹಾಗೂ ತ್ರಿವೇಣಿ ಅವರ ಪುತ್ರಿ ಮತ್ತು ಬೃಂದಾ ಆರ್.ಕೆ, ಕೆಮ್ಮಿಂಜೆ ರಮೇಶ್ ಕೆ ಹಾಗೂ ಶೋಭಾ ಬಿ ಅವರ ಪುತ್ರಿ ಪ್ರಥಮ ಸ್ಥಾನ ಪಡೆದಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು ಹಾಗೂ ಪ್ರಭಾರ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಎಸ್ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.













