ಟಿವಿ ಕ್ಲಿನಿಕ್ ಮಾಲಕ ಸತ್ಯಶಂಕರ್‌ಗೆ ಜೆಸಿಐ ವಲಯ 15ರ ಸಾಧನಾಶ್ರೀ ಪ್ರಶಸ್ತಿ ಪ್ರದಾನ

0

ಪುತ್ತೂರು: ಟಿವಿ ಕ್ಲಿನಿಕ್ ಮಾಲಕ, ಪುತ್ತೂರು ಜೆಸಿಐ ಸದಸ್ಯ ಸತ್ಯಶಂಕರ್ ಅವರಿಗೆ ಜೆಸಿಐ ವಲಯ 15ರ ಸಾಧನಾಶ್ರೀ ಪ್ರಶಸ್ತಿ ಲಭಿಸಿದೆ. ಮಡಂತ್ಯಾರಿನ ಕಲಾ ಸಭಾಂಗಣದಲ್ಲಿ ಆ.23ರಂದು ನಡೆದ ಮೃದಿನಿ ವ್ಯವಹಾರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಸತ್ಯಶಂಕರ್‌ರವರು ಐಟಿಸಿ ಡಿಪ್ಲೋಮಾ ವ್ಯಾಸಂಗದ ಬಳಿಕ 2000ದಲ್ಲಿ ಟೆಲಿವಿಷನ್ ಕ್ಷೇತ್ರಕ್ಕೆ ಕಾಲಿಟ್ಟು ತಾಂತ್ರಿಕ ನೈಪುಣ್ಯ, ಕಠಿಣ ಪರಿಶ್ರಮ ಹಾಗೂ ಉದ್ಯಮಶೀಲತಾ ದೃಷ್ಟಿಕೋನದಿಂದ 2010ರಲ್ಲಿ ಟಿವಿ ಕ್ಲಿನಿಕ್ ಆರಂಭಿಸಿದರು. 2008ರಲ್ಲಿ ಕೇಶವ ಪ್ರಸಾದ್ ಮುಳಿಯ ಹಾಗೂ ತನ್ನ ಸಹೋದರ ಪಶುಪತಿ ಶರ್ಮಾ ಅವರ ಪ್ರೋತ್ಸಾಹದಿಂದ ಜೆಸಿಐ ಚಳವಳಿಗೆ ಸೇರಿಕೊಂಡರು. ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇದರ ಸದಸ್ಯರೂ ಆಗಿದ್ದು ವೃತ್ತಿ ಹಾಗೂ ಸಾಮಾಜಿಕವಾಗಿ ಹಲವಾಗಿ ಸಾಧನೆಗಳಿಗೆ ಸಾಕ್ಷಿಯಾಗಿರುವ ಸತ್ಯಶಂಕರ್ ಅವರು ಜೆಸಿಐ ಫೌಂಡೇಷನ್‌ಗೆ ದೇಣಿಗೆ ನೀಡಿ ಜೆ.ಎಫ್.ಡಿ. ಪದವಿ ಗಳಿಸಿದ್ದಾರೆ. ಕುಳಮರ್ವ ವೆಂಕಟರಮಣ ಭಟ್ ಹಾಗೂ ರತ್ನಾವತಿ ದಂಪತಿ ಪುತ್ರರಾದ ಸತ್ಯಶಂಕರ್ ಅವರ ಸಾಧನೆಗೆ ಅವರ ಪತ್ನಿ ಸ್ಮಿತಾ ಶಂಕರ್ ಹೆಗಲು ನೀಡಿದ್ದಾರೆ.

ಟಿವಿ ಕ್ಲಿನಿಕ್ ಮಾಲಕ, ಪುತ್ತೂರು ಜೆಸಿಐ ಸದಸ್ಯ ಸತ್ಯಶಂಕರ್

LEAVE A REPLY

Please enter your comment!
Please enter your name here