ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ನಮಾಮಿ ಭಾರತಮ್’ – ವಂದೇ ಮಾತರಂ 150ನೇ ವರ್ಷಾಚರಣೆ ಹಾಗೂ ಸಾಮೂಹಿಕ ಗಾಯನ

0

ಪುತ್ತೂರು: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ವಿದ್ಯಾ ಭಾರತಿ, ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನದ ‘ನಮಾಮಿ ಭಾರತಮ್’ ಅಭಿಯಾನದಡಿ, ರಾಷ್ಟ್ರ ಗಾನ ‘ವಂದೇ ಮಾತರಂ’ನ 150ನೇ ವರ್ಷಾಚರಣೆಯ ಅಂಗವಾಗಿ ಸಾಮೂಹಿಕ ವಂದೇ ಮಾತರಂ ಗಾಯನ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಒಟ್ಟು 2,180 ವಿದ್ಯಾರ್ಥಿಗಳು ಒಂದೇ ಧ್ವನಿಯಲ್ಲಿ ದೇಶಭಕ್ತಿಯ ಶ್ರದ್ಧೆಯೊಂದಿಗೆ ವಂದೇ ಮಾತರಂ ಗೀತೆಯನ್ನು ಗಾಯನ ಮಾಡಿದರು. ಶಾಲಾ ಆಡಳಿತ ಮಂಡಳಿಯ ಸದಸ್ಯರು, 3 ಜನ ಇತರ ಅತಿಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ವಿಭಾಗದ ಒಟ್ಟು 120 ಸಿಬ್ಬಂದಿವರ್ಗದವರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವ ಈ ಅಭಿಯಾನವು ಶಾಲಾ ಆವರಣದಲ್ಲಿ ಅಭೂತಪೂರ್ವ ದೇಶಭಕ್ತಿಯ ವಾತಾವರಣವನ್ನು ನಿರ್ಮಿಸಿತು.

LEAVE A REPLY

Please enter your comment!
Please enter your name here