







ಬಡಗನ್ನೂರು :ಸುಳ್ಯಪದವು ಶಬರಿನಗರ ಕೊರಗಜ್ಜ ಕ್ಷೇತ್ರದಲ್ಲಿ ಸಂಕ್ರಮಣ ಶುಭ ಸಂಧರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ “ಸೀತಾ ಪರಿತ್ಯಾಗ” ಎಂಬ “ಗಮಕ – ವ್ಯಾಖ್ಯಾನ” ಕಾರ್ಯಕ್ರಮ ನಡೆಯಿತು.


ಗಮಕಿಯಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಕನ್ನಡ ಭಾಷಾ ಶಿಕ್ಷಕ ಚಂದ್ರಶೇಖರ ಸುಳ್ಯಪದವು ಮತ್ತು ಯಕ್ಷಗಾನ ಭಾಗವತ ಮನೋಹರ ಬಲ್ಲಾಳ್ ಅಡ್ವಳ ಹಾಗೂ ವ್ಯಾಖ್ಯಾನಗಾರರಾಗಿ ಅಪ್ಪಕುಂಞ ಯಾದವ್ ಮಿಂಚಿಪದವು ಭಾಗವಹಿಸಿದರು. ಹಾರ್ಮೋನಿಯಂ ವಾದಕರಾಗಿ ಸತೀಶ್ ಹೆಬ್ಬಾರ್ ಆಡೂರು ಸಹಕರಿಸಿದರು.













