ಝೀಕನ್ನಡ ವಾಹಿನಿಯ Dance Karnataka Dance Super Mom ರಿಯಾಲಿಟಿ ಶೋಗೆ ಈಶ್ವರಮಂಗಲದ ಸೌಪರ್ಣಿಕ ಗುರುರಾಜ್ ಆಯ್ಕೆ

0

ಈಶ್ವರಮಂಗಲ: ಪ್ರತಿಷ್ಠಿತ ಝೀಕನ್ನಡ ವಾಹಿನಿ ಆಯೋಜಿಸಿರುವ Dance Karnataka Dance Super Mom ಬಿಗ್ ರಿಯಾಲಿಟಿ ಶೋ ಕಾರ್ಯಕ್ರಮದ ಮೆಗಾ ಆಡಿಷನ್‌ನಲ್ಲಿ ಈಶ್ವರಮಂಗಲದ ಸೌಪರ್ಣಿಕ ಗುರುರಾಜ್ ಉತ್ತಮ ಪ್ರದರ್ಶನ ನೀಡಿ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ.


ದಕ್ಷಿಣಕನ್ನಡ ಜಿಲ್ಲೆಯಿಂದ ಈ ಕಾರ್ಯಕ್ರಮಕ್ಕೆ ಆಯ್ಕೆಯಾದ ಏಕೈಕ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಸೌಪರ್ಣಿಕ ಗುರುರಾಜ್ ಪಾತ್ರರಾಗಿದ್ದು, ಇದು ಪುತ್ತೂರು ಹಾಗೂ ಈಶ್ವರಮಂಗಲದ ಜನತೆಗೆ ಹೆಮ್ಮೆಯಾಗಿದೆ. ಸೌಪರ್ಣಿಕ ಅವರು ಈಶ್ವರಮಂಗಲದ ಎಂ.ಜಿ. ಫೂಟ್‌ವೇರ್ ಮಾಲಕ ಗುರುರಾಜ್ ರೈ ಅವರ ಪತ್ನಿಯಾಗಿದ್ದು, “ವರ್ಣಂ” ನೃತ್ಯ ತಂಡವನ್ನು ನಡೆಸುತ್ತಿದ್ದಾರೆ. ನೃತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿರುವ ಅವರು ಇದೀಗDance Karnataka Dance Super Mom ವೇದಿಕೆಯಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸಲು ಸಜ್ಜಾಗಿದ್ದಾರೆ.


ಮೆಗಾ ಆಡಿಷನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಆಯ್ಕೆಯಾಗಲು ತಮ್ಮ ಕುಟುಂಬ, ಸ್ನೇಹಿತರು, ಬಂಧುಗಳು ಹಾಗೂ ಈಶ್ವರಮಂಗಲ ಮತ್ತು ಪುತ್ತೂರಿನ ಜನರ ಪ್ರೋತ್ಸಾಹ ಮತ್ತು ಆಶೀರ್ವಾದವೇ ಪ್ರಮುಖ ಕಾರಣವಾಗಿದೆ ಎಂದು ಸೌಪರ್ಣಿಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here