ಪ್ರಶಸ್ತಿ ವಿಜೇತ ಯುವಕ ಮಂಡಲ ವಿಟ್ಲದ ವತಿಯಿಂದ ಸಾಧಕರಿಗೆ ಸನ್ಮಾ‌ನ

0

ವಿಟ್ಲ : ಪ್ರಶಸ್ತಿ ವಿಜೇತ ಯುವಕ ಮಂಡಲ ವಿಟ್ಲ ಇದರ ವತಿಯಿಂದ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲಿ, 49 ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸುದರ್ಶನ್ ಪಡಿಯಾರ್, ವಿಟ್ಲ ಪ್ರಸಿದ್ಧ ಕೋಟಿ ಕೆರೆಯಲ್ಲಿ ಈಜು ಬಾರದೆ ನೀರಿಗೆ ಇಳಿದ ಮೂರು ಮಕ್ಕಳ ಜೀವ ಉಳಿಸಿದ ಮಹೇಶ್ ಬನ ಮತ್ತು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ವಿಟ್ಲ ಪಿ ಎಂ ಶ್ರೀ ಶಾಲೆಯ ದೈಹಿಕ ಶಿಕ್ಷಕ ವಿದ್ಯಾ ಶಂಕರ್ ರವರನ್ನು ಸನ್ಮಾನಿಸಲಾಯಿತು.

ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷೆ ಡಾ ಗಾಯತ್ರಿ ಗೀತಪ್ರಕಾಶ್, ವಿಟ್ಲ ಜೇ ಸಿ ಐ ಘಟಕದ ಅಧ್ಯಕ್ಷ ಸಂದೀಪ್ ವಿಟ್ಲ, ವಿಟ್ಲ ಜೈನ ಬಸದಿ ಅಧ್ಯಕ್ಷ ಜಿತೇಶ್ ಜೈನ್, ವಿಟ್ಲ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ಯ ಮ್ಯಾನೇಜಿಂಗ್ ಡೈರೆಕ್ಟರ್ ಕೆ. ಎಮ್. ಪ್ರಸಾದ್ ಶೆಟ್ಟಿ, ಲಯನ್ಸ್ ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷೆ ಶ್ವೇತಾ ರವಿ ಕುಮಾರ್, ಯುವಕ ಮಂಡಲದ ಅಧ್ಯಕ್ಷ ಸುಧೀರ್ ನಾಯ್ಕ, ಗೌರವ ಅಧ್ಯಕ್ಷ ರಮೇಶ್ ಬಿ ಎಸ್, ಕಾರ್ಯದರ್ಶಿ ಗಂಗಾಧರ, ಕೋಶಾಧಿಕಾರಿ ಜನಾರ್ದನ ಪದ್ಮಶಾಲಿ, ವಸಂತ ಶೆಟ್ಟಿ, ಲೋಕರಾಜ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here