







ಪುತ್ತೂರು: ಶ್ರೀಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರ ಹನುಮಗಿರಿ ಇಲ್ಲಿನ ನಿತ್ಯದ ಅನ್ನದಾನ ಸೇವೆಗೆ ಕರ್ನಾಟಕ ಬ್ಯಾಂಕ್ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಯಡಿ ಕೊಡುಗೆಯಾಗಿ ನೀಡಿದ ನೂತನ “ಸ್ಟೀಮ್ ಬಾಯ್ಲರ್” (Steam Boiler)ನ ಉದ್ಘಾಟನಾ ಕಾರ್ಯಕ್ರಮ ನಡೆಯಿತು.



ಹನುಮಗಿರಿ ಕ್ಷೇತ್ರದ ಮಹಾಪೋಷಕರಾದ ಜಿ. ಕೆ. ಮಹಾಬಲೇಶ್ವರ ಭಟ್ ದೀಪ ಬೆಳಗಿಸುವ ಮೂಲಕ ನೂತನ ಸ್ಟೀಮ್ ಬಾಯ್ಲರ್ ಉದ್ಘಾಟಿಸಿದರು. ಕರ್ನಾಟಕ ಬ್ಯಾಂಕ್‌ನ ಜಿ.ಎಂ ವಿಶ್ವನಾಥ್ ಎಸ್. ಆರ್. ಮಾತನಾಡಿ ಸಮಾಜಮುಖಿ ಕಾರ್ಯಗಳಲ್ಲಿ ಬ್ಯಾಂಕ್‌ನ ಪಾಲ್ಗೊಳ್ಳುವಿಕೆ ಹಾಗೂ ಸಿಎಸ್‌ಆರ್ ಯೋಜನೆಯ ಉದ್ದೇಶಗಳ ಕುರಿತು ವಿವರಿಸಿದರು. ಹನುಮಗಿರಿ ಕ್ಷೇತ್ರದ ಧರ್ಮದರ್ಶಿ ಶಿವರಾಮ್ ಪಿ. ಮಾತನಾಡಿ ದೇವಾಲಯದ ಅನ್ನದಾನ ಸೇವೆ ಹಾಗೂ ಭಕ್ತರ ಅನುಕೂಲಕ್ಕಾಗಿ ಸ್ಟೀಮ್ ಬಾಯ್ಲರ್ ಒದಗಿಸಿದ ಕರ್ನಾಟಕ ಬ್ಯಾಂಕ್‌ನ ಕಾರ್ಯವನ್ನು ಶ್ಲಾಘಿಸಿ ಈ ಮಹತ್ಕಾರ್ಯಕ್ಕಾಗಿ ಬ್ಯಾಂಕ್‌ನ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.



ಕರ್ಣಾಟಕ ಬ್ಯಾಂಕ್ ಪುತ್ತೂರು ಕ್ಲಸ್ಟರ್ ಮುಖ್ಯಸ್ಥ ಪೂರ್ಣಪ್ರಜ್ಞ ಎಂ., ಹಾಗೂ ಬ್ಯಾಂಕ್‌ನ ಈಶ್ವರಮಂಗಲ ಶಾಖಾ ವ್ಯವಸ್ಥಾಪಕ ಶ್ರೀಕೃಷ್ಣ ಕೆ. ಹಾಗೂ ಹನುಮಗಿರಿ ಕ್ಷೇತ್ರದ ಆಡಳಿತ ಮಂಡಳಿ ಸದಸ್ಯರು, ಬ್ಯಾಂಕ್ ಸಿಬ್ಬಂದಿಗಳು ಹಾಗೂ ಗಣ್ಯರಾದ ಶ್ರೀಕೃಷ್ಣ ಭಟ್ ಮುಂಡ್ಯ, ರಾಜೇಂದ್ರ ಪ್ರಸಾದ್ ಮೇನಾಲ, ಆನಂದ ರೈ ಸಾಂತ್ಯ, ಸುಬ್ಬಪ್ಪ ಪಟ್ಟೆ, ಪ್ರವೀಣ ನೀರಳಿಕೆ, ಪರಮೇಶ್ವರ ಗುರಿಯಡ್ಕ, ಸಂದೀಪ ಕಾರಂತ, ಜೀವನ್ ಕರ್ಪುಡಿಕಾನ, ರಘುರಾಮ್ ಭಟ್, ಧನಂಜಯ ಕರ್ಪುಡಿಕಾನ, ಸುಬ್ರಹ್ಮಣ್ಯ ಭಟ್ ಮುಂಡ್ಯ, ಪವನ್ ಬಾಣಪದವು, ಶೇಷಪ್ಪ, ಶಿವಪ್ರಸಾದ್ ಮದಕ, ಸೀತಾರಾಮ ಪೆರ್ಲಂಪಾಡಿ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು. ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.










