ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ 

0

ಬಡಗನ್ನೂರುಃ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವವು   ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ  ಸೆ. 14 ರಂದು ಶ್ರೀ ಕ್ಷೇತ್ರದಲ್ಲಿ  ವಿಜೃಂಭಣೆಯಲ್ಲಿ ಜರಗಲಿರುವುದು.

ಭಗವದ್ಭಕ್ತರಾದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತನು-ಮನ-ಧನಗಳಿಂದ ಸಹಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ  ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ರೈ ಮೇಗಿನಮನೆ, ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ 

ಕಾರ್ಯಕ್ರಮಗಳು: ಸೆ. 14 ರಂದು  ಪೂರ್ವಾಹ್ನ ಗಂ 8 ಕ್ಕೆ  ಕದಿರು ಪೂಜೆ, 9 ಕ್ಕೆ  ಶ್ರೀ ಗಣಪತಿ ವಿಗ್ರಹ ಪ್ರತಿಷ್ಠೆ, ಗಣಪತಿ ಹೋಮ ಬಳಿಕ ಭಜನಾ ಕಾರ್ಯಕ್ರಮ ನಡೆಯಲಿದೆ .12.30 ರಿಂದ ಮಹಾಪೂಜೆ ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ವಿಜೃಂಭಣೆಯ ಶೋಭಾಯಾತ್ರೆ :  

ಸಂಜೆ ಗಂ 4.30 ರಿಂದ  ಮಹಾಪೂಜೆ, 5 ರಿಂದ  ಶ್ರೀ ಗಣಪತಿ ದೇವರ  ಶೋಭಾಯಾತ್ರೆ ನಡೆಯಲಿರುವುದು. ಮಂಗಳೂರು ಅರಣ್ಯ ಸಂಚಾರಿ ದಳ,ವಲಯ ಅರಣ್ಯ ಅಧಿಕಾರಿ ಸಂತೋಷ್ ರೈ ಕೆ ರವರು ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ. ಶೋಭಾಯಾತ್ರೆಯು ಕುಣಿತ ಭಜನೆ, ಕೀಲು ಕುದುರೆ, ಬೊಂಬೆ, ಬ್ಯಾಂಡ್ ವಾದ್ಯ ಘೋಷದೊಂದಿಗೆ ಶ್ರೀ ಕ್ಷೇತ್ರದಿಂದ ಹೊರಟು ಮೈಂದನಡ್ಡ-ಕೖೊಲ-ಮುಡಿಪಿನಡ್ಡ ಮುಖ್ಯ ರಸ್ತೆ ಮೂಲಕ ಪಟ್ಟೆ ಅರೆಪ್ಪಾಡಿ ಸೀರೆ ಹೊಳೆಯಲ್ಲಿ ಜಲಸ್ತಂಭನೆ ನಡೆಯಲಿದೆ.
ಗಾನಸಿರಿ ಸ್ವರ ಸಂಗಮ:                                                                                                                                                                                ಪೂರ್ವಾಹ್ನ  10 ರಿಂದ ಪುತ್ತೂರು ವಿವೇಕಾನಂದ ಪೊಲೀಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಮುರಳೀಧರ ರಾವ್‌ ಪ್ರಾಯೋಜಕತ್ವದಲ್ಲಿ ಖ್ಯಾತ ಗಾಯಕ ಸುಗಮ ಸಂಗೀತ ಕಲಾ ನಿಧಿ ಡಾ. ಕಿರಣ್ ಕುಮಾರ್ ಸಾರಥ್ಯದ ಗಾನ ಸಿರಿ ಕಲಾ ಕೇಂದ್ರ ಪುತ್ತೂರು ತಂಡದಿಂದ “ಗಾನಸಿರಿ ಸ್ವರ ಸಂಗಮ" ಸುಮಧುರ ಭಕ್ತಿ ಭಾವ ಜನಪದ ಗೀತೆಗಳ ಸಂಭ್ರಮ ನಡೆಯಲಿದೆ.

 ಸ್ಪರ್ಧೆಗಳು: ಪೂರ್ವಾಹ್ನ ಗಂ 11 ರಿಂದ ಶಾಲಾ  ಮಕ್ಕಳಿಗೆ ಗಣೇಶನ ಚಿತ್ರಬಿಡಿಸುವುದು ಮತ್ತು ಭಕ್ತಿಗೀತೆ, ಹಾಗೂ  ಸಾರ್ವಜನಿಕರಿಗೆ ಭಕ್ತಿಗೀತೆ ಸ್ಪರ್ಧೆ ನಡೆಯಲಿದೆ.

LEAVE A REPLY

Please enter your comment!
Please enter your name here