







ಪುತ್ತೂರು: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಬಳಿಯ ಮೆಲ್ಕಾರ್ ನ ಬಿರ್ವ ಸೆಂಟರ್ ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಶ್ರೀ ಗುರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ.ದ 7ನೇ ಕಬಕ ಶಾಖೆಯು ಇಲ್ಲಿನ ಬ್ರೈಟ್ ಕಾಂಪ್ಲೆಕ್ಸ್ ನಲ್ಲಿ ಸೆ.26ರಂದು ಉದ್ಘಾಟನೆಗೊಳ್ಳಲಿದೆ.


ಸಂಸ್ಥೆಯ ಕಚೇರಿಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈರವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗುರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ಅಧ್ಯಕ್ಷರಾದ ಕೆ. ಹರಿಕೃಷ್ಣ ಬಂಟ್ವಾಳರವರು ವಹಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ಮೈಸೂರಿನ ಎಸ್.ಎಲ್ಚ.ವಿ. ಬುಕ್ಸ್ ಇಂಡಿಯಾ ಪ್ರೈ.ಲಿ. ಆಡಳಿತ ನಿರ್ದೇಶಕರಾದ ದಿವಾಕರ ದಾಸ್ ನೇರ್ಲಾಜೆರವರು ಉದ್ಘಾಟಿಸಲಿದ್ದಾರೆ. ಸಭಾಕಾರ್ಯಕ್ರಮವನ್ನು ಕಬಕ ಗ್ರಾ.ಪಂ. ಮಾಜಿ ಉಪಾಧ್ಯಕ್ಷರು, ನಿವೃತ್ತ ಮುಖ್ಯ ಶಿಕ್ಷಕರಾಗಿರುವ ರುಕ್ಮಯ ಗೌಡ ಎಂ.ರವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಉಪಾಧ್ಯಕ್ಷರಾದ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಯುವವಾಹಿನಿ ವಿಟ್ಲ ವಲಯ ಅಧ್ಯಕ್ಷರಾದ ಕೆ.ಟಿ.ಆನಂದ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾರಾಯಣ ಪೂಜಾರಿ ಎಸ್.ಕೆ., ಬ್ರೈಟ್ ಕಾಂಪ್ಲೆಕ್ಸ್ ನ ಮಾಲಕರಾದ ಇಸ್ಮಾಯಿಲ್ ಪಿ. ಮೊದಲಾದವರು ಆಗಮಿಸಲಿದ್ದಾರೆ.



