ಸೆ.14ರಿಂದ 18ರವರೆಗೆ ಉಪ್ಪಿನಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ಉಪ್ಪಿನಂಗಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸೇವಾ ಟ್ರಸ್ಟ್ (ರಿ) ಇದರ ವತಿಯಿಂದ ಈ ಬಾರಿ 50ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.14ರಿಂದ ಸೆ.18ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಸಮಿತಿ ಸೇವಾ ಟ್ರಸ್ಟ್ನ ಅಧ್ಯಕ್ಷ ಕೆ. ಸುಧಾಕರ ಶೆಟ್ಟಿ ಗಾಂಧಿಪಾರ್ಕ್ ತಿಳಿಸಿದ್ದಾರೆ.


ಸೆ.14ರಂದು ಬೆಳಗ್ಗೆ 9ಕ್ಕೆ ಪ್ರಾರ್ಥನೆ, ಶ್ರೀ ಗಣಪತಿ ದೇವರ ವಿಗ್ರಹ ಪ್ರತಿಷ್ಠೆ, ಗಣಹೋಮ ನಡೆಯಲಿದ್ದು, 9:30ಕ್ಕೆ ಸುವರ್ಣ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದು, ಬಿಎಸ್ಸೆಫ್‌ನ ನಿವೃತ ಡೆಪ್ಯುಟಿ ಕಮಾಡೆಂಟ್ ಉದ್ಘಾಟನೆ ನೆರವೇರಿಸಲಿದ್ದಾರೆ. ಪೂರ್ವಾಹ್ನ 11ರಿಂದ ಆಟೋಟ ಸ್ಪರ್ಧೆ, 11:30ರಿಂದ ಭಜನಾ ಸೇವೆ ನಡೆದು, ಮಧ್ಯಾಹ್ನ 12:45ಕ್ಕೆ ಮಹಾಪೂಜೆಯಾಗಿ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 2:30ರಿಂದ ರಂಗೋಲಿ ಸ್ಪರ್ಧೆ, 3:30ರಿಂದ ಚಿತ್ರ ಸ್ಪರ್ಧೆ, ಭಜನಾ ಸೇವೆ ನಡೆಯಲಿದೆ. 4:30ಕ್ಕೆ ಭಕ್ತಿ ಗೀತೆ ಸ್ಪರ್ಧೆ ನಡೆಯಲಿದ್ದು, ರಾತ್ರಿ 7ರಿಂದ ಕು. ದಿವ್ಯನಿಧಿ ರೈ ಎರುಂಬು ಮತ್ತು ಬಳಗದವರಿಂದ ಸ್ವರ ಸಮರ್ಪಣೆ' ಸಂಗೀತ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9:30ಕ್ಕೆ ಮಹಾಪೂಜೆಯಾಗಿ, ಅನ್ನಸಂತರ್ಪಣೆ ನಡೆಯಲಿದೆ. ಸೆ.15ರಂದು ಬೆಳಗ್ಗೆ 9ರಿಂದ ಗಣಹೋಮ, 9:30ರಿಂದ ಭಜನಾ ಸೇವೆ ನಡೆದು, ಮಧ್ಯಾಹ್ನ 12:45ಕ್ಕೆ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಲಿದೆ. ಮಧ್ಯಾಹ್ನ 2ರಿಂದ ಶ್ರೀ ಕಾಳಿಕಾಂಬ ಯಕ್ಷಕಲಾ ಪ್ರತಿಷ್ಠಾನದವರಿಂದ ಚಕ್ರ ಚಂಡಿಕಾ’ ತಾಳಮದ್ದಳೆ ನಡೆಯಲಿದ್ದು, 5 ರಿಂದ ವೇದಶಂಕರನಗರದ ಶ್ರೀ ರಾಮ ಶಾಲಾ ಮಕ್ಕಳಿಂದ ಭಾರ್ಗವ ವಿಜಯ' ಯಕ್ಷಗಾನ ನಡೆಯಲಿದೆ. ರಾತ್ರಿ 7:15ರಿಂದ ಸಭಾ ಕಾರ್ಯಕ್ರಮ ಮಾತೃದೇವೋ ಭವ’ ನಡೆಯಲಿದ್ದು, ಉಪ್ಪಿನಂಗಡಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸೇವಾ ಟ್ರಸ್ಟ್ನ ಮಹಿಳಾ ವಿಭಾಗದ ಅಧ್ಯಕ್ಷೆ ಅನುರಾಧ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಮ್‌ನ ಸಾಧ್ವಿ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಲಿದ್ದಾರೆ. ರಾತ್ರಿ 9ರಿಂದ ಮಹಾಪೂಜೆಯಾಗಿ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 9:30ರಿಂದ ಕೋಟೆ ಆರ್ಯನ್ ಬಳಗದ ಗಂಗಾಧರ ಟೈಲರ್ ಅವರಿಂದ ಜಾದೂ ಪ್ರದರ್ಶನ ನಡೆಯಲಿದೆ. ಸೆ.16ರಂದು ಬೆಳಗ್ಗೆ 9:30ಕ್ಕೆ ಲೋಕ ಕಲ್ಯಾಣಾರ್ಥವಾಗಿ ಸಹಸ್ರ ಮೋದಕ ಗಣಯಾಗ, ಮಧ್ಯಾಹ್ನ 12:45ರಿಂದ ಮಹಾಪೂಜೆಯಾಗಿ ಅನ್ನಸಂತರ್ಪಣೆ ನಡೆಯಲಿದೆ. 