ನೆಲ್ಯಾಡಿ ಜೇಸಿಐಯಿಂದ ಆಶ್ರಮ ಭೇಟಿ-ಹಣ್ಣು,ಹಂಪಲು ವಿತರಣೆ

0

ನೆಲ್ಯಾಡಿ: ಜೇಸಿ ಸಪ್ತಾಹದ ಅಂಗವಾಗಿ ನೆಲ್ಯಾಡಿ ಜೇಸಿಐ ವತಿಯಿಂದ ನೆಲ್ಯಾಡಿ ಸಮೀಪದ ಕೊಪ್ಪದಲ್ಲಿರುವ ಪ್ರಶಾಂತ್ ನಿಲಯ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮವಾಸಿಗಳಿಗೆ ಊಟ ಹಾಗೂ ಹಣ್ಣು-ಹಂಪಲು ವಿತರಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ಜೇಸಿಐ ಅಧ್ಯಕ್ಷೆ ಪ್ರವೀಣಿ ಶೆಟ್ಟಿ ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜೇಸಿಐ ವಲಯ 15ರ ವಲಯ ಉಪಾಧ್ಯಕ್ಷ ಕಾಶಿನಾಥ ಗೋಗಟೆ ಶುಭಹಾರೈಸಿದರು. ಆಶ್ರಮದ ಮೇಲ್ವಿಚಾರಕಿ ಸಿ| ಜೆಸ್ಸಿ ಜೋಸೆಫ್ ಶುಭಹಾರೈಸಿ ಕೃತಜ್ಞತೆ ಸಲ್ಲಿಸಿದರು. ನೆಲ್ಯಾಡಿ ಜೆಸಿಐ ನಿಕಟ ಪೂರ್ವಾಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಕಾರ್ಯಕ್ರಮದ ಯೋಜನಾ ನಿರ್ದೇಶಕಿ ಲೀಲಾ ಮೋಹನ್, ಜ್ಞಾಹ್ನವಿ ಐ., ಜೊತೆ ಕಾರ್ಯದರ್ಶಿ ಸುಪ್ರೀತಾ ರವಿಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಮಿತಾ ಹರೀಶ್ ಜೇಸಿ ವಾಣಿ ವಾಚಿಸಿದರು. ರೇಷ್ಮಾ ಅತಿಥಿಗಳ ಪರಿಚಯ ಮಾಡಿದರು. ದೀಪಿಕಾ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಸುಪ್ರೀತಾ ರವಿಚಂದ್ರ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಜೇಸಿಐ ಸದಸ್ಯರು ಆಶ್ರಮವಾಸಿಗಳೊಂದಿಗೆ ವಿವಿಧ ಮನೋರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂತಸ ಹಂಚಿಕೊಂಡರು. ಬಳಿಕ ಆಶ್ರಮವಾಸಿಗಳಿಗೆ ಊಟ ಹಾಗೂ ಹಣ್ಣು-ಹಂಪಲುಗಳನ್ನು ವಿತರಿಸಲಾಯಿತು.

LEAVE A REPLY

Please enter your comment!
Please enter your name here