ಸೆ.15: ನರಿಮೊಗರು ಪ್ರಸಾದಿನೀ ಆಯುರ್ ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ, ಜೀವ ರಕ್ಷಕ ಕೌಶಲ್ಯಗಳ ಕಾರ್ಯಾಗಾರ

0

ಪುತ್ತೂರು: ಪ್ರಸಾದಿನೀ ಆಯುರ್ ನಿಕೇತನ ಆಯುರ್ವೇದ ಆಸ್ಪತ್ರೆ, ನರಿಮೊಗರು, ಪುತ್ತೂರು ಇದರ ವತಿಯಿಂದ ಪ್ರಥಮ ಚಿಕಿತ್ಸೆ ಮತ್ತು ಜೀವ ರಕ್ಷಕ ಕೌಶಲ್ಯಗಳು ಎಂಬ ವಿಷಯದ ಕುರಿತು ವಿಶೇಷ ಪ್ರಾಯೋಗಿಕ ಕಾರ್ಯಾಗಾರವು ಸೆ.15ರಂದು ಬೆಳಿಗ್ಗೆ ಗಂಟೆ 9.30ರಿಂದ ಮಧ್ಯಾಹ್ನ ಗಂಟೆ 12.30ರ ತನಕ ನಡೆಯಲಿದೆ.


ಕೆಐಒಸಿಎಲ್‌ನ ನಿವೃತ್ತ ವೈದ್ಯಕೀಯ ಅಧೀಕ್ಷಕ ಡಾ.ಬಿ. ರಾಮಚಂದ್ರ ಭಟ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪ್ರಥಮ ಚಿಕಿತ್ಸೆ ಹಾಗೂ ತುರ್ತು ಪರಿಸ್ಥಿತಿಗಳ ನಿರ್ವಹಣೆ ಕುರಿತು ತರಬೇತಿ ನೀಡಲಿದ್ದಾರೆ.
ನರ್ಸಿಂಗ್ ಸಿಬ್ಬಂದಿ, ಆಯುರ್ವೇದ ಚಿಕಿತ್ಸಕರು, ಆಸ್ಪತ್ರೆಯ ವೈದ್ಯಕೀಯೇತರ ಸಿಬ್ಬಂದಿ ಸೇರಿದಂತೆ ಆಸಕ್ತರೆಲ್ಲರೂ ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಸಾರ್ವಜನಿಕರಿಗೂ ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 9740545979 ಸಂಪರ್ಕಿಸುವಂತೆ ಡಾ. ರಾಘವೇಂದ್ರಪ್ರಸಾದ್ ಬಂಗಾರಡ್ಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here