






- ಉತ್ತಮ ಕೆಲಸಕ್ಕೆ ದೇವರು ಫಲ ನೀಡುತ್ತಾನೆ- ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ
- ಸ್ವಾಭಿಮಾನದ ಬದುಕಿಗೆ ಸ್ವ ಉದ್ಯೋಗ ಅಗತ್ಯ- ಸಂಜೀವ ಮಠಂದೂರು
- ವೋಕಲ್ ಫಾರ್ ಲೋಕಲ್ಗೆ ಕೊಡುಗೆ- ಅರುಣ್ ಕುಮಾರ್ ಪುತ್ತಿಲ
- ಅಭಿವೃದ್ಧಿ ಹೊಂದುತ್ತಿರುವ ಪುತ್ತೂರಿಗೆ ಅಗತ್ಯ- ಪಂಜಿಗುಡ್ಡೆ ಈಶ್ವರ ಭಟ್
- ಎರಡು ಸೂಪರ್ಗಳು ಮಳಿಗೆ ಆರಂಭಿಸಿದ್ದಾರೆ- ಮಹೇಶ್ ಕಜೆ
- ಸ್ವಾವಲಂಬಿಯಾಗಿ ಬದುಕಲು ಅವಕಾಶ- ಸಹಜ್ ರೈ ಬಳಜ್ಜ
- ಸಮಯಕ್ಕೆ ಮಹತ್ವ ಕೊಡಬೇಕು- ಉಜ್ವಲ್ ಪ್ರಭು
ಪುತ್ತೂರು: ಕಳೆದ ಹಲವಾರು ವರ್ಷಗಳಿಂದ ಪುತ್ತೂರು ಸಹಿತ ಕರಾವಳಿ ಹಾಗೂ ರಾಜ್ಯಾದ್ಯಂತ ತಮ್ಮ ಶುಚಿ-ರುಚಿಯಾದ ಮಸಾಲೆಗಳ ಮೂಲಕ ಚಿರಪರಿಚಿತರಾಗಿರುವ `ಎಸ್.ಜಿ ಪ್ಯೂರ್’ ಸಂಸ್ಥೆ ಇದೀಗ ಮತ್ತೊಂದು ಕೊಡುಗೆ ನೀಡಲು ಸಿದ್ಧವಾಗಿದೆ. ‘ಎಸ್.ಜಿ ಪ್ಯೂರ್’ ಸಂಸ್ಥೆ ವತಿಯಿಂದ ‘ಎಸ್.ಜಿ ಪ್ಯೂರ್’ ಸೂಪರ್ ಮಾರ್ಕೆಟ್ ಸೆ.13ರಂದು ಪುತ್ತೂರು ಬೈಪಾಸ್ ರಸ್ತೆಯ ಪ್ರಾರ್ಥನಾ ಗಾರ್ಡನ್ ಹೋಟೆಲ್ ಬಳಿ ಶುಭಾರಂಭಗೊಂಡಿತು.



ಉತ್ತಮ ಕೆಲಸಕ್ಕೆ ದೇವರು ಫಲ ನೀಡುತ್ತಾನೆ:
ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿವರ್ಯರಾದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ ನಾವು ಯಾವುದೇ ಕೆಲಸ ಮಾಡುವಾಗ ಪ್ರತಿಫಲ ನಿರೀಕ್ಷೆ ಮಾಡಬಾರದು. ನಮ್ಮ ಕೆಲಸ ಕಾರ್ಯದ ಉದ್ಧೇಶ ಒಳ್ಳೆಯದಿದ್ದಾಗ ದೇವರೇ ಫಲ ನೀಡುತ್ತಾನೆ. ಪುತ್ತೂರಿಗೆ ಇದು ಉತ್ತಮ ಕೊಡುಗೆಯಾಗಿದೆ. ನೀವು ಆರಂಭಿಸಿದ ಮಳಿಗೆ ಇನ್ನಷ್ಟು ಶಾಖೆಯನ್ನು ಹೊಂದಲಿ ಎಂದು ಹೇಳಿ ಶುಭ ಹಾರೈಸಿದರು.



ಸ್ವಾಭಿಮಾನದ ಬದುಕಿಗೆ ಸ್ವ ಉದ್ಯೋಗ ಅಗತ್ಯ:
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಗೌರಿ ಗಣೇಶ ವಿಶೇಷ ಹಬ್ಬದ ಸಂಭ್ರಮ ಆಚರಣೆಗೆ ಇದು ಕೊಡುಗೆಯಾಗಿದೆ. ಆಳಾಗಿ ದುಡಿಯದೆ ಅರಸನಾಗಿ ಬದುಕಬೇಕು ಎಂಬಂತೆ ಸ್ವಾಭಿಮಾನದ ಬದುಕು ಪಡೆಯಲು ಇಂತಹ ಸ್ವ ಉದ್ಯೋಗ ಅಗತ್ಯ. ಇದರಿಂದ ಒಂದಷ್ಟು ಜನರಿಗೆ ಉದ್ಯೋಗ ಲಭಿಸುತ್ತದೆ. ಪುತ್ತೂರಿನ ಸರ್ವತೋಮುಖ ಬೆಳವಣಿಗೆಯೂ ಆಗುತ್ತದೆ ಎಂದರು. ನಮ್ಮ ಊರಿನ ಉತ್ಪನ್ನ ಉರಿನಲ್ಲಿಯೇ ಮಾರಾಟ ಮಾಡುವ ಕಲ್ಪನೆ ಹಾಗೂ ಉತ್ಪನ್ನಗಳಿಗೆ ಮಾರ್ಕೆಟಿಂಗ್ ಕೊಡುವ ಕೆಲಸ ಮಾಡಿದ್ದಾರೆ ಎಂದರು.
