







ಪುತ್ತೂರು: ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ 40ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ನಡೆಯಿತು.
ಸೆ.14ರಂದು ಬೆಳಿಗ್ಗೆ ಗಣಪತಿ ಹೋಮ,ವಿಗ್ರಹ ಪ್ರತಿಷ್ಠೆ ನಡೆಯಿತು.
ಬಳಿಕ ಶ್ರೀಪಂಚಲಿಂಗೇಶ್ವರ ಭಜನಾ ಸಂಘ ಈಶ್ವರಮಂಗಲ, ಒಡಿಯೂರು ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆ ಈಶ್ವರಮಂಗಲ, ಪಂಚಶ್ರೀ ಮಹಿಳಾ ತಂಡ ಈಶ್ವರಮಂಗಲ, ಶ್ರೀ ಮಹಾಮಾಯಿ ಮರಾಠಿ ಭಜನಾ ಸಂಘ ಈಶ್ವರಮಂಗಲ ತಂಡಗಳಿಂದ ಭಜನಾ ಕಾರ್ಯಕ್ರಮಗಳು ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು


ಸನ್ಮಾನ:
ಕಳೆದ 35 ವರ್ಷಗಳಿಂದ ಶ್ರೀಗಣಪತಿ ದೇವರ ವಿಗ್ರಹಮೂರ್ತಿಯನ್ನು ಸೇವಾ ರೂಪದಲ್ಲಿ ನೀಡಿರುವ ಅರಿಯಡ್ಕ ಮಹಿಳ್ನಾಥ ಶೆಟ್ಟಿ ಸಾಂತ್ಯ, ಪತ್ನಿ ಶ್ರೀಲತಾರವರನ್ನು ಸನ್ಮಾನಿಸಲಾಯಿತು. ಸನ್ಮಾನಿಸಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಗೌರವ ಸಲಹೆಗಾರ ಶ್ರೀಕೃಷ್ಣ ಭಟ್ ಮುಂಡ್ಯರವರು ಮಾತನಾಡಿ ನಿಮ್ಮೆಲ್ಲರ ಸಹಕಾರದಿಂದ ದೀರ್ಘ ಸಮಯದಿಂದ ಅಳಿಲು ಸೇವೆ ಮಾಡುವ ಯೋಗ ಬಂದಿತ್ತು. ಆಗ ಭಕ್ತಾದಿಗಳ ಬೇಡಿಕೆಯಂತೆ ಗಣೇಶೋತ್ಸವ ಕಾರ್ಯಕ್ರಮ ಮಾಡುವ ಸಂದರ್ಭದಲ್ಲಿ ಮಹಿಳ್ನಾಥ ಶೆಟ್ಟಿರವರು ವಿಗ್ರಹ ರಚನೆಯ ಪ್ರಾಯೋಜಕತ್ವ ವಹಿಸಿದ್ದರು. ಬಳಿಕ 40 ವರ್ಷದವರೆಗೆ ಸೇವೆ ಮಾಡುತ್ತಾ ಬಂದಿದ್ದಾರೆ. ಅವರ ಹಿರಿಯರ ತ್ಯಾಗವೂ ಇವರಲ್ಲಿ ರಕ್ತಗತವಾಗಿ ಬಂದಿದೆ. ಅವರನ್ನು ಸನ್ಮಾನಿಸಿರುವುದು ಅರ್ಥಪೂರ್ಣವಾಗಿ ಬಂದಿದೆ ಎಂದು ಹೇಳಿದರು.




ಕಳೆದ ಎಸ್ಎಸ್ಎಲ್ಸಿಯಲ್ಲಿ 625 ಅಂಕ ಪಡೆದ ಹನುಮಗಿರಿ ಗಜಾನನ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿ ಅನನ್ಯರವರನ್ನು ಗೌರವಿಸಲಾಯಿತು. ರಾಜೇಂದ್ರಪ್ರಸಾದ್ ರೈ ಮೇನಾಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಗೌರವ ಸಲಹೆಗಾರರಾದ ನಾಗಪ್ಪ ಗೌಡ ಬೊಮ್ಮೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಂಜುನಾಥ ರೈ ಸಾಂತ್ಯ, ವಿಕ್ರಮ ರೈ ಸಾಂತ್ಯ, ದೇವಸ್ಥಾನದ ಪವಿತ್ರಪಾಣಿ ಗೋಪಾಲಕೃಷ್ಣ ಕುಂಜತಾಯ, ಅಧ್ಯಕ್ಷ ಹರೀಶ್ ಕುಮಾರ್ ಪುಳಿತ್ತಡಿ, ಉಪಾಧ್ಯಕ್ಷ ಗಾಯತ್ರಿ ಚಂದ್ರಶೇಖರ್ ಕತ್ರಿಬೈಲು, ಸುಂದರ ಜಿ. ಜಲಧರ ಕಾಲೋನಿ, ಪ್ರಧಾನ ಕಾರ್ಯದರ್ಶಿ ಗಣೇಶ್ ಎಂ. ವಜ್ರಮುಲೆ, ಜೊತೆ ಕಾರ್ಯದರ್ಶಿ ಕೊರಗಪ್ಪ ಮಂಡ್ಯ, ಖಜಾಂಜಿ ಹರೀಶ್, ಸಂಘಟನಾ ಕಾರ್ಯದರ್ಶಿ ಜಯರಾಜ್ ಮುಂಡ್ಯ, ದೇವಾಲಯದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಮೋಹನದಾಸ್ ರೈ ನೂಜಿಬೈಲು ಹಾಗೂ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು. ಚಿನ್ಮಯ ರೈ ನಡುಬೈಲು, ಜಯಚಂದ್ರ ಸೆರಾಜೆ, ಮೋಹನಾಂಗಿ ಬೀಜಂತಡ್ಕ, ರತಿ ರಮೇಶ್ ಪೂಜಾರಿ ಮುಂಡ್ಯ, ಸತೀಶ್ ಸುರುಳಿಮೂಲೆ, ಜಗನ್ನಾಥ ರೈ ನೆಲ್ಲಿತ್ತಡ್ಕ, ಆನಂದ ರೈ ಸಹಕರಿಸಿದರು.
ಅಪರಾಹ್ನ ಸಾರ್ವಜನಿಕರಿಗೆ ಮತ್ತು ಒಂದರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಗಣೇಶನ ಭಕ್ತಿಗೀತೆ ಸ್ಪರ್ಧೆ ನಡೆಯಿತು, ಸಂಜೆ ಶ್ರೀಗಣೇಶನ ವೈಭವದ ಶೋಭಯಾತ್ರೆ ಕುಣಿತ ಭಜನೆ ಮತ್ತು ಭಜನಾ ತಂಡದೊಂದಿಗೆ ನಡೆದು ಈಶ್ವರಮಂಗಳ ಪಟ್ಲಡ್ಕ ಹೊಳೆಯಲ್ಲಿ ಗಣೇಶ ಮೂರ್ತಿಯ ಜಲಸ್ತಂಭನ ನಡೆಯಿತು.










