







ಚಂದ್ರಹಾಸ್ ಶೆಟ್ಟಿ ಅವರ ಜೀವನ ಯುವ ಪೀಳಿಗೆ ಅನುಕರಣೀಯ-ಕರ್ನ್ಲ್ ಅಗರಿ ಜಗಜೀವನ್ ಭಂಡಾರಿ


ಪುತ್ತೂರು: ಸೆ. 6 ರಂದು ನಿಧನರಾದ ವಿಜಯ ಬ್ಯಾಂಕ್ ನಿವೃತ್ತ ಸೀನಿಯರ್ ಮ್ಯಾನೇಜರ್ ದಿ. ಬೈರೋಡಿ ಚಂದ್ರಹಾಸ ಶೆಟ್ಟಿ ಕೊಲ್ಲಾಡಿ ಅವರ ಉತ್ತರಕ್ರಿಯೆ ಸೆ. 19 ರಂದು ಮಂಗಳೂರಿನ ಸುಜೀರ್ ಸಿ.ವಿ.ನಾಯಕ್ ಹಾಲ್ ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಜರಗಿದ ನುಡಿನಮನ- ಶ್ರದ್ದಾಂಜಲಿ ಸಭೆ ನಡೆಯಿತು. ಕರ್ನ್ಲ್ ಅಗರಿ ಜಗಜೀವನ್ ಭಂಡಾರಿಯವರು ಮಾತನಾಡಿ ಚಂದ್ರಹಾಸ್ ಶೆಟ್ಟಿ ಅವರು ವಿಜಯ ಬ್ಯಾಂಕ್ನಲ್ಲಿ ಉತ್ತಮ ಅಧಿಕಾರಿ ಸೇವೆ ಸಲ್ಲಿಸಿದ್ದರು. ಇವರು ನಿವೃತ್ತ ಸೀನಿಯರ್ ಮ್ಯಾನೇಜರ್ ಆಗಿದ್ದರು. ವಿಜಯ ಬ್ಯಾಂಕ್ ಹಲವು ಶಾಖೆಗಳಲ್ಲಿ ಸೇವೆ ಸಲ್ಲಿಸಿ, ಎಲ್ಲರ ಅಚ್ಚು-ಮೆಚ್ಚಿನ ವ್ಯಕ್ತಿಯಾಗಿದ್ದರು. ಕುಟುಂಬ ಮತ್ತು ಸಮಾಜದ ಪ್ರತಿಯೊಬ್ಬರಿಗೂ ಅಚ್ಚು-ಮೆಚ್ಚಿನ ವ್ಯಕ್ತಿಯಾಗಿದ್ದರು, ಸರಳತೆ, ಸಜ್ಜನಿಕೆ ವ್ಯಕ್ತಿತ್ವದ ಮೂಲಕ ಸಮಾಜದಲ್ಲಿ ಆದರ್ಶ ಬದುಕನ್ನು ಸಾಗಿಸಿದ ಚಂದ್ರಹಾಸ್ ಶೆಟ್ಟಿ ಅವರ ಜೀವನ ಯುವ ಪೀಳಿಗೆ ಅನುಕರಣೀಯ ಎಂದು ಹೇಳಿ, ನುಡಿನಮನ ಸಲ್ಲಿಸಿದರು.




ಚಂದ್ರಹಾಸ್ ಶೆಟ್ಟಿ ಅವರ ಪತ್ನಿ ಶೋಭಾ ಚಂದ್ರಹಾಸ್ ಶೆಟ್ಟಿ, ಪುತ್ರ ತೇಜಸ್ ಶೆಟ್ಟಿ, ಸೊಸೆ ಸುಶ್ಮಿತಾ ಶೆಟ್ಟಿ, ಮೊಯಿಲಿ, ಆರ್ ಬಿಐ ಉತ್ತರ ವಲಯದ ಮಾಜಿ ನಿರ್ದೇಶಕ ಡಾ. ಅಗರಿ ನವೀನ್ ಭಂಡಾರಿ, ಅಗರಿ ಭಗವಾನ್ದಾಸ್ ಭಂಡಾರಿ, ಯಶೋಧಾ ಭಂಡಾರಿ, ಶಕುಂತಲಾ ಮೋಹನ್ದಾಸ್ ಭಂಡಾರಿ, ಆಶಾಲತಾ ಭಂಡಾರಿ, ಯಶೋಧಾ ಕೊಲ್ಲಾಡಿ, ನಾರಾಯಣ ಶೆಟ್ಟಿ, ಬೈರೋಡಿ ಲಕ್ಕಣ್ಣ ಶೆಟ್ಟಿ, ವನಜಾ ಶೆಟ್ಟಿ ಹಾಗೂ ತಾಳಿಪಡ್ಪು, ಅಗರಿ, ಬೈರೋಡಿ ಮತ್ತು ಕೊಲ್ಲಾಡಿ ಕುಟುಂಬಸ್ಥರು ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯದ ಮಾಜಿಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ, ಪುತ್ತೂರು ಕ್ಷೇತ್ರದ ಮಾಜಿ ಶಾಸಕಿ ಶಕುಂತಲಾ ಟಿ.ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆ ಮಾಜಿ ಅಧ್ಯಕ್ಷ ಭಾಸ್ಕರ್ ಮೊಯಿಲಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಅಶೋಕ್ ಕುಮಾರ್ ಸೇರಿದಂತೆ, ರಾಜಕೀಯ, ಸಾಮಾಜಿಕ, ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿಗಳು, ಹಿತೈಷಿಗಳು ಭಾಗವಹಿಸಿದ್ದರು.ಸಾಮಾಜಿಕ ಮುಂದಾಳು ಸಾಯಿನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.










