ನಾಳೆ ಸೆ.14ಕ್ಕೆ ತ್ಯಾಗರಾಜ ನಗರದಲ್ಲಿ ಹಿಂಜಾವೆಯಿಂದ 24ನೇ ವಾರ್ಷಿಕ ಸಮಾರಂಭ,ಸಾಮೂಹಿಕ ಗಣಪತಿ ಹವನ

0

ಪುತ್ತೂರು: ಕೆದಂಬಾಡಿ ಗ್ರಾಮದ ತ್ಯಾಗರಾಜನಗರದ ಹಿಂದು ಜಾಗರಣಾ ವೇದಿಕೆ ಇದರ ವತಿಯಿಂದ 24ನೇ ವಾರ್ಷಿಕ ಸಮಾರಂಭ ಮತ್ತು ಸಾಮೂಹಿಕ ಗಣಪತಿ ಹವನ ಕಾರ್ಯಕ್ರಮ ಸೆ.14ರಂದು ನಡೆಯಲಿದೆ.

ಸೆ.14ರಂದು ಬೆಳಿಗ್ಗೆ ಸಾಮೂಹಿಕ ಗಣಪತಿ ಹವನ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂರ್ಪಣೆ ನಡೆಯಲಿದೆ. ಮಧ್ಯಾಹ್ನ ಕೆದಂಬಾಡಿ ಮತ್ತು ಅರಿಯಡ್ಕ ಗ್ರಾಮದ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಯಲಿದೆ. ಸೆ.16ರಂದು ಸಂಜೆ ಗಂಟೆ 6ಕ್ಕೆ ಭಜನಾ ಕಾರ್ಯಕ್ರಮ ನಡೆಯಲಿದೆ. ಬಳಿಕ ನಡೆಯವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.

ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರದ ಸಂಚಾಲಕ ಅವಿನಾಶ್ ಕೊಡೆಂಕೀರಿ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಪೊಡಿಯ ತ್ಯಾಗರಾಜನಗರ ಅತಿಥಿಯಾಗಿ ಭಾಗವಹಿಸಲಿದ್ದಾರೆ. ರಾತ್ರಿ ಗಂಟೆ 7ಕ್ಕೆ ತಿಂಗಳಾಡಿಯ ಶ್ರೀ ದೇವತಾ ಭಜನಾ ಮಂದಿರದ ಆಶ್ರಯದಲ್ಲಿ ಪೂಜಿಸಿದ ಶ್ರೀ ಮಹಾಗಣೇಶನ ಶೋಭಾಯಾತ್ರೆಯನ್ನು ಬರಮಾಡಿಕೊಳ್ಳಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here