ವೋಕಲ್ ಫಾರ್ ಲೋಕಲ್ಗೆ ಕೊಡುಗೆ:
ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಬೆಳೆಯುತ್ತಿರುವ ಪುತ್ತೂರಿಗೆ ಸೂಪರ್ ಮಾರ್ಕೆಟ್ ಅವಶ್ಯಕತೆ ಇದೆ. ಒಂದೇ ಕಡೆ ಎಲ್ಲನ್ನೂ ಕಲ್ಪಿಸುವ ಯೋಚನೆಯೊಂದಿಗೆ ಪ್ರಧಾನಿಯವರ ವೋಕಲ್ ಫಾರ್ ಲೋಕಲ್ಗೆ ಇದು ಕೊಡುಗೆಯಾಗಿದೆ. ಶ್ರೀಮಹಾಲಿಂಗೇಶ್ವರನ ಅನುಗ್ರಹದೊಂದಿಗೆ ಇನ್ನಷ್ಟು ಮಳಿಗೆ ಆರಂಭ ಆಗಲಿ ಎಂದರು.
ಅಭಿವೃದ್ಧಿ ಹೊಂದುತ್ತಿರುವ ಪುತ್ತೂರಿಗೆ ಅಗತ್ಯ:
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ ಪುತ್ತೂರು ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ಪುತ್ತೂರಿಗೆ ಸೂಪರ್ ಮಾರ್ಕೆಟ್ ಅಗತ್ಯವಿದೆ ಎಂದು ಹೇಳಿ ಶುಭಹಾರೈಸಿದರು.
ಎರಡು ಸೂಪರ್ಗಳು ಮಳಿಗೆ ಆರಂಭಿಸಿದ್ದಾರೆ:
ಹಿರಿಯ ವಕೀಲ ಮಹೇಶ್ ಕಜೆ ಮಾತನಾಡಿ ಸೂಪರ್ ಮಾರ್ಕೆಟ್ ಸಂಸ್ಥೆಯನ್ನು ಎರಡು ಸೂಪರ್ಗಳು ಆರಂಭಿಸಿದ್ದಾರೆ. ಅವರಿಗೆ ಯಶಸ್ಸು ಸಿಗಲಿ ಎಂದು ಶುಭಹಾರೈಸಿದರು.
ಸ್ವಾವಲಂಬಿಯಾಗಿ ಬದುಕಲು ಅವಕಾಶ:
ಉದ್ಯಮಿ, ವಿಜಯ ಸಾಮ್ರಾಟ್ ಸಂಸ್ಥಾಪಕ ಸಹಜ್ ರೈ ಬಳಜ್ಜ ಮಾತನಾಡಿ ಪುತ್ತೂರಿಗೆ ಉತ್ತಮ ಕೊಡುಗೆ ನೀಡಿದ್ದಾರೆ. ಸ್ವಾವಲಂಬಿಯಾಗಿ ಬದುಕಲು ಸ್ವ ಉದ್ಯೋಗ ಮಾಡುವ ಕೆಲಸ ಆರಂಭಿಸಿದ್ದಾರೆ. ಇದರಿಂದ ಒಂದಷ್ಟು ಜನರಿಗೂ ಉದ್ಯೋಗ ಸಿಗುತ್ತದೆ. ಅಲ್ಲದೆ ಮನೆಯಲ್ಲಿಯೇ ಕುಳಿತು ಖರೀದಿ ಮಾಡುವ ವ್ಯವಸ್ಥೆಯೂ ಇದ್ದು ಹೋಮ್ ಡೆಲಿವರಿ ಲಭ್ಯವಿದೆ. ಇನ್ನಷ್ಟು ಸಂಸ್ಥೆ ಮಾಡುವ ಕೆಲಸ ಆಗಲಿ ಎಂದರು.
