






ಕೆಯ್ಯೂರು: ಅಭಿನವ ಕೇಸರಿ ಮಾಡಾವು ಇದರ ಆಶ್ರಯದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಅಂಗವಾಗಿ ವಿವಿಧ ಕ್ರೀಡಾಕೂಟ ಮಾಡಾವು ಕಟ್ಟೆಯ ಅಯ್ಯಪ್ಪ ಭಜನಾ ಮಂದಿರದ ಬಳಿ ಸೆ13 ರಂದು ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಾವು ಜ್ಯೋತಿ ಚಿಕಿತ್ಸಾಲಯ ಡಾ| ರಾಮಚಂದ್ರ ಭಟ್ ದೀಪ ಪ್ರಜ್ವಲಿಸಿವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಸಭಾಧ್ಯಕ್ಷತೆಯನ್ನು ಅಯ್ಯಪ್ಪ ಭಜನಾ ಮಂದಿರ ಮಾಡಾವು ಅಧ್ಯಕ್ಷ ರವೀಂದ್ರ ರೈ ನೆಲ್ಯಾಜೆ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಕೆಯ್ಯೂರು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ ಕೆಯ್ಯೂರು, ನಿವೃತ್ತ ಕಾರ್ಯದರ್ಶಿ ಹಾಲು ಉತ್ಪಾದಕರ ಸಂಘ ಕೆಯ್ಯೂರು ಚಂದ್ರಹಾಸ ರೈ ಬೊಳಿಕಲ ಮಠ, ಪಿಂಚಣಿ ಮತ್ತು ಸಣ್ಣ ಉಳಿತಾಯ ಇಲಾಖೆ ಮಂಗಳೂರು ಸಹಾಯಕ ನಿರ್ದೇಶಕ ಪ್ರಸನ್ನ ಎಂ.ಪಿ, ಅಧ್ಯಕ್ಷರು ಅಯ್ಯಪ್ಪ ಭಕ್ತವೃಂದ ಮಾಡಾವು ಸುಬ್ರಾಯ ಗೌಡ ಮಾಡಾವು, ದ. ಕ. ಜಿ. ಪಂ. ಕಿರಿಯ ಪ್ರಾ. ಶಾಲೆ ಮಾಲೆತ್ತೋಡಿ ಮುಖ್ಯಗುರು ತಿಮ್ಮಪ್ಪ ಕೊಡ್ಲಾಡಿ, ಶ್ರೀ ಹೊಸಮ್ಮ ದೈವಸ್ಥಾನ ನಿತ್ಯಕರ್ಮಿ ಮೋನಪ್ಪ ಪೂಜಾರಿ, ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಪಾಲ್ತಾಡಿ ಅಧ್ಯಕ್ಷ ವೆಂಕಟರಮಣ ಗೌಡ, ಶ್ರೀ ಕೊರಗಜ್ಜ ದೈವಸ್ಥಾನ ಅಸಂತ್ತಡ್ಕ ನಿತ್ಯಕರ್ಮಿ ಗಿರೀಶ್, ಅಭಿನವ ಕೇಸರಿ ಮಾಡಾವು ಉಪಾಧ್ಯಕ್ಷ ಚೇತನ್ ಆಚಾರ್ಯ ಮಾಡಾವು, ಕಾರ್ಯದರ್ಶಿ ಜಯದೀಪ್ ಬೊಳಿಕ್ಕಲ, ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜಾರು ಕಂಬ ನಾಡಿಗೆ ಉದ್ಘಾಟನೆಯನ್ನು ನಿವೃತ್ತ ಬಿಎಸ್ಎನ್ಎಲ್ ಅಧಿಕಾರಿ ಬಾಲಕೃಷ್ಣ ರೈ ಮಾಡಾವು ತೆಂಗಿನಕಾಯಿ ಒಡೆಯುವುದರ ಮೂಲಕ ಚಾಲನೆ ನೀಡಿದರು. ಅಟ್ಟಿ ಮಡಿಕೆ ಉದ್ಘಾಟನೆಯನ್ನು ಬಾಲಕೃಷ್ಣ ಶೆಟ್ಟಿ ಮಾಡಾವು ತೆಂಗಿನಕಾಯಿ ಒಡೆಯುವುದರ ಮೂಲಕ ಚಾಲನೆ ನೀಡಿದರು. ಕಬ್ಬಡಿ ಪಂದ್ಯಾಟದ ಉದ್ಘಾಟನೆಯನ್ನು ಶ್ರೀದೇವಿ ಎಲೆಕ್ಟ್ರಿಕಲ್ ಮಾಲಕರಾದ ಸುಬ್ರಾಯ ಗೌಡ ತೆಂಗಿನಕಾಯಿ ಒಡೆಯುವುದರ ಮೂಲಕ ಚಾಲನೆ ನೀಡಿದರು.




ವಾಲಿಬಾಲ್ ಪಂದ್ಯಾಟವನ್ನು ರಿಬ್ಬನ್ ತುಂಡರಿಸಿವ ಮೂಲಕ ಅಯ್ಯಪ್ಪ ಭಜನಾ ಮಂದಿರ ಮಾಡಾವು ಅಧ್ಯಕ್ಷ ರವೀಂದ್ರ ರೈ ನೆಲ್ಯಾಜೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ದೀಕ್ಷಿತ್ ಅಮೀನ್ ಮಂಜುಳಾ ಮಾಡಾವು, ಶೀಲಾವತಿ ಮಾಡಾವು, ಸಚಿನ್ ಪರ್ತ್ಯಡ್ಕ, ದೀಕ್ಷಿತ್ ಬೊಳಿಕ್ಕಲ, ಹರೀಶ್ ಕುಲಾಲ್ ಅಶೋಕ, ಕುಶಾನ್ ಮನೋಜ್ ಕುಮಾರ್, ಸೂರಜ್ ಮೆರ್ಲ, ಹರೀಶ್ ಪ್ರಮೋದ್, ಶಶಿಧರ್ ಆಚಾರ್ಯ ಮಾಡಾವು, ಸಹಕರಿಸಿದರು. ಅಂತರ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪ್ರಶ್ವಿ ಶೆಟ್ಟಿ ಪ್ರಾರ್ಥನೆಯೊಂದಿಗೆ ನವ್ಯತಾ ರೈ ಮಾಡಾವು ಸ್ವಾಗತಿಸಿ, ಅರ್ಚನಾ ರೈ ಶೇಡಿ ವಂದಿಸಿ, ಭಾಸ್ಕರ ರೈ ಮಠ ಕಾರ್ಯಕ್ರಮ ನಿರೂಪಿಸಿದರು.