ಸಂಸ್ಥೆ ನಡೆದು ಬಂದ ಹಾದಿ:
ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶದಂತೆ ಆಸ್ತಿತ್ವಕ್ಕೆ ಬಂದ ಶ್ರೀ ಗುರು ಸೊಸೈಟಿಯು ಜಿಲ್ಲಾಮಟ್ಟ ವ್ಯಾಪ್ತಿಯನ್ನು ಹೊಂದಿದ್ದು ಸಮರ್ಥ ಆರ್ಥಿಕ ಸಂಸ್ಥೆಯಾಗಿ ಬೆಳೆದು ನಿಂತಿದೆ. 2012ರ ಎ.29ರಂದು ಮೆಲ್ಕಾರ್ ಬಿರ್ವ ಸೆಂಟರ್‌ನಲ್ಲಿ ಕೇಂದ್ರ ಮಾಜಿ ಸಹಾಯಕ ವಿತ್ತ ಸಚಿವರಾದ ಬಿ.ಜನಾರ್ಧನ ಪೂಜಾರಿ ಅವರ ದಿವ್ಯ ಹಸ್ತದಿಂದ ಉದ್ಘಾಟನೆಗೊಂಡ ಸಂಸ್ಥೆಯು ಅವರ ಆಶೀರ್ವಾದದ ಫಲವಾಗಿಯೇ ಗ್ರಾಹಕ ಬಂಧುಗಳಿಗೆ ಉತ್ತಮ ಸೇವೆ ನೀಡುತ್ತಿದೆ. ಒಂದು ದಶಕದ ಸೇವೆಯ ಬಳಿಕ ಪ್ರಸ್ತುತ ಒಟ್ಟು 10060 ಎ,ಸಿ,ಇ ವರ್ಗದ ಸದಸ್ಯರನ್ನು ಹೊಂದಿದೆ. 2025-26 ನೇ ಸಾಲಿನಲ್ಲಿ ಸೊಸೈಟಿಯು 130.67 ಕೋ.ರೂ. ಠೇವಣಿ ಸಂಗ್ರಹಿಸಿ 52.73 ಕೋ.ರೂ. ಸಾಲ ಹಂಚಿಕೆ ಮಾಡಿ 47.09 ಕೋ.ರೂ. ಸಾಲ ವಸೂಲಾತಿ ಮಾಡಿದೆ. ಒಟ್ಟು 246.49 ಕೋ.ರೂ. ವ್ಯವಹಾರ ನಡೆಸಿ 42.75 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಅಡಿಟ್ ವರ್ಗಿಕರಣದಲ್ಲಿ ‘ಎ’ ಶ್ರೇಣಿಯನ್ನು ಹೊಂದಿರುತ್ತದೆ.
ಸೊಸೈಟಿಯು ಮೆಲ್ಕಾರ್‌ನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿದ್ದು ಪಚ್ಚಿನಡ್ಕ, ಕಕ್ಯಪದವು, ಅಜಿಲಮೊಗರು, ತುಂಬೆ, ವಿಟ್ಲ ಮೊದಲಾದ ಗ್ರಾಮಾಂತರ ಪ್ರದೇಶದಲ್ಲಿ ಶಾಖೆಗಳನ್ನು ಹೊಂದುವ ಮೂಲಕ ಹಲವಾರು ಮಂದಿಗೆ ಉದ್ಯೋಗವನ್ನು ನೀಡುವ ಕೆಲಸವಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲೇ ಶಾಖೆಗಳನ್ನು ತೆರೆಯುವ ಮೂಲಕ ವಾಣಿಜ್ಯ ಬ್ಯಾಂಕುಗಳಿಂದ ಪೂರೈಸಲಾಗದ ನೆರವನ್ನು ಗ್ರಾಹಕ ಬಂಧುಗಳಿಗೆ ನೀಡಿ ಅವರ ಪ್ರೀತಿಗೆ ಪಾತ್ರವಾಗಿರುವ ಸಂಸ್ಥೆ ಇದೀಗ ಏಳನೇ ಕಬಕ ಶಾಖೆಯ ಉದ್ಘಾಟನಾ ಸಂಭ್ರಮದಲ್ಲಿದೆ.
ಒಂದು ಆರ್ಥಿಕ ಶಕ್ತಿಯನ್ನೊಳಗೊಂಡ ಗಟ್ಟಿ ಸಂಸ್ಥೆಯಾಗಿ ಬೆಳೆದು ನಿಂತಿದೆ

ದಶಕಗಳ ಹಿಂದೆ ಶ್ರೀ ಗುರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ., ಮೆಲ್ಕಾರ್, ಪಾಣೆಮಂಗಳೂರು ಎಂಬ ಸಹಕಾರಿ ರಂಗದ ಒಂದು ಉತ್ತಮ ಸಂಸ್ಥೆಯನ್ನು ನಾವು ಹುಟ್ಟುಹಾಕಿದ್ದೆವು. ನಮ್ಮ ಸಂಸ್ಥೆಯ ಗ್ರಾಹಕ ದೇವರುಗಳ ನಂಬಿಕೆ, ವಿಶ್ವಾಸದ ದ್ಯೋತಕವಾಗಿ ನಮ್ಮ ಈ ಸಹಕಾರಿ ಸಂಸ್ಥೆ ನಮ್ಮ ತಾಲೂಕಿನಾದ್ಯಂತ ಒಂದು ಆರ್ಥಿಕ ಶಕ್ತಿಯನ್ನೊಳಗೊಂಡ ಗಟ್ಟಿ ಸಂಸ್ಥೆಯಾಗಿ ಇಂದು ಬೆಳೆದು ನಿಂತಿದೆ. ಇದೀಗ ಏಳನೇ ಕಬಕ ಶಾಖೆಯ ಉದ್ಘಾಟನಾ ಸಂಭ್ರ.ದಲ್ಲಿದ್ದೇವೆ.
ಕೆ. ಹರಿಕೃಷ್ಣ ಬಂಟ್ವಾಳ್ ಅಧ್ಯಕ್ಷರು