ಸಮಯಕ್ಕೆ ಮಹತ್ವ ಕೊಡಬೇಕು:
ಉದ್ಯಮಿ, ಯುಆರ್ ಪ್ರಾಪರ್ಟಿಸ್ ಮಾಲಕ ಉಜ್ವಲ್ ಪ್ರಭು ಮಾತನಾಡಿ ಯಾವುದೇ ಉದ್ಯೋಗ ಮಾಡುವಾಗ ಅಪೇಕ್ಷೆ ಇಟ್ಟು ಕೊಳ್ಳಬಾರದು. ಅದರಲ್ಲಿ ನಂಬಿಕೆ ಇಟ್ಟು ಕೆಲಸ ಮಾಡಿದಾಗ ಫಲ ಸಿಗುತ್ತದೆ. ಅದಾನಿ ಅಂಬಾನಿ ಇದ್ದರೂ ಲೆಕ್ಕಿಸದೆ ನೀವು ಪ್ರಯತ್ನ ಮಾಡಿ ಗೆಲುವು ಸಿಗುತ್ತದೆ. ಸಮಯಕ್ಕೆ ಉತ್ತಮ ಪ್ರಾಧಾನ್ಯತೆ ಕೊಡಬೇಕು. ಹೋಗುವ ದಾರಿ ಸ್ಪಷ್ಟತೆ ಇರಲಿ ಎಂದು ಹೇಳಿ ಶುಭ ಹಾರೈಸಿದರು.
ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ ಬನ್ನೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೇವ ಟ್ರೇಡರ್ಸ್ನ ರವೀಂದ್ರ, ಇಕೋ ಫ್ರೆಂಡ್ಲಿ ಸಂಸ್ಥೆಯ ಶಂಕರ್ ಭಟ್, ರಘುನಾಥ್, ಅಚ್ಯುತ ಕಡ್ಯ, ಆನಂದ, ಸೌಜನ್ಯ ಗಿರಿಧರ್, ನಿಶಾ ಶ್ರವಣ್ ಕುಮಾರ್ ಉಪಸ್ಥಿತರಿದ್ದರು. ಆಡಳಿತ ಪಾಲುದಾರರಾದ ಶ್ರವಣ್ ಕುಮಾರ್, ಗಿರಿಧರ್ ಭಟ್ ಅತಿಥಿಗಳನ್ನು ಸ್ವಾಗತಿಸಿ ಗೌರವಿಸಿದರು. ನಂದಿನಿ ಪ್ರಾರ್ಥಿಸಿ ಕಾರ್ಯಕ್ರಮ ನಿರೂಪಿಸಿದರು.
ಸೂಪರ್ ಮಾರ್ಕೆಟ್ನಲ್ಲಿ ಏನೇನಿದೆ…!!
“ಸೂಪರ್ ಮಾರ್ಕೆಟ್” ಹೆಸರೇ ಹೇಳುವ ಹಾಗೇ ಸೂಪರ್ ಆಗಿರೋ ಐಟಂಗಳು ಸಿಗುತ್ತೆ. ತಾಜಾ ತರಕಾರಿಗಳು, ಹಣ್ಣು-ಹಂಪಲು, ವಿವಿಧ ಬಗೆಯ ಐಸ್ ಕ್ರೀಮ್, ಮನೆಗೆ ಬೇಕಾದ ದಿನಸಿ ಸಾಮಾಗ್ರಿಗಳು, ದೈನಂದಿನ ಅಗತ್ಯ ವಸ್ತುಗಳು, ಪೂಜಾ ಸಾಮಾಗ್ರಿ, ಗಿಫ್ಟ್ ಐಟಂಗಳು, ಹೋಮ್ ಮೇಡ್ ಐಟಂಗಳು, ನ್ಯಾಚುರಲ್ ಕೊಕೊನಟ್ ಆಯಿಲ್ (ಶುದ್ಧ ತೆಂಗಿನೆಣ್ಣೆ) ಮತ್ತು ಜಿಂಜೆಲಿ ಆಯಿಲ್ (ಶುದ್ಧ ಎಳ್ಳೆಣ್ಣೆ) ಹೀಗೆ ಹತ್ತು ಹಲವಾರು ಬಗೆಯ ದಿನ ಬಳಕೆ ವಸ್ತುಗಳು ಎಲ್ಲವೂ ಒಂದೇ ಸೂರಿನಡಿ ಲಭ್ಯವಾಗಲಿದೆ ಜೊತೆಗೆ ಎಸ್.ಜಿ ಪ್ಯೂರ್ ಅವರ ಮಸಾಲಾ ಪ್ರೊಡಕ್ಟ್ಸ್ ಕೂಡ ಲಭ್ಯವಾಗಲಿದೆ. ಕ್ಯಾಟರಿಂಗ್ ಮತ್ತು ಹೊಟೇಲ್ನವರಿಗೆ ಹೋಲ್ ಸೇಲ್ ದರದಲ್ಲಿ ನೀಡಲಾಗುವುದು. ಅಲ್ಲದೆ ಹೋಮ್ ಡೆಲಿವರಿ ವ್ಯವಸ್ಥೆಯೂ ಲಭ್ಯವಿದೆ ಎಂದು ಆಡಳಿತ ಪಾಲುದಾರರಾದ ಶ್ರವಣ್ ಕುಮಾರ್, ಗಿರಿಧರ್ ಭಟ್ ತಿಳಿಸಿದ್ದಾರೆ.










