






ಪುತ್ತೂರು : ಹೈದರಾಬಾದ್ ನ ನಾದರ ಗುಲ್ ನಲ್ಲಿರುವ ವಿದ್ಯಾಭಾರತಿ ಜ್ಞಾನ ಕೇಂದ್ರದಲ್ಲಿ ಸೆಪ್ಟೆಂಬರ್ 5, 6 ಮತ್ತು 7ರಂದು ನಡೆದ ದಕ್ಷಿಣ ಕ್ಷೇತ್ರ ಮಟ್ಟದ ಕ್ರೀಡಾ ಸ್ಪರ್ಧೆಯ ಚೆಸ್ ವಿಭಾಗದಲ್ಲಿ ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ 8 ನೇ ತರಗತಿಯ ಮಲೈಕಾ ಭಟ್( ಎ.ಅಶೋಕ್ ಭಟ್ ಮತ್ತು ಲಕ್ಷ್ಮಿ ಅಶೋಕ್ ದಂಪತಿ ಪುತ್ರಿ ), 7 ನೇ ತರಗತಿಯ ಸಾನಿಧ್ಯ ಎಸ್. ರಾವ್ ( ಸುದೇಶ್ ರಾವ್.ಪಿ. ಎನ್ ಮತ್ತು ಶ್ರುತಿ.ಎಸ್ ರಾವ್ ದಂಪತಿ ಪುತ್ರಿ ) ಹಾಗೂ 10ನೇ ತರಗತಿಯ ಆರುಷಿ ಪುತ್ತೂರಾಯ (ಡಾll ಸುರೇಶ್ ಪುತ್ತೂರಾಯ ಮತ್ತು ಡಾll ಆಶಾ ಜ್ಯೋತಿ ಕೆ.ದಂಪತಿ ಪುತ್ರಿ ) ಇವರ ತಂಡವು ವಿಜಯಶಾಲಿಯಾಗಿದೆ. ಇವರು ಆಂಧ್ರಪ್ರದೇಶ ಹಾಗೂ ತೆಲಂಗಾಣ ತಂಡದ ವಿರುದ್ಧ ಗೆಲುವು ಸಾಧಿಸುವುದರೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.


ಹರಿಯಾಣದ ಕುರುಕ್ಷೇತ್ರದಲ್ಲಿ ಸೆಪ್ಟಂಬರ್ 30ರಿಂದ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಗೆಲುವು ಸಾಧಿಸಲೆಂದು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವರ್ಗದವರು ಶುಭ ಹಾರೈಸಿದ್ದಾರೆ.