2:30ರಿಂದ ಭಜನಾ ಸೇವೆ ನಡೆಯಲಿದ್ದು, 3:30ರಿಂದ ಶ್ರೀ ಮಧೂರು ಮಾಧವ ಮಯ್ಯ ಮತ್ತು ಬಳಗದವರಿಂದ ಭಜನ್ ಸಂಧ್ಯಾ' ನಡೆಯಲಿದೆ. ಸಂಜೆ 5ರಿಂದ ಶ್ರೀ ಗುರು ಸುಧೀಂದ್ರ ಕಲಾ ಮಂದಿರದಲ್ಲಿ ದೋಸೆ ಕ್ಯಾಂಪ್’ ನಡೆಯಲಿದ್ದು, ರಾತ್ರಿ 7ರಿಂದ ಡಾ. ಗೋವಿಂದ ಪ್ರಸಾದ್ ಕಜೆ ಬಳಗದವರಿಂದ ರತಿ ಕಲ್ಯಾಣ' ಯಕ್ಷಗಾನ ಬಯಲಾಟ ನಡೆಯಲಿದೆ. ರಾತ್ರಿ ಮಹಾಪೂಜೆಯಾಗಿ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಸೆ.17ರಂದು ಬೆಳಗ್ಗೆ 9:30ಕ್ಕೆ ಗಣಹೋಮ ನಡೆಯಲಿದ್ದು, ಪೂರ್ವಾಹ್ನ 11:30ರಿಂದ ಭಜನಾ ಸೇವೆ (ಕುಣಿತ ಭಜನೆಯೊಂದಿಗೆ) ನಡೆಯಲಿದೆ. ಮಧ್ಯಾಹ್ನ 12:45ರಿಂದ ಮಹಾಪೂಜೆಯಾಗಿ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5ರಿಂದ ಸೌರಭ ಕಲಾ ಪರಿಷತ್‌ನ ಗುರು ಡಾ. ಶ್ರೀವಿದ್ಯಾ ಇವರ ಶಿಷ್ಯವೃಂದದಿAದ ನೃತ್ಯ ಮಂದಾರ’ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಉಪ್ಪಿನಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸೇವಾ ಟ್ರಸ್ಟ್ನ ಅಧ್ಯಕ್ಷ ಕೆ. ಸುಧಾಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಹಿಂದೂ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಾಜಿ ಶಾಸಕ ಸಂಜೀವ ಮಠಂದೂರು ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ 9ಕ್ಕೆ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಲಿದೆ. ಸೆ.18ರಂದು ಬೆಳಗ್ಗೆ 9:30ರಿಂದ ಗಣಹೋಮ, ಪೂರ್ವಾಹ್ನ 11:30ರಿಂದ ಸುಸ್ವರ ಮೆಲೋಡಿಸ್ ಉಪ್ಪಿನಂಗಡಿ ಇವರಿಂದ `ಭಕ್ತಿ ಭಾವ ಗಾನ ಸಂಭ್ರಮ’ ನಡೆಯಲಿದೆ. ಮಧ್ಯಾಹ್ನ 12:45ಕ್ಕೆ ಮಹಾಪೂಜೆಯಾಗಿ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4ಕ್ಕೆ ಮಹಾಪೂಜೆ ನಡೆಯಲಿದ್ದು, 4:30ರಿಂದ ಶೋಭಾಯಾತ್ರೆ ನಡೆಯಲಿದ್ದು, ದಿಗ್ವಿಜಯ ಮತ್ತು ಭಜನಾ ಶೋಭಾಯಾತ್ರೆಗೆ ಉಜಿರೆಯ ಶ್ರೀ ಲಕ್ಷ್ಮಿ ಇಂಡಸ್ಟ್ರೀಸ್ ನ ಮೋಹನ್ ಕುಮಾರ್ ಹಾಗೂ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಚಾಲನೆ ನೀಡಲಿದ್ದಾರೆ ಎಂದು ಸುಧಾಕರ ಶೆಟ್ಟಿ ಕೆ.ಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here