ಅಜ್ಜಿಕಲ್ಲು ಮುಂಡೋದಮೂಲೆ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ

0

ನಿಡ್ಪಳ್ಳಿ:  ಅಜ್ಜಿಕಲ್ಲು ಮುಂಡೋದ ಮೂಲೆ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಸೆ.10 ರಂದು ನಡೆಯಿತು.

 ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಏಕತಡ್ಕ ಇಲ್ಲಿನ ಮುಖ್ಯಗುರು ತನುಜಾ. ಎಂ  ದೀಪ ಬೆಳಗಿಸಿ ಉದ್ಘಾಟಿಸಿ ಪೌಷ್ಟಿಕ ಆಹಾರದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷರಾದ  ಹರಿಣಾಕ್ಷಿ, ಒಳಮೊಗ್ರು ಗ್ರಾಮ ಪಂಚಾಯತ್ ನಿಕಟ ಪೂರ್ವ ಸದಸ್ಯ ಮಹೇಶ್ ರೈ ಕೇರಿ,  ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ  ಚಂದ್ರಿಕಾ ರೈ ಮೊಡಪ್ಪಾಡಿ ಉಪಸ್ಥಿತರಿದ್ದರು.

ಆರೋಗ್ಯ ಮತ್ತು ಪೌಷ್ಟಿಕ ಆಹಾರದ ಕುರಿತು  ಸಮುದಾಯ ಆರೋಗ್ಯ ಅಧಿಕಾರ  ವಿದ್ಯಾಶ್ರೀ ತಿಳಿಸಿದರು. ಬಾಲವಿಕಾಸ ಸಮಿತಿಯ ಸದಸ್ಯರು ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಮಕ್ಕಳ ಪೋಷಕರು ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಮಾರು 20 ಬಗೆಯ ಪೌಷ್ಟಿಕ ಖಾದ್ಯಗಳನ್ನು ತಯಾರಿಸಿ ಪ್ರಾತ್ಯಕ್ಷಿಕೆ ನೀಡಿದರು. ಅಂಗನವಾಡಿ ಮಕ್ಕಳು ಪ್ರಾರ್ಥಿಸಿ, ಅಂಗನವಾಡಿ ಕಾರ್ಯಕರ್ತೆ  ಗೀತಾ ಸ್ವಾಗತಿಸಿದರು. ಸ್ತ್ರೀ ಶಕ್ತಿ ಗುಂಪಿನ ಸದಸ್ಯರಾದ  ಸುನಿತಾ ವಂದಿಸಿದರು. ಏಕತಡ್ಕ ಶಾಲೆಯ ಅತಿಥಿ ಶಿಕ್ಷಕಿ ಚೇತನ ಸತೀಶ್ ಕಾರ್ಯಕ್ರಮ ನಿರೂಪಿಸಿದರು.ಅಂಗನವಾಡಿ ಸಹಾಯಕಿ ರತಿ ಪಿ ಸಹಕರಿಸಿದರು.

LEAVE A REPLY

Please enter your comment!
Please enter your name here