ಸೆ.25 : ದ.ಕ.ಜಿಲ್ಲಾ ಕೃಷಿ ಕಾರ್ಮಿಕರ ಸಹಕಾರಿ ಸಂಘದ ಪ್ರಧಾನ ಕಚೇರಿ ಸ್ಥಳಾಂತರ-ನೂತನ ಕಾರ್ಯಾಲಯ ಪ್ರವೇಶ – ಎಪಿಎಂಸಿ ರಸ್ತೆಯ ಲಿಲ್ಲಿ ಕಾಂಪ್ಲೆಕ್ಸ್ ‌ಗೆ ಸ್ಥಳಾಂತರ

0

ಪುತ್ತೂರು: ಪ್ರಸ್ತುತ ಏಳ್ಮುಡಿ ಭಟ್ ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿರುವ ದ.ಕ.ಜಿಲ್ಲಾ ಕೃಷಿ ಕಾರ್ಮಿಕರ ಸಹಕಾರಿ ಸಂಘದ ಮುಖ್ಯಕಚೇರಿಯನ್ನು ಗ್ರಾಹಕರ ಹಾಗೂ ಸದಸ್ಯರ ಅನುಕೂಲತೆಗಾಗಿ ಎಪಿಎಂಸಿ ರಸ್ತೆಯಲ್ಲಿರುವ ಲಿಲ್ಲಿ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಗೆ ಸ್ಥಳಾಂತರಗೊಂಡು ಸೆ.25ರಂದು ಗಣಪತಿ ಹೋಮ ಹಾಗೂ ಲಕ್ಷ್ಮೀ ಪೂಜೆಯೊಂದಿಗೆ ಕಚೇರಿ ಕಾರ್ಯಾಲಯ ಪ್ರವೇಶ ನಡೆಯಲಿದೆ.

ಅ.1ರಿಂದ ಕಚೇರಿಯ ಎಲ್ಲಾ ಅಧಿಕೃತ ಕೆಲಸಗಳು ನೂತನ ಕಾರ್ಯಾಲಯದಲ್ಲಿ ನಡೆಯಲಿದೆ.ಸದಸ್ಯರು ಹಾಗೂ ಸಂಘದ ಗ್ರಾಹಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಂಘದ ಅಧ್ಯಕ್ಷ ಇ.ಎಸ್.ವಾಸುದೇವ ಇಡ್ಯಾಡಿ ,ಉಪಾಧ್ಯಕ್ಷ ಡಿ.ಚೆನ್ನಪ್ಪ ಗೌಡ,ಕಾರ್ಯದರ್ಶಿ ಶ್ರೀದೇವಿ ಹಾಗೂ ನಿರ್ದೇಶಕರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here