






ಪುತ್ತೂರು: ಒಳಮೊಗ್ರು ಗ್ರಾಮದ ಅಜಲಡ್ಕದಲ್ಲಿ ವಿಘ್ನೇಶ್ವರ ಧಾರ್ಮಿಕ / ಸಾಮಾಜಿಕ ಟ್ರಸ್ಟ್ (ರಿ.), ಅಜಲಡ್ಕ, ಅಧೀನ ಘಟಕಗಳ ವಿದ್ಯಾರ್ಥಿ ಘಟಕ, ಶ್ರೀ ವಿಘ್ನೇಶ್ವರ ಯುವಕ ಮಂಡಲ ಹಾಗೂ ಸರ್ವಶಕ್ತಿ ಮಹಿಳಾ ಮಂಡಲ (ರಿ.), ಅಜಲಡ್ಕ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಜಲಡ್ಕ ಇದರ ಆಶ್ರಯದಲ್ಲಿ 25ನೇ ವರ್ಷದ ಅಷ್ಟಮಿ ಕಾರ್ಯಕ್ರಮ ಹಾಗೂ 1ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ನಡೆಯಲಿದೆ.


ಸೆ.14ರಂದು ಅಜಲಡ್ಕ ಸಮುದಾಯ ಭವನ ವಠಾರದಲ್ಲಿ ಕಾರ್ಯಕ್ರಮ ಜರುಗಲಿದ್ದು, ಭಕ್ತಾದಿಗಳು, ಗ್ರಾಮಸ್ಥರು ಭಾಗವಹಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













