






ಕಾಣಿಯೂರು: ಜೋಸ್ ಅಲುಕಾಸ್ ಪುತ್ತೂರು ಇಲ್ಲಿಯ ಸಿಎಸ್ಆರ್ ಫಂಡ್ ನಿಧಿ ಅಡಿಯಲ್ಲಿ ಕುದ್ಮಾರು ಸ.ಉ.ಹಿ.ಪ್ರಾ.ಶಾಲೆಗೆ ಬ್ಯಾಂಡ್ ಸೆಟ್ ಹಾಗೂ ಕಂಪ್ಯೂಟರ್ ಖರೀದಿಗಾಗಿ ರೂ. 100880 ಅನುದಾನದ ಚೆಕ್ ನ್ನು ಕುದ್ಮಾರು ಶಾಲೆಯ ಮುಖ್ಯಗುರು ಮಿನಿ ವರ್ಗಿಸ್, ಎಸ್ ಡಿ ಎಂ ಸಿ ಅಧ್ಯಕ್ಷ ದೇವರಾಜ್ ನೂಜಿ, ಸದಸ್ಯ ಆನಂದ ಗೌಡ, ಶಿಕ್ಷಕಿ ವೀಣಾ ಅವರಿಗೆ ಜೋಸ್ ಅಲುಕಾಸ್ ಇದರ ಶಾಖಾ ವ್ಯವಸ್ಥಾಪಕ ಹರಿ ಮಾರಾರ್, ಸಹಾಯಕ ವ್ಯವಸ್ಥಾಪಕ ಪ್ರಜೀಶ್ ಪ್ರಕಾಶ್, ಅಕೌಂಟೆಂಟ್ ಇನೋಶ್ ಸನ್ನಿ ಅವರು ಹಸ್ತಾಂತರಿಸಿದರು.